Asianet Suvarna News Asianet Suvarna News

ಖಿನ್ನತೆಯಿಂದ ಬಳಲ್ತಿದ್ದ ಯುವಕ, ಮುಖಕ್ಕೆ ಪ್ಲಾಸ್ಟಿಕ್ ಕಟ್ಟಿ, ನೈಟ್ರೋಜನ್ ಗ್ಯಾಸ್‌ ಆನ್ ಮಾಡಿ ಆತ್ಮಹತ್ಯೆ

ಖಿನ್ನತೆ ಇತ್ತೀಚಿನ ಯುವಜನತೆಯನ್ನು ಕಾಡ್ತಿರೋ ಸಾಮಾನ್ಯ ಸಮಸ್ಯೆ. ಇದರಿಂದ ಸಾವನ್ನಪ್ಪುತ್ತಿರೋ ಪ್ರಕರಣಗಳು ಹೆಚ್ಚಾಗ್ತಿದೆ. ಹಾಗೆಯೇ ಇಲ್ಲೊಬ್ಬ ಯುವಕ ನೈಟ್ರೋಜನ್ ಗ್ಯಾಸ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Bhopal Youth Battling Depression Uses Nitrogen Gas To End Life Vin
Author
First Published May 30, 2024, 5:10 PM IST

ಮಧ್ಯಪ್ರದೇಶ: ಯುವಕನೊಬ್ಬ ನೈಟ್ರೋಜನ್ ಗ್ಯಾಸ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಮುಖಕ್ಕೆ ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ಬಾಯಿಗೆ ನೈಟ್ರೋಜನ್ ಗ್ಯಾಸ್ ಸಿಲಿಂಡರ್ ಪೈಪ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೊದಲು ಪ್ಲಾಸ್ಟಿಕ್ ಚೀಲವನ್ನು ಬಾಯಿಗೆ ಕಟ್ಟಿಕೊಂಡು ನಂತರ ಸಿಲಿಂಡರ್‌ ಟ್ಯೂಬ್ ಹಾಕಿಕೊಂಡು ಗ್ಯಾಸ್ ಆನ್ ಮಾಡಿರುವುದು ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಜತ್ಖೇಡಿಯ ನಿರುಪಮ್ ರಾಯಲ್ ಕ್ಯಾಂಪಸ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಖಿನ್ನತೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಕುಟುಂಬದ ಎಂಟು ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ಮಾಹಿತಿಯ ಪ್ರಕಾರ, ಲಕ್ನೋ ಮೂಲದ ಸಿದ್ಧಾರ್ಥ್ ಖುರಾನಾ (32) ಎಂಬ ಯುವಕ ತನ್ನ ಗೆಳತಿಯೊಂದಿಗೆ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದನು. ಘಟನೆ ನಡೆಯುವ ಸುಮಾರು 10-12 ದಿನಗಳ ಹಿಂದೆ ಆತನ ಗೆಳತಿ ಮನೆಗೆ ಹೋಗುವುದಾಗಿ ಹೇಳಿ ಸಿದ್ದಾರ್ಥನನ್ನು ಬಿಟ್ಟು ಹೋಗಿದ್ದಳು. ಮಂಗಳವಾರ ರಾತ್ರಿ ಮೃತನ ಸ್ನೇಹಿತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮಹಡಿಯಲ್ಲಿ ಶವ ಪತ್ತೆಯಾಗಿದ್ದು, ಎರಡು ದಿನಗಳಿಂದ ಆತ ತನ್ನ ಕೊಠಡಿಯಿಂದ ಹೊರ ಬಂದಿರಲಿಲ್ಲ ಎಂದು ತಿಳಿದುಬಂದಿದೆ. 

ಸಿದ್ಧಾರ್ಥ್ ಐಟಿ ವೃತ್ತಿಪರನಾಗಿದ್ದು, ನವೆಂಬರ್ ವರೆಗೆ ಜಾವಾ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ದ. ಕಳೆದ ಹಲವು ತಿಂಗಳಿನಿಂದ ಭೋಪಾಲ್‌ನಲ್ಲೇ ಇದ್ದು ಅಪಾರ್ಟ್‌ಮೆಂಟ್‌ನಿಂದಲೇ ಕೆಲಸ ಮಾಡುತ್ತಿದ್ದ. ಸಿದ್ಧಾರ್ಥ್‌ ದೀರ್ಘಕಾಲದಿಂದ ಬೆನ್ನುಮೂಳೆ ಮತ್ತು ಬೆನ್ನುನೋವಿನಿಂದ ಬಳಲುತ್ತಿದ್ದ. ಇದು ಅವನ ಖಿನ್ನತೆಗೆ ಕಾರಣವಾಯಿತು ಎಂದು ಸಿದ್ಧಾರ್ಥ್ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಸಿದ್ಧಾರ್ಥ್ ಮೂಲತಃ ಲಕ್ನೋದ ಮಹಾನಗರ ಕಾಲೋನಿಯವರು. ತಂದೆ ಲಕ್ನೋದಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದಾರೆ. 

ಡೆತ್‌ನೋಟಲ್ಲಿ ಹೆಸರಿದ್ದಾಕ್ಷಣ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದಂತಲ್ಲ- ಹೈಕೋರ್ಟ್

ಘಟನಾ ಸ್ಥಳದಲ್ಲಿ ಪತ್ತೆಯಾದ ಸೂಸೈಡ್ ನೋಟ್ ಅನ್ನು ವಿಶ್ಲೇಷಣೆಗಾಗಿ ಕೈಬರಹ ತಜ್ಞರಿಗೆ ಕಳುಹಿಸಲಾಗಿದೆ. ಸಿದ್ಧಾರ್ಥ್ ಹಲವಾರು ತಿಂಗಳುಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಅವರ ಸ್ನೇಹಿತ ತಿಳಿಸಿದ್ದಾರೆ. ಆತನ ಕೋಣೆಯಲ್ಲಿ ಕೆಲವು ಔಷಧಿಗಳ ಜೊತೆಗೆ ಮನೋವೈದ್ಯರ ಪ್ರಿಸ್ಕ್ರಿಪ್ಷನ್ ಪೊಲೀಸರಿಗೆ ಸಿಕ್ಕಿದೆ.. ಪ್ರಿಸ್ಕ್ರಿಪ್ಷನ್‌ಗಳ ಆಧಾರದ ಮೇಲೆ ಅವರು ಯಾವ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಿದ್ಧಾರ್ಥ್ ಗೆಳತಿಯ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios