ಹಾಲು ಮಾರೋಕೆ ಸೈಕಲ್, ಬೈಕ್,ಆಟೋ ಇರ್ಲಿ ಜೀಪ್, ಟೆಂಪೋದಲ್ಲಿ ಹೋಗೋದನ್ನು ನೋಡಿರ್ತೀರಿ. ಹೆಲಿಕಾಪ್ಟರ್‌ನಲ್ಲಿ ಹಾಲು ಮಾರೋರನ್ನು ನೋಡಿದ್ದೀರಾ..? ಇಲ್ಲಿದ್ದಾರೆ ನೋಡಿ

ಭೀವಂಡಿ(ಫೆ.17): ರೈತರೊಬ್ಬರು ಹಾಲು ಮಾರೋಕೆ ಹೋಗೋಕೆ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಮಾಹಾರಾಷ್ಟ್ರದ ಭೀವಂಡಿಯ ಹೈನುಗಾರರೊಬ್ಬರು ತಮ್ಮ ಡೈರಿ ಉದ್ಯಮಕ್ಕಾಗಿ ದೇಶಾದ್ಯಂತ ಓಡಾಡಾಬೇಕಾಗುತ್ತದೆ. ಇದಕ್ಕೆ ಇವರು ಮಾಡಿದ ಐಡಿಯಾ ಏನು ಗೊತ್ತಾ..?

ಸ್ವತಃ ಒಬ್ಬ ಬ್ಯುಲ್ಡರ್ ಆಗಿರೋ ಜನಾರ್ಧನ್ ಬೋಯಿರ್ ಇತ್ತೀಚೆಗೆ ಡೈರಿ ಬ್ಯುಸಿನೆಸ್ ಆರಂಭಿಸಿದ್ದರು. ಈ ಹೊಸ ಉದ್ಯಮದಿಂದಾಗಿ ಇವರಿಗೆ ದಿನನಿತ್ಯ ದೇಶದ ಹಲವು ಭಾಗಕ್ಕೆ ಓಡಾಡುವ ಅಗತ್ಯ ಬಂದಿದೆ. ಅದಕ್ಕಾಗಿ ಇವರು ಖರೀದಿಸಿದ್ದು 30 ಕೋಟಿ ರೂಪಾಯಿಯ ಹೆಲಿಕಾಪ್ಟರ್.

ಸನ್ಮಾನ ಕಾರ್ಯಕ್ರಮಕ್ಕೆ ಅಪ್ಪನ ಆಟೋದಲ್ಲಿ ಬಂದ ಮಿಸ್‌ ಇಂಡಿಯಾ ರನ್ನರ್ ಅಪ್ ಮಾನ್ಯಾ!

ತಮ್ಮ ಉದ್ಯಮ ಪ್ರಯಾಣಗಳನ್ನು ಸರಳ ಮತ್ತು ಸುಲಭವಾಗಿಸಲು ಜನಾರ್ಧನ್ ಕಂಡುಕೊಂಡ ಮಾರ್ಗವಿದು. ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್ ಸೇರಿ ಹಲವು ಕಡೆಗೆ ನಾನು ಪ್ರಯಾಣಿಸಬೇಕಾಗುತ್ತದೆ. ಬಹಳಷ್ಟು ಸ್ಥಳಗಳಲ್ಲಿ ಏರ್ಪೋರ್ಟ್ ಸೌಲಭ್ಯವಿಲ್ಲ. ಇದರಿಂದ ಬಹಳಷ್ಟು ಹೊತ್ತು ಪ್ರಯಾಣಕ್ಕೇ ವ್ಯರ್ಥವಾಗುತ್ತಿತ್ತು ಎಂದಿದ್ದಾರೆ ಜನಾರ್ಧನ್.

ಪ್ರಯಾಣಕ್ಕೆ ಸಮಯ ಹೆಚ್ಚಾಗಿ ಬೇಕಾಗಿರುವುದರಿಂದ ಇವರು ಹೆಲಿಕಾಪ್ಟರ್ ಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಇದು ಅವರ ಸ್ನೇಹಿತರ ಸಲಹೆಯಂತೆ.

ಟೂಲ್‌ಕಿಟ್‌ಗಾಗಿ 70 ಮಂದಿ ಝೂಮ್ ಸಭೆ?: ದಿಶಾ ಸೇರಿ ಹಲವರು ಭಾಗಿ?

ಭಾನುವಾರ ಹೆಲಿಕಾಪ್ಟರ್ ಟ್ರೈಯಲ್ಗೆ ಜನಾರ್ಧನ್ ಅವರ ಗ್ರಾಮಕ್ಕೆ ಕಳುಹಿಸಿಕೊಡಲಾಗಿತ್ತು. ಜನಾರ್ಧನ್ ಪಂಚಾಯತ್ ಸದಸ್ಯರಿಗೂ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಲು ಅವಕಾಶ ಕೊಟ್ಟಿದ್ದಾರೆ.

ಹೆಲಿಕಾಪ್ಟರ್ ಮಾರ್ಚ್ 15ಕ್ಕೆ ಇವರಿಗೆ ಸಿಗಲಿದೆ. ಕೃಷಿ, ಡೈರಿ, ರಿಯಲ್ ಎಸ್ಟೇಟ್ ಉದ್ಯಮದ ಜೊತೆ ಜನಾರ್ಧನ್ ಅವರಿಗೆ 100 ಕೋಟಿಗೂ ಹೆಚ್ಚು ಆಸ್ತಿ ಇದೆ.