Asianet Suvarna News Asianet Suvarna News

ಭೂಪೇಂದ್ರ ಭಾಯಿ ಪಟೇಲ್ ಗುಜರಾತ್‌ನ ಹೊಸ ಮುಖ್ಯಮಂತ್ರಿ!

* ಚುನಾವನಾ ಹೊಸ್ತಿಲಲ್ಲಿ ಗುಜರಾತ್‌ಗೆ ಹೊಸ ಸಿಎಂ

* ಶನಿವಾರವಷ್ಟೇ ರಾಜೀನಾಮೆ ನೀಡಿದ್ದ ವಿಜಯ್ ರೂಪಾನಿ

* ಗುಜರಾತ್ ಸಿಎಂ ಆಗಿ ಭೂಪೇಂದ್ರ ಭಾಯಿ ಪಟೇಲ್ ಆಯ್ಕೆ

Bhupendrabhai Patel elected as new CM of Gujarat pod
Author
Bangalore, First Published Sep 12, 2021, 4:40 PM IST
  • Facebook
  • Twitter
  • Whatsapp

ಅಹಮದಾಬಾದ್(ಸೆ.12): ವಿಜಯ್ ರೂಪಾನಿ ರಾಜೀನಾಮೆಯಿಂದ ತೆರವಾಗಿದ್ದ ಗುಜರಾತ್‌ನ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಹೆಸರು ಆಯ್ಜೆಯಾಗಿದೆ. ಭೂಪೇಂದ್ರ ಭಾಯಿ ಪಟೇಲ್ ರಾಜ್ಯದ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಹಿರಿಯ ನಾಯಕರ ಸಮ್ಮುಖದಲ್ಲಿ, ಭಾನುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ಸಿಎಂ ಆಯ್ಕೆ ಮಾಡಲಾಗಿದೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಭೂಪೇಂದ್ರಭಾಯಿ ರಜನಿಕಾಂತ್ ಪಟೇಲ್ ಅವರು ಅಹಮದಾಬಾದ್ ಜಿಲ್ಲೆಯ ಘಟ್ಲೋಡಿಯಾ ಕ್ಷೇತ್ರದಿಂದ ಕಾಂಗ್ರೆಸ್ ನ ಶಶಿಕಾಂತ್ ವಾಸುದೇವಭಾಯ್ ಪಟೇಲ್ ಅವರನ್ನು ಸೋಲಿಸಿದ್ದರು ಎಂಬುವುದು ಉಲ್ಲೇಖನೀಯ.

"

ರಾಜೀನಾಮೆ ಶಾಕ್ ಬಳಿಕ ಮನಬಿಚ್ಚಿ ಮಾತನಾಡಿದ ಸಿಎಂ ವಿಜಯ್ ರೂಪಾನಿ!

ಪಕ್ಷದ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ

ವಿಜಯ್ ರೂಪಾನಿ ರಾಜೀನಾಮೆ ಬಳಿಕ, ಪಕ್ಷದ ಪ್ರಧಾನ ಕಚೇರಿಯಲ್ಲಿ ಭಾನುವಾರ ಗುಜರಾತ್‌ನ ಹೊಸ ಸಿಎಂ ಯಾರಾಗಬೇಕು ಎಂಬ ಬಗ್ಗೆ ಸಭೆ ನಡೆದಿತ್ತು. ಕೇಂದ್ರೀಯ ವೀಕ್ಷಕರಾಗಿ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ತರುಣ್ ಚುಗ್ ನೂತನ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಸಿಎಂ ರೇಸ್‌ನಲ್ಲಿ ಯಾರು?

