ನವದೆಹಲಿ [ಜ.24]: ದೇಶದ ಅತ್ಯಂತ ಚಲನಶೀಲ ನಗರಗಳ ಪೈಕಿ ಒಂದಾದ ಕರ್ನಾಟಕದ ರಾಜಧಾನಿ ಬೆಂಗಳೂರು ಮುಂದಿನ 15 ವರ್ಷಗಳ ವರೆಗೆ ವಿಶ್ವದಲ್ಲೇ ಅತಿ ವೇಗದಲ್ಲಿ ಬೆಳವಣಿಗೆ ಹೊಂದುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2035ರ ವರೆಗೂ ಬೆಂಗಳೂರಿನ ಜಿಡಿಪಿಯ ದರ ಶೇ.8.5ರಷ್ಟುಇರಲಿದೆ ಎಂದು ವರದಿಯೊಂದು ತಿಳಿಸಿದೆ.

ಎಕ್ಸೆಲ್‌ ಪಾರ್ಟ​ರ್ಸ್, 3ಒನ್‌4 ಮತ್ತು ಐಡಿಯಾ ಸ್ಟ್ರಿಂಗ್‌ ಕ್ಯಾಪಿಟಲ್‌ ಜಂಟಿಯಾಗಿ ಬಿಡುಗಡೆ ಮಾಡಿರುವ ಬೆಂಗಳೂರು ನಾವೀನ್ಯತೆ ವರದಿಯ ಪ್ರಕಾರ 2019ರಿಂದ 2035ರ ಅವಧಿಯಲ್ಲಿ ಅತಿ ವೇಗದಿಂದ ಬೆಳೆಯಲಿರುವ ವಿಶ್ವದ 780 ಪ್ರಮುಖ ನಗರಗಳ ಪೈಕಿ ಭಾರತ 17ರಿಂದ 20 ನಗರಗಳಿವೆ. ಈ ಪೈಕಿ ಬೆಂಗಳೂರು ವಿಶ್ವದಲ್ಲೇ ಅತಿ ವೇಗದಲ್ಲಿ ಬೆಳೆಯುವ ನಗರ ಎನಿಸಿಕೊಳ್ಳಲಿದೆ. ಇದಕ್ಕೆ ಹೈದರಾಬಾದ್‌ ಮತ್ತು ಚೆನ್ನೈ ನಗರಗಳು ಪ್ರಬಲ ಸ್ಪರ್ಧೆ ಒಡ್ಡಲಿವೆ ಎಂದು ವರದಿ ತಿಳಿಸಿದೆ.

ಬೆಂಗಳೂರಲ್ಲಿ ಬೈಕ್ ಮೇಲೆ ಶ್ವಾನದ ಸವಾರಿ, ಏನ್ ಚೆಂದ ಕಣ್ರೀ!..

ಉದ್ಯೋಗ ಸ್ನೇಹಿ ನಗರ:

ಬೆಂಗಳೂರು ಅತಿ ಹೆಚ್ಚಿನ ಉದ್ಯೋಗ ದರದೊಂದಿಗೆ ಭಾರತದ ಸಹಸ್ರಮಾನ ಸ್ನೇಹಿ ನಗರ ಎಂಬ ಖ್ಯಾತಿಗೂ ಬೆಂಗಳೂರು ಪಾತ್ರವಾಗಿದೆ. ಬೆಂಗಳೂರು ಉದ್ಯೋಗ ಸೃಷ್ಟಿಯಲ್ಲಿ ಏಷ್ಯಾದಲ್ಲೇ 18ನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೇ ಉದ್ಯೋಗಕ್ಕೆ ಮಹಿಳೆಯರ ನೆಚ್ಚಿನ ನಗರ ಎನಿಸಿಕೊಂಡಿದೆ. 15ರಿಂದ 35 ವರ್ಷದ ಒಳಗಿನವರನ್ನು ಬೆಂಗಳೂರು ಶೇ.37ರಷ್ಟುಹೊಂದಿದ್ದು, ಯುವ ಜನತೆಯ ಸಂಪುರ್ಣ ಲಾಭವನ್ನು ಬೆಂಗಳೂರು ಪಡೆದುಕೊಳ್ಳುತ್ತಿದೆ.

ಮಲೆನಾಡಿಗೆ ಪ್ರತಿದಿನ ಉಗಿಬಂಡಿ, ಶಿವಮೊಗ್ಗ-ಯಶವಂತಪುರ ಚುಕು-ಬುಕು ಸ್ಟಾರ್ಟ್!...

ಡಿಜಿಟಲ್‌ ಸ್ನೇಹಿ:

ಬೆಂಗಳೂರು ದೇಶದಲ್ಲೇ ಡಿಜಿಟಲ್‌ ಸ್ನೇಹಿ ಎನಿಸಿದ್ದು, ವ್ಯಕ್ತಿಯೊಬ್ಬ ತಿಂಗಳಿಗೆ ಸರಾಸರಿ 8,600 ರು. ಡಿಜಿಟಲ್‌ ವಿಧಾನದ ಮೂಲಕ ಖರ್ಚು ಮಾಡುತ್ತಿದ್ದಾನೆ. 2019ರಲ್ಲಿ ಎಲ್ಲಾ ರೀತಿಯ ಯುಪಿಐ ವಹಿವಾಟು ಶೇ.38.1ರಷ್ಟುಏರಿಕೆಯಾಗಿದೆ. ಅಲ್ಲದೇ ಆನ್‌ಲೈನ್‌ ಶಾಪಿಂಗ್‌ ಬೆಂಗಳೂರು ಗ್ರಾಹಕರ ಮೊದಲ ಆದ್ಯತೆ ಆಗಿದೆ. ನಗರದ ಶೇ.69ರಷ್ಟುಮಂದಿ ಆನ್‌ಲೈನ್‌ ಶಾಪಿಂಗ್‌ ಇಷ್ಟಪಡುತ್ತಾರೆ ಎಂದು ವರದಿ ತಿಳಿಸಿದೆ.

ಐಟಿ ಪ್ರತಿಭಾವಂತರು

ಭಾರತದ ಐಟಿ ಪ್ರತಿಭಾವಂತರ ಪೈಕಿ ಬೆಂಗಳೂರು ಶೇ.33ರಷ್ಟುಕೊಡುಗೆ ನೀಡುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಅನುಭವಿ ಎಂಜಿನಿಯರ್‌ಗಳನ್ನು ಬೆಂಗಳೂರು ಹೊಂದಿದೆ. ಬೆಂಗಳೂರು ಎಂಜನಿಯರಿಂಗ್‌ ಕಾಲೇಜುಗಳು ಮತ್ತು ಜನಸಂಖ್ಯಾ ಪ್ರಮಾಣ ದೆಹಲಿಗಿಂತ 5 ಪಟ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ.