Punjab CM ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್!

  • ಮಾ.16ಕ್ಕೆ ಭಗವಂತ್ ಸಿಂಗ್ ಮಾನ್ ಸಿಎಂ ಆಗಿ ಪ್ರಮಾಣ ವಚನ
  • ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಪ್‌ಗೆ ಭರ್ಜರಿ ಗೆಲುವು
  • 117 ಸ್ಥಾನಗಳ ಪೈಕಿ 92 ಸ್ಥಾನ ಗೆದ್ದ ಆಮ್ ಆದ್ಮಿ ಪಾರ್ಟಿ
Election Result AAP Bhagwant Mann to take oath as new chief minister of Punjab on March 16 ckm

ಚಂಡಿಗಢ(ಮಾ.11): ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ(Punjab Assembly Election 2022) 92 ಸ್ಥಾನ ಗೆದ್ದು ಹೊಸ ಇತಿಹಾಸ ರಚಿಸಿರುವ ಆಮ್ ಆದ್ಮಿ ಪಾರ್ಟಿ(AAP) ಸರ್ಕಾರ ರಚಿಸಲು ಮುಹೂರ್ತ ಫಿಕ್ಸ್ ಮಾಡಿದೆ. ಮಾರ್ಚ್ 16 ರಂದು ಆಪ್ ನಾಯಕ ಭಗವಂತ್ ಸಿಂಗ್ ಮಾನ್(Bhagwant Mann) ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ(chief minister) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್(Punjab Congress) ಪಕ್ಷವನ್ನು ಧೂಳೀಪಟ ಮಾಡಿರುವ ಆಮ್ ಆದ್ಮಿ ಪಾರ್ಟಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರುತ್ತಿದೆ. ಈಗಾಗಲೇ ರಾಜ್ಯಪಾಲರನ್ನು ಭೇಟಿಯಾಗಿ ಪ್ರಮಾಣ ವಚನ ಹಾಗೂ ಕಾರ್ಯಕ್ರಮ ಕುರಿತು ಅನುಮತಿ ಪಡೆದುಕೊಂಡಿದ್ದಾರೆ. ಇತ್ತ ಪಂಚಾಬ್ ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಭಗವಂತ್ ಸಿಂಗ್ ಮಾನ್, ಕಾಂಗ್ರೆಸ್ ಅಭ್ಯರ್ಥಿ ದಲ್ವೀರ್ ಸಿಂಗ್ ಗೋಲ್ಡಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. 

ಸಿಎಂ ಸ್ಥಾನಕ್ಕೆ ಚನ್ನಿ ರಾಜೀನಾಮೆ: ಪಂಜಾಬ್ ಬದಲಾವಣೆಗೆ ಮತ ನೀಡಿದೆ ಎಂದು ಅಚ್ಚರಿಯ ಹೇಳಿಕೆ!

ಭಗತ್‌ಸಿಂಗ್‌ ಹುಟ್ಟೂರಿನಲ್ಲಿ ಮಾನ್‌ ಪ್ರಮಾಣ
ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಜಯಗಳಿಸುತ್ತಿದ್ದಂತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದ್ದ ಭಗವಂತ ಮಾನ್‌ ಅವರು ಭಗತ್‌ ಸಿಂಗ್‌ ಅವರ ಹುಟ್ಟೂರಾದ ಖಟ್ಕಾರ್‌ಕಾಲನ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ‘ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದ ಬದಲು ಖಟ್ಕಾರ್‌ಕಾಲನ್‌ನಲ್ಲಿ ನಡೆಯಲಿದೆ. ಈ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಮಾನ್‌ ಹೇಳಿದ್ದಾರೆ. ಇದರೊಂದಿಗೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಮುಖ್ಯಮಂತ್ರಿಯ ಫೋಟೋವನ್ನು ಅಳವಡಿಸಲಾಗುವುದಿಲ್ಲ. ಎಲ್ಲಾ ಕಚೇರಿಗಳಲ್ಲಿ ಭಗತ್‌ ಸಿಂಗ್‌ ಮತ್ತು ಡಾ.ಅಂಬೇಡ್ಕರ್‌ ಅವರ ಫೋಟೋಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ.

Election Result 2022 ಆಪ್ ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್, ಫೇಸ್ ಬುಕ್ ನಲ್ಲಿ ಝೆಲೆನ್ಸ್ಕಿ ಟ್ರೆಂಡಿಂಗ್!