ಜೈನ ಸಮುದಾಯಕ್ಕೆ ಸೇರಿದ ರೂಪಾನಿ ರಾಜೀನಾಮೆ ಬೆನ್ನಲ್ಲೇ ಈ ಹುದ್ದೆಯ ರೇಸ್‌ನಲ್ಲಿ ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಖಾತೆ ಸಚಿವರಾಗಿ ಆಯ್ಕೆಯಾದ ಮೋದಿ ಅವರ ಪರ​ಮಾಪ್ತ ಮನ್‌ಸುಖ್‌ ಮಾಂಡವೀಯ, ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌, ಸಚಿವ ಆರ್‌.ಸಿ. ಫಲ್ಡು, ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್‌. ಪಾಟೀಲ್‌, ಹಾಲಿ ಲಕ್ಷ​ದ್ವೀಪ ಕೇಂದ್ರಾ​ಡ​ಳಿ​ತದ ಮುಖ್ಯ​ಸ್ಥ ಪ್ರಫುಲ್‌ ಪಟೇ​ಲ್‌ ಹಾಗೂ ಕೇಂದ್ರ ಸಚಿವ ಪುರು​ಷೋ​ತ್ತಮ ರೂಪಾ​ಲಾ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಈ ಬಾರಿ ಪಾಟಿದಾರ್‌ (ಪ​ಟೇ​ಲ್‌) ಸಮುದಾಯಕ್ಕೆ ಸಿಎಂ ಪಟ್ಟನೀಡುವ ಮೂಲಕ, ಮುಂದಿನ ಚುನಾವಣೆಯಲ್ಲಿ ಆ ಸಮುದಾಯದ ಬೆಂಬಲವನ್ನು ತನ್ನಲ್ಲೇ ಉಳಿಸಿಕೊಳ್ಳುವ ಯತ್ನವನ್ನು ಪಕ್ಷ ಮಾಡಲಿದೆ ಎನ್ನಲಾಗುತ್ತಿದೆ. ಫಲ್ಡು ಹಾಗೂ ನಿತಿನ್‌ ಪಟೇಲ್‌ ಪಾಟಿ​ದಾರ್‌ ಸಮು​ದಾ​ಯ​ದ​ವ​ರು.

"

ಮೋದಿ ತವರಲ್ಲಿ ರಾಜಕೀಯ ಬೆಳವಣಿಗೆ; ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ!

ಬಿಜೆಪಿ ಸಿಎಂ ಬದ​ಲಾ​ದ 3ನೇ ರಾಜ್ಯ

ಈ ಮೊದಲು ಉತ್ತರಾಖಂಡ ಮತ್ತು ಕರ್ನಾಟಕದಲ್ಲೂ ಸಿಎಂ ಬದಲಾವಣೆ ಆಗಿತ್ತು. ಉತ್ತ​ರಾ​ಖಂಡ​ದಲ್ಲಿ ತೀರ್ಥ​ಸಿಂಗ್‌ ರಾವತ್‌ ಹಾಗೂ ಕರ್ನಾ​ಟ​ಕ​ದಲ್ಲಿ ಬಿ.ಎಸ್‌. ಯಡಿ​ಯೂ​ರಪ್ಪ ಅವ​ರನ್ನು ಬದ​ಲಿಸಿ ಯುವ ಪೀಳಿ​ಗೆಯ ಪುಷ್ಕರ್‌ ಸಿಂಗ್‌ ಧಾಮಿ ಹಾಗೂ ಬಸ​ವ​ರಾಜ ಬೊಮ್ಮಾಯಿ ಅವ​ರಿಗೆ ಮಣೆ ಹಾಕ​ಲಾ​ಗಿತ್ತು.

ಹೊಸ ಶಕ್ತಿ ಬೇಕು

ಕಾಲಕಾಲಕ್ಕೆ ಹೊಣೆಗಾರಿಕೆ ಬದಲಾಯಿಸುವ ಸಂಪ್ರದಾಯ ಬಿಜೆಪಿಯಲ್ಲಿದೆ. ಅದರಂತೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಹೊಸ ಶಕ್ತಿ ಹಾಗೂ ಉತ್ಸಾ​ಹ​ದೊಂದಿ​ಗೆ ಹೊಸ ನೇತೃ​ತ್ವ​ದಲ್ಲಿ ಇನ್ನು ಮುನ್ನ​ಡೆ​ಯ​ಬೇ​ಕಿ​ದೆ. ಮುಂದೆ ಪಕ್ಷ ವಹಿಸಿದ ಕಾರ್ಯ ನಿರ್ವಹಿಸಲು ಬದ್ಧ. ನನ್ನಂಥ ಸಾಮಾನ್ಯ ವ್ಯಕ್ತಿಗೆ ರಾಜ್ಯದ ಮುಖ್ಯಮಂತ್ರಿಯಾಗಿ 5 ವರ್ಷ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು.

- ವಿಜಯ್‌ ರೂಪಾನಿ, ನಿರ್ಗಮಿತ ಸಿಎಂ

"

 

Follow Us:
Download App:
  • android
  • ios