ಭಾರತ್ ಬಂದ್ ದಿನವೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರೈತರ ಜೊತೆ ಸಭೆ ನಡೆಸುತ್ತಿದ್ದಾರೆ. ಪಟ್ಟು ಬಿಡದ ರೈತ ನಾಯಕರು ಅಮಿತ್ ಶಾಗೆ ಕೇವಲ ಎರಡೇ ಆಯ್ಕೆ ಮುಂದಿಟ್ಟಿದ್ದಾರೆ.
ನವದೆಹಲಿ(ಡಿ.08): ಕೇಂದ್ರ ಸರ್ಕಾರದ ಕೃಷಿ ಮಸೂದೆ ಹಿಂಪೆಡಯುಲ ರೈತರು ನಡೆಸುತ್ತಿರುವ ಪ್ರತಿಭಟನೆ, ಭಾರತ್ ಬಂದ್ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ. ಭಾರತ್ ಬಂದ್ ದಿನವೇ ಅಮಿತ್ ಶಾ, ರೈತ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದ್ದರು. ಇದೀಗ ರೈತ ನಾಯಕರು ಅಮಿತ್ ಶಾ ಬೇಟಿಯಾಗಿದ್ದಾರೆ.
ಭಾರತ್ ಬಂದ್ ನಡುವೆ ಸಂಜೆ 7 ಗಂಟೆಗೆ ರೈತ ನಾಯಕರ ಸಭೆ ಕರೆದ ಅಮಿತ್ ಶಾ!.
ಭೇಟಿಗೂ ಮುನ್ನ ರೈತರ ಸಂಘಟನೆ ನಾಯಕರು ಎಚ್ಚರಿಕೆ ನೀಡಿದ್ದಾರೆ. 3 ಕೃಷಿ ಮಸೂದೆಗಳನ್ನು ಹಿಂಪೆಡಯಲು ನಾವು ಒತ್ತಾಯಿಸಲಿದ್ದೇವೆ. ಇಲ್ಲಿ ಅಮಿತ್ ಶಾಗೆ ಕೇವಲ ಎರಡೇ ಆಯ್ಕೆಗಳನ್ನು ನೀಡುತ್ತೇವೆ. ನಮ್ಮ ಬೇಡಿಕೆಗೆ ಯೆಸ್ ಅಥವಾ ನೋ ಹೇಳುವ ಅವಕಾಶವಷ್ಟೇ ಎಂದು ರೈತ ನಾಯಕರು ಹೇಳಿದ್ದಾರೆ.
ಇದೇ ವೇಳೆ ನಾವು ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಕೇಳಿದ್ದೇವೆ. ಆದರೆ ಕೇಂದ್ರ ಸರ್ಕಾರ ಸೂಚಿಸಿದ ಬುರಾರಿಯಲ್ಲಿ ಪ್ರತಿಭಟನೆ ಮಾಡಿ ಹರ್ಯಾಣ ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಕೊಡುವುದಿಲ್ಲ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈತ ಮುಖಂಡ ಮನ್ಸಾ ರುದ್ರು ಸಿಂಗ್ ಹೇಳಿದ್ದಾರೆ.
ರೈತ ನಾಯಕರು ಹಾಗೂ ಅಮಿತ್ ಶಾ ನಡುವಿನ ಸಭೆ ತೀವ್ರ ಕುತೂಹಲ ಕೆರಳಿಸಿದೆ. ಮಾತುಕತೆ ಫಲಪ್ರದವಾಗುತ್ತಾ? ರೈತರು ಪ್ರತಿಭಟನೆಗೆ ಅಂತ್ಯ ಹಾಡುತ್ತಾರಾ ಅನ್ನೋ ಕುತೂಹಲ ಮನೆ ಮಾಡಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 8, 2020, 9:02 PM IST