Asianet Suvarna News Asianet Suvarna News

ತೆಲಂಗಾಣದಲ್ಲಿ ಮೋದಿ ಭಾಷಣ ಅಡ್ಡಿಪಡಿಸಿದ ಬಾಲಕಿ: ಪ್ರಧಾನಿ ಮನವಿ ಮಾಡಿದ್ದೇನು ನೋಡಿ..

ಹೈದರಾಬಾದ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪರೇಡ್ ಮೈದಾನದಲ್ಲಿ ಲೈಟ್‌ಗಳನ್ನು ಅಳವಡಿಸಿದ್ದ ಕಟ್ಟಡದ ಮೇಲೆ ಯುವತಿ ಏರುತ್ತಿರುವುದನ್ನು ಗಮನಿಸಿದರು.

beta neeche aao pm modi tells girl who climbed light tower at rally ash
Author
First Published Nov 12, 2023, 11:09 AM IST

ಹೈದರಾಬಾದ್ (ನವೆಂಬರ್ 12, 2023): ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯ ನಡುವೆ ಪ್ರಧಾನಿ ಮೋದಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ರ‍್ಯಾಲಿಯಲ್ಲಿ ಭಾಗಿಯಾಗಿದ್ದರು. ಹೈದರಾಬಾದ್‌ನಲ್ಲಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಬಾಲಕಿಯೊಬ್ಬಳ ನಡೆಯಿಂದ ಮೋದಿ ಭಾಷಣಕ್ಕೆ ಅಡ್ಡಿಯಾಗಿದೆ. ಅಷ್ಟಕ್ಕೂ ಬಾಲಕಿ ಮಾಡಿದ್ದೇನು ನೋಡಿ..

ಶನಿವಾರ ಹೈದರಾಬಾದ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪರೇಡ್ ಮೈದಾನದಲ್ಲಿ ಲೈಟ್‌ಗಳನ್ನು ಅಳವಡಿಸಿದ್ದ ಕಟ್ಟಡದ ಮೇಲೆ ಯುವತಿ ಏರುತ್ತಿರುವುದನ್ನು ಗಮನಿಸಿದರು. ಇದರಿಂದ ಅವರ ಭಾಷಣಕ್ಕೆ ಕೆಲ ಕಾಲ ಅಡ್ಡಿಯಾಗಿದೆ. ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್‌ಪಿಎಸ್) ತೆಲುಗು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳ ದೊಡ್ಡ ಘಟಕಗಳಲ್ಲಿ ಒಂದಾದ ಮಾದಿಗರ ಸಮುದಾಯ ಸಂಘಟನೆ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ಹೈದರಾಬಾದ್‌ ನಗರದಲ್ಲಿದ್ದರು. 

ಇದನ್ನು ಓದಿ: ಮೋದಿಯ ಆ ಒಂದು ಮಾತಿಗೆ ದನಿಗೂಡಿಸಿದ ಭಾರತ: ಚೀನಾಗೆ ಬರೋಬ್ಬರಿ 1 ಲಕ್ಷ ಕೋಟಿ ರೂ. ನಷ್ಟ!

ಈ ವೇಳೆ ತಮ್ಮ ಭಾಷಣದಲ್ಲಿ ಯುವತಿಯನ್ನು ಕೆಳಗೆ ಬರುವಂತೆ ಪ್ರಧಾನಿ ಪದೇ ಪದೇ ವಿನಂತಿಸಿದರು ಮತ್ತು ವಿದ್ಯುತ್ ತಂತಿಗಳ ಸ್ಥಿತಿ ಚೆನ್ನಾಗಿಲ್ಲ ಎಂದೂ ಹೇಳಿದರು. ಬಾಲಕಿ ಪ್ರಧಾನಿ ಮೋದಿಯವರಿಗೆ ಏನನ್ನೋ ತಿಳಿಸಲು ಪ್ರಯತ್ನಿಸುತ್ತಿದ್ದಾಗ ಹಿಂದಿಯಲ್ಲಿ "ಬೇಟಾ, ನಾನು ನಿಮ್ಮ ಮಾತು ಕೇಳುತ್ತೇನೆ. ದಯವಿಟ್ಟು ಕೆಳಗೆ ಬಂದು ಕುಳಿತುಕೊಳ್ಳಿ. ಶಾರ್ಟ್ ಸರ್ಕ್ಯೂಟ್ ಆಗಬಹುದು. ಇದು ಸರಿಯಲ್ಲ. ನಾನು ಜನರಿಗಾಗಿಯೇ ಬಂದಿದ್ದೇನೆ. ಅಂತಹ ಕೆಲಸಗಳಿಂದ ಪ್ರಯೋಜನವಿಲ್ಲ ಎಂದು ಪ್ರಧಾನಿ ಭಾಷಣವನ್ನು ಅನುವಾದಿಸುತ್ತಿದ್ದ ರಾಜ್ಯಸಭಾ ಸದಸ್ಯ ಕೆ. ಲಕ್ಷ್ಮಣ್ ತೆಲುಗಿನಲ್ಲಿ ಮನವಿ ಮಾಡಿದರು.

ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದಾಗ, ಅವರು ಅದನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದರು. ಈ ಘಟನೆಗೂ ಮುನ್ನ, ತಮ್ಮ ಭಾಷಣದ ಆರಂಭದಲ್ಲಿ, ಎಂಆರ್‌ಪಿಎಸ್ ಸಂಸ್ಥಾಪಕ ಕೃಷ್ಣ ಮಾದಿಗ ಅವರನ್ನು ಪ್ರಧಾನಿ ಮೋದಿ ಸಾಂತ್ವನ ಹೇಳಿದ್ದು, ಕಣ್ಣೀರು ಸುರಿಸಿ ಅವರನ್ನು ಅಪ್ಪಿಕೊಂಡರು. ಈ ಘಟನೆಯ ವಿಡಿಯೋ ವೈರಲ್‌ ಆಗಿದೆ. 

ಇದನ್ನೂ ಓದಿ: ನಿತೀಶ್ ಕುಮಾರ್ ಸೆಕ್ಸ್‌ ಹೇಳಿಕೆಗೆ ಅಮೆರಿಕ ಗಾಯಕಿ ಮೇರಿ ಮಿಲ್ಬೆನ್ ವಾಗ್ದಾಳಿ: ಮಹಿಳೆ ಪರ ನಿಲುವಿಗೆ ಮೋದಿಗೆ ಶ್ಲಾಘನೆ

ನಿತೀಶ್‌ ಕುಮಾರ್‌ ಸೆಕ್ಸ್‌ ಹೇಳಿಕೆಗೆ ಮೋದಿ ತರಾಟೆ: ಇನ್ನೆಷ್ಟು ಕೆಳಗಿಳಿಯುತ್ತೀರಿ ಎಂದು ಕಿಡಿ

Follow Us:
Download App:
  • android
  • ios