ಉದ್ಯೋಗಿಗಳಿಗೆ ಮಧ್ಯಾಹ್ನ ಅರ್ಧಗಂಟೆ ಮಲಗೋಕೆ ಟೈಮ್‌ ಕೊಡುತ್ತೆ ಈ ಕಂಪನಿ

  • ಬೆಂಗಳೂರಿನ ಸ್ಟಾರ್ಟ್ಅಪ್‌ನಿಂದ ಉದ್ಯೋಗಿಗಳಿಗೆ ಹೊಸ ಆಫರ್
  • ನಿದ್ದೆ ಮಾಡಲು ಸಮಯ ಕೊಟ್ಟ ವೇಕ್‌ಫಿಟ್ ಸಂಸ್ಥೆ
  • ಉದ್ಯೋಗಿಗಳಿಗೆ ಮೇಲ್ ಮಾಡಿದ ಸಹ ಸಂಸ್ಥಾಪಕ
Bengaluru startup announces 30 minute official nap time at work to employees akb

ಮಧ್ಯಾಹ್ನ ಊಟದ ನಂತರ ಬಹುತೇಕರಿಗೆ ಒಂದು ಸಣ್ಣ ನಿದ್ದೆ ಮಾಡಿದರೆ ಎಷ್ಟು ಚೆನ್ನ ಎಂದೆನಿಸುವುದು ಸಹಜ ಆದರೆ ಕಚೇರಿಯಲ್ಲಿ ಅದು ಹೇಗೆ ಸಾಧ್ಯ. ಸಾಧ್ಯವಿದೆ ಅಂತ ಹೇಳ್ತಿದೆ. ಬೆಂಗಳೂರಿನ ಒಂದು ಸ್ಟಾರ್ಟ್‌ಪ್‌ ಕಂಪನಿ. ಹೌದು ಬೆಂಗಳೂರಿನ ಸ್ಟಾರ್ಟ್‌ಅಪ್‌ ಕಂಪನಿಯೊಂದು ಉದ್ಯೋಗಿಗಳಿಗೆ ವಿಶೇಷ ಸವಲತ್ತನ್ನು ಒದಗಿಸುತ್ತಿದೆ. ಮಧ್ಯಾಹ್ನ ಅರ್ಧಗಂಟೆ ಸಣ್ಣದಾಗಿ ನಿದ್ದೆ ಮಾಡಲು ಸಂಸ್ಥೆ ಈ ಅವಕಾಶ ನೀಡಿದೆ. 

