ಕಾಂಗ್ರೆಸ್ ಪಕ್ಷದಲ್ಲಿ ರಾಜೀನಾಮೆ ಪರ್ವಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಅಧ್ಯಕ್ಷರ ಚುನಾವಣೆ ಘೋಷಿಸಿದೆ. ಗುಲಾಮ್ ನಬಿ ಆಜಾದ್ ರಾಜೀನಾಮೆ ಬಳಿಕ ಈಗಾಗಲೇ 64ಕ್ಕೂ ಹೆಚ್ಚು ಹಿರಿಯ ನಾಯಕರು ಕಾಂಗ್ರೆಸ್ ಪತ್ರಕ್ಕೆ ಗುಡ್‌ಬೈ ಹೇಳಿದ್ದಾರೆ. ಇದೀಗ ರಾಜೀನಾಮೆ ವಿಚಾರದಲ್ಲಿ ಕಾಂಗ್ರೆಸ್ ಅತೀ ದೊಡ್ಡ ಆಘಾತ ಎದುರಿಸುತ್ತಿದೆ. 5 ಸಾವಿರ ಕಾರ್ಯಕರ್ತರು ರಾಜೀನಾಮೆಗೆ ಸಜ್ಜಾಗಿದ್ದಾರೆ.
ನವದೆಹಲಿ(ಸೆ.01): ಕಾಂಗ್ರೆಸ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ರಾಜೀನಾಮೆ ಬಳಿಕ ಕಾಂಗ್ರೆಸ್‌ನಲ್ಲಿ ತಳಮಳ ಆರಂಭಗೊಂಡಿದೆ. ಗುಲಾಮ್ ನಬಿ ಆಜಾದ್ ಬೆಂಬಲಿಸಿ ಈಗಾಗಲೇ 64ಕ್ಕೂ ಹೆಚ್ಚು ಕಾಂಗ್ರೆಸ್ ಹಿರಿಯ ನಾಯಕರು ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ರಾಜೀನಾಮೆ ಪರ್ವಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಪಕ್ಷದ ಅಧ್ಯಕ್ಷರ ಚುನಾವಣೆ ಘೋಷಿಸಿದೆ. ಈ ಮೂಲಲಕ ಪಕ್ಷದಲ್ಲಿನ ಅಸಮಾಧಾನವನ್ನು ಕಡಿಮೆ ಮಾಡಿ ಮುಂಬರುವ ಚುನಾವಣೆಗೆ ಒಗ್ಗಟ್ಟಿನಿಂದ ಹೋರಾಡುವ ಲೆಕ್ಕಾಚಾರದಲ್ಲಿದೆ. ಆದರೆ ನಾಯಕರ ರಾಜೀನಾಮೆಯಿಂದ ಕಂಗಾಲಾಗಿರುವ ಕಾಂಗ್ರೆಸ್‌ಗೆ ಇದೀಗ ಕಾರ್ಯಕರ್ತರೇ ರಾಜೀನಾಮೆ ನೀಡುತ್ತಿದ್ದಾರೆ. ಇದೀಗ ದೇಶಾದ್ಯಂತ 5,000 ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಿಗಿದ್ದಾರೆ. ಗುಲಾಮ್ ನಬಿ ಆಜಾದ್ ಬೆಂಬಲಿಸಿ ಈ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ.
ಜಮ್ಮು ಕಾಶ್ಮೀರದ(Jammu And 1,000 ಕಾಂಗ್ರೆಸ್ ಕಾರ್ಯಕರ್ತರು ಇಂದು ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ. ಇಂದು ಸಂಜೆ ರಾಜೀನಾಮೆ(Resignatiion) ಪತ್ರವನ್ನು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷರಿಗೆ ರವಾನಿಸಲಿದ್ದಾರೆ. ಇದೇ ವೇಳ ದೇಶಾದ್ಯಂತ 4,000 ಕಾರ್ಯಕರ್ತರು ಗುಲಾಮ್ ನಬಿ ಅಜಾದ್ ಬೆಂಬಲಿಸಿ ರಾಜೀನಾಮೆ(Gulam Nabi Azad Resign) ನೀಡಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಕಾಂಗ್ರೆಸ್‌ಗೆ ಭಾರಿ ಹಿನ್ನಡೆ, ಮಾಜಿ ಉಪ ಮುಖ್ಯಮಂತ್ರಿ ಸೇರಿ 50 ಹಿರಿಯ ನಾಯಕರು ರಾಜೀನಾಮೆ!