ಪಂಜಾಬಲ್ಲಿ ಆಪ್‌ ದಿಗ್ವಿಜಯ
ಪಂಜಾಬ್‌ನಲ್ಲಿ ಇದೇ ಮೊದಲ ಬಾರಿ ಮೂರನೇ ಪಕ್ಷವೊಂದು ಉದಯವಾಗಿದೆ. ಅಕಾಲಿದಳ ಹಾಗೂ ಕಾಂಗ್ರೆಸ್‌ ಹೊರತಾದ ಶಕ್ತಿಯಾಗಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ (ಆಪ್‌) ಉದ್ಭವಿಸಿದ್ದು, 92 ಹೆಚ್ಚು ಸ್ಥಾನ ಪಡೆದು ಅಧಿಕಾರಕ್ಕೆ ಬಂದಿದೆ.

ಕಳೆದ 5 ವರ್ಷ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್‌ ಪಕ್ಷ ಸತತ ಒಳಜಗಳದಿಂದ ನಲುಗಿ ಹೋಗಿದೆ. 20ಕ್ಕೂ ಕಡಿಮೆ ಸ್ಥಾನ ಪಡೆದು ಭಾರೀ ಪರಾಜಯ ಅನುಭವಿಸಿದೆ. ಅಕಾಲಿದಳ ಒಂದಂಕಿಗೆ ಕುಸಿದಿದೆ. ಇನ್ನು ಅಮರೀಂದರ್‌ ಸಿಂಗ್‌ ಜತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಕೂಡ ಕೇವಲ ಒಂದಕಿ ಸ್ಥಾನಗಳನ್ನು ಗಳಿಸಿ ಕಳಪೆ ಪ್ರದರ್ಶನ ತೋರಿದೆ.ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಎರಡೂ ಕ್ಷೇತ್ರದಲ್ಲಿ ಸೋತಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಪ್ರಕಾಶ್‌ ಸಿಂಗ್‌ ಬಾದಲ್‌, ರಾಜಿಂದರ್‌ ಕೌರ್‌ ಭಟ್ಟಲ್‌ ಹಾಗೂ ಅಮರೀಂದರ್‌ ಸಿಂಗ್‌, ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಧು, ಅನೇಕ ಪಂಜಾಬ್‌ ಸಚಿವರು ಮಣ್ಣುಮುಕ್ಕಿದ್ದಾರೆ.

ಆಪ್‌ ತಳಮಟ್ಟದಲ್ಲಿ ಕಳೆದ 5 ವರ್ಷ ಕೆಲಸ ಮಾಡಿದ್ದು ಭರ್ಜರಿ ಜಯ ಗಳಿಸಿದೆ. ಪಕ್ಷದ ನಾಯಕ ಭಗವಂತ ಮಾನ್‌ ಅವರು ಮುಖ್ಯಮಂತ್ರಿ ಆಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಪ್‌ ದಿಲ್ಲಿ ಹೊರತಾಗಿ ಅನ್ಯ ರಾಜ್ಯದಲ್ಲಿ ಮೊದಲ ಬಾರಿ ನೆಲೆ ಊರಿದ್ದು ಗಮನಾರ್ಹ

ಪಂಜಾಬ್‌ನ 70 ವರ್ಷಗಳ ಇತಿಹಾಸದಲ್ಲಿ ಕಾಂಗ್ರೆಸ್‌- ಅಕಾಲಿ ದಳ ಬಿಟ್ಟು ಬೇರೊಂದು ಪಕ್ಷ ಅಧಿಕಾರಕ್ಕೇರಿಲ್ಲ. ಆದರೆ ಈ ಬಾರಿ ‘ಪಂಚ ನದಿಗಳ ನಾಡು’ ಹೊಸ ರಾಜಕೀಯ ಇತಿಹಾಸವೊಂದನ್ನು ಸೃಷ್ಟಿಸಿದೆ. ಕಾಂಗ್ರೆಸ್‌- ಶಿರೋಮಣಿ ಅಕಾಲಿ ದಳ ಹೊರತಾದ ರಾಜಕೀಯ ಪಕ್ಷವೊಂದು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. ಆಮ್‌ ಆದ್ಮಿ ಪಕ್ಷ (ಆಪ್‌) ಬಲಿಷ್ಠ ಪರಾರ‍ಯಯ ಪಕ್ಷವಾಗಿ ಪುಟಿದೆದ್ದಿದೆ. ದೆಹಲಿ ಮಹಾನಗರಕ್ಕೆ ಸೀಮಿತವಾಗಿದ್ದ ಪಕ್ಷ, ಪಂಜಾಬ್‌ನಂತಹ ದೊಡ್ಡ ರಾಜ್ಯವನ್ನೇ ಮೊದಲ ಬಾರಿಗೆ ಬುಟ್ಟಿಗೆ ಹಾಕಿಕೊಂಡಿದೆ.

Latest Videos
Follow Us:
Download App:
  • android
  • ios