ಎಲ್ಲರೂ ಇಷ್ಟು ದಿನ ವರ್ಕ್‌ಫ್ರಂ ಹೋಮ್‌ ಮಾಡ್ತಿದ್ದೋರು ಈಗ ಆಫೀಸ್‌ಗೆ ಬರೋ ಹಾಗಿದೆ. ಕೋವಿಡ್‌ ಸಮಯದಲ್ಲಿ ವರ್ಕ್‌ ಫ್ರಮ್ ಹೋಮ್‌ ಕೊಟ್ಟಿದ್ದ ಎಷ್ಟು ಸಂಸ್ಥೆಗಳು ಕೋವಿಡ್ ಕಡಿಮೆಯಾಗುತ್ತಿದ್ದಂತೆ ಉದ್ಯೋಗಿಗಳನ್ನು ಕಚೇರಿಗೆ ಕರೆಸುತ್ತಿದೆ. ಮನೆಯಲ್ಲಿ ಬೇಕಾಬಿಟ್ಟಿ ಎಷ್ಟೊತ್ತಿಗಾದರು ಟಾರ್ಗೆಟ್ ಮುಗಿಸುತ್ತಿದ್ದವರಿಗೆ ಈಗ ಆಫೀಸ್‌ಗೆ ಬರುತ್ತಿದ್ದಂತೆ ತಮ್ಮ ಶಿಫ್ಟ್ ಸಮಯದೊಳಗಾಗಿ ಟಾರ್ಗೆಟ್ ಮುಗಿಸಬೇಕಿದೆ. ಇಂತದ್ರಲ್ಲಿ ಮಧ್ಯಾಹ್ನ ನಿದ್ದೆ ಮಾಡಲು ಎಲ್ಲಿ ಸಮಯ ಸಿಗುತ್ತೆ ಅಂತ ಬೇಸರ ಬಹುತೇಕ ಎಲ್ಲ ಉದ್ಯೋಗಿಗಳ ಮನದಲ್ಲಿದೆ. ಆದರೆ ಬೆಂಗಳೂರಿನ ಸಂಸ್ಥೆಯೊಂದು ನೀಡಿರುವ ನಿದ್ದೆ ಮಾಡುವ ಆಫರ್‌ ಆ ಸಂಸ್ಥೆಯ ಉದ್ಯೋಗಿಗಳಲ್ಲಿ ಸಂತಸ ಮೂಡಿಸಿದೆ ಅಲ್ಲದೇ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಬೆಂಗಳೂರಿನ ಸ್ಟರ್ಟ್ಅಪ್‌ ಸಂಸ್ಥೆ ವೇಕ್‌ಫಿಟ್ ಈ ಅವಕಾಶವನ್ನು ತನ್ನ ಉದ್ಯೋಗಿಗಳಿಗೆ ನೀಡುತ್ತಿದೆ. ವೇಕ್‌ಫಿಟ್‌ ಸಹ ಸಂಸ್ಥಾಪಕ ಚೈತನ್ಯ ರಾಮಲಿಂಗೇ ಗೌಡ (Chaitanya Ramalingegowda) ತನ್ನ ಉದ್ಯೋಗಿಗಳಿಗೆ ಮೇಲ್ ಕಳುಹಿಸಿದ್ದು, ಕಚೇರಿ ಸಮಯದಲ್ಲಿ ಅರ್ಧ ಗಂಟೆ ಮಲಗಲು ಅವಕಾಶ ನೀಡುವುದಾಗಿ ಮೇಲ್ ಮಾಡಿದ್ದಾರೆ. ಕಳೆದ ಆರು ವರ್ಷಗಳಿಂದ ನಾವು ನಿದ್ದೆಗೆ ಸಂಬಂಧಿಸಿದಂತೆ ವ್ಯವಹಾರ ಮಾಡುತ್ತಿದ್ದೇವೆ. ಆದಾಗ್ಯೂ ಮಧ್ಯಾಹ್ನದ ತುಂಬಾ ಮಹತ್ವದ ನಿದ್ದೆಗೆ ನ್ಯಾಯ ನೀಡುವಲ್ಲಿ ನಾವು ವಿಫಲರಾಗಿದ್ದೇವೆ. ನಾವು ಯಾವಾಗಲೂ ಈ ಸಣ್ಣ ನಿದ್ದೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಆದರೆ ಇಂದಿನಿಂದ ಆರಂಭಿಸುವುದರಿಂದ ಇದನ್ನು ನಾವು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದು ಅವರು ತಮ್ಮ ಉದ್ಯೋಗಿಗಳಿಗೆ ಕಳುಹಿಸಿದ ಮೇಲ್‌ನಲ್ಲಿ ಬರೆದಿದ್ದಾರೆ. 