ಹಿಮಾಚಲ ಪ್ರದೇಶ(Himachal Pradesh Election) ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಗೆ(Gujarat Assembly Election) ಕೆಲ ದಿನಗಳಿರುವಾಗಲೇ ಕಾಂಗ್ರೆಸ್ ಪಕ್ಷದ ರಾಜೀನಾಮೆ ಪರ್ವ ತಾರಕಕ್ಕೇರಿದೆ. ಇದು ಕಾಂಗ್ರೆಸ್‌ಗೆ(Congress) ತೀವ್ರ ಹಿನ್ನಡೆ ತಂದಿದೆ. ಇನ್ನು 2023ರಲ್ಲಿ ಜಮ್ಮು ಮತ್ತು ಕಾಶ್ಮೀರ ಚುನಾವಣೆ ನಡೆಯಲಿದೆ. ಗುಲಾಮ್ ನಬಿ ಆಜಾದ್ ರಾಜೀನಾಮೆ, ಬಳಿಕ 64ಕ್ಕೂ ಹೆಚ್ಚು ಹಿರಿಯ ನಾಯಕರ ರಾಜೀನಾಮೆಯಿಂದ ಕಣಿವೆ ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಇಲ್ಲದಾಗಿದೆ.
ಇದರ ನಡುವೆ ಮತ್ತೊಂದು ಬೆಳವಣಿಗೆ ಕಾಂಗ್ರೆಸ್ ಬುಡವನ್ನೇ ಅಲುಗಾಡಿಸಿದೆ. ಕಾಂಗ್ರೆಸ್ ಹಿರಿಯ ನಾಯಕರಾದ ಭೂಪಿಂದರ್ ಸಿಂಗ್ ಗೂಡ, ಪೃಥ್ವಿರಾಜ್ ಚವ್ಹಾಣ್ ಸೇರಿದಂತೆ ಕೆಲ ಪ್ರಮುಖ ನಾಯಕರು ಗುಲಾಮ್ ನಬಿ ಆಜಾದ್ ಭೇಟಿಯಾಗಿದ್ದಾರೆ. ಹೀಗಾಗಿ ಮೂಲೆಗುಂಪಾಗಿರುವ ಹಾಗೂ ಗಾಂಧಿ ಅಧಿಕಾರದಿಂದ ಬೇಸತ್ತಿರುವ ಇನ್ನೂ ಕೆಲ ನಾಯಕರು ಕಾಂಗ್ರೆಸ್ ತೊರೆಯುವ ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ಲಾನ್ ಮಾಡಿದೆ. ಅಸಮಾಧಾನಗೊಂಡಿರುವ ನಾಯಕರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ(Congress President Election) ಮನ ಒಲಿಸಲಾಗುತ್ತಿದೆ.
ಮತ್ತೋರ್ವ ಹಿರಿಯ ನಾಯಕ ಕಾಂಗ್ರೆಸ್‌ಗೆ ಗುಡ್ ಬೈ: ಸಿದ್ದು, ಡಿಕೆಶಿ ಭೇಟಿಯಾಗಿ ರಾಜೀನಾಮೆ ಘೋಷಣೆ
ಆಜಾದ್ ಜೊತೆ ಜಿ 23 ನಾಯಕರ ಚರ್ಚೆ
ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದ ಗುಲಾಂ ನಬಿ ಆಜಾದ್ ಅವರನ್ನು, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಈ ಹಿಂದೆ ಬಂಡೆದಿದ್ದ ಜಿ 23 ನಾಯಕರ ಪೈಕಿ ಕೆಲವರು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪಕ್ಷದ ಸುಧಾರಣೆಗಾಗಿ ನ್ಯಾಯಸಮ್ಮತ ಚುನಾವಣೆ ಸೇರಿದಂತೆ ಆಮೂಲಾಗ್ರ ಬದಲಾವಣೆಗೆ ಆಗ್ರಹಿಸಿ ಆಜಾದ್, ಶರ್ಮಾ ಸೇರಿದಂತೆ 23 ನಾಯಕರು 2020ರಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.ಕಾಂಗ್ರೆಸ್‌ನ ಹಿರಿಯ ನಾಯಕರಾದ ಆನಂದ್ ಶರ್ಮಾ, ಭೂಪಿಂದರ್ ಸಿಂಗ್ ಹೂಡಾ, ಪೃಥ್ವಿರಾಜ್ ಚೌಹಾಣ್, ನವದೆಹಲಿಯಲ್ಲಿ ಆಜಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಜಿ 23 ಬಣದ ಮುಂದಿನ ಕಾರ್ಯತಂತ್ರ, ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಸಂಘಟನಾ ಚುನಾವಣೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಸ್ಪರ್ಧೆ ವಿಷಯ ಮೊದಲಾದ ಸಂಗತಿಗಳನ್ನು ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