NASA ಅಧ್ಯಯನದ ಪ್ರಕಾರ, 26-ನಿಮಿಷದ  ಸಣ್ಣ ಬೆಕ್ಕಿನ ನಿದ್ದೆ ನಮ್ಮ ಕಾರ್ಯಕ್ಷಮತೆಯನ್ನು 33 ಪ್ರತಿಶತದಷ್ಟು ಹೆಚ್ಚಿಸುತ್ತದೆ ಮತ್ತು ಹಾರ್ವರ್ಡ್ ಅಧ್ಯಯನವು ನಿದ್ದೆಯು  ಹೇಗೆ ಸುಸ್ತಾಗುವುದನ್ನು ತಡೆಯುತ್ತದೆ ಎಂಬುದನ್ನು ತೋರಿಸಿದೆ ಎಂದು ಅವರು ಹೇಳಿದರು. ನಾವು ಕೆಲಸದಲ್ಲಿ ಮಧ್ಯಾಹ್ನದ ನಿದ್ರೆಯನ್ನು ಸಾಮಾನ್ಯಗೊಳಿಸಲು ನಿರ್ಧರಿಸಿದ್ದೇವೆ ಮತ್ತು ನಮ್ಮ ಎಲ್ಲಾ ಉದ್ಯೋಗಿಗಳಿಗೆ 2 ರಿಂದ 2:30 ರವರೆಗೆ ಅಧಿಕೃತ ನಿದ್ರೆಯ ಸಮಯ ಎಂದು ಘೋಷಿಸಿದ್ದೇವೆ. ಇನ್ನು ಮುಂದೆ, ನೀವು 2 ರಿಂದ 2:30 ರವರೆಗೆ ನಿದ್ದೆ ಮಾಡುವ ಹಕ್ಕನ್ನು ಹೊಂದಿರುತ್ತೀರಿ ಎಂದು ಇಮೇಲ್ ಹೇಳಿದೆ. 

ಎಲ್ಲಿಂದ ಬೇಕಾದ್ರು ಕೆಲ್ಸ ಮಾಡಿ, ಸ್ಯಾಲರಿ ಕಡಿಮೆ ಮಾಡಲ್ಲ: ಉದ್ಯೋಗಿಗಳಿಗೆ Airbnb ಆಫರ್

ಈ ಸಮಯದಲ್ಲಿ ನಿಮ್ಮ ಕ್ಯಾಲೆಂಡರ್ ಅನ್ನು ಅಧಿಕೃತ ನಿದ್ರೆಯ ಸಮಯವಾಗಿ ನಿರ್ಬಂಧಿಸಲಾಗುತ್ತದೆ ಎಂದು ಅದು ಸೇರಿಸಿದೆ. ವೇಕ್‌ಫಿಟ್ ತನ್ನ ಉದ್ಯೋಗಿಗಳಿಗೆ ಪರಿಪೂರ್ಣ ನಿದ್ರೆಯ ವಾತಾವರಣವನ್ನು ನಿರ್ಮಿಸಲು ಕಚೇರಿಯಲ್ಲಿ ಸ್ನೇಹಶೀಲ ಚಿಕ್ಕನಿದ್ರೆ ಮಾಡುವ ದಿಂಬುಗಳು ಮತ್ತು ಸ್ತಬ್ಧ ಕೊಠಡಿಗಳನ್ನು ರಚಿಸಲು ಕೆಲಸ ಮಾಡುತ್ತಿದೆ. ಕೆಲಸದ ಸಮಯದಲ್ಲಿ ಮಲಗಿರುವ ನಿಮ್ಮನ್ನು ಹಿಡಿಯಲು ಎದುರು ನೋಡುತ್ತಿದ್ದೇನೆ ಎಂದು ರಾಮಲಿಂಗೇಗೌಡ ಹೇಳಿದ್ದಾರೆ.

ಕೆಲಸದ ಸಮಯದಲ್ಲಿ ತಿನ್ನುವ ಹಾಗಿಲ್ಲ: ವರದಿ ಮಾಡಿದ ಸಹೋದ್ಯೋಗಿಗೆ ಬಹುಮಾನ

ಸಂಸ್ಥೆಯ ಈ ಅಧಿಕೃತ ನಿದ್ದೆಯ ಅವಕಾಶದ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಸಖತ್ ಕಾಮೆಂಟ್ ಮಾಡಿದ್ದಾರೆ. ಈ ಅರ್ಧ ಗಂಟೆಯ ನಿದ್ದೆ ಒಂದು ದಿನವನ್ನು ಎರಡು ಗುಣಮಟ್ಟದ ಕೆಲಸದ ಅವಧಿಗಳಾಗಿ ಪರಿವರ್ತಿಸುತ್ತದೆ. ನೀವು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌ಗಳನ್ನು ಸೆಟ್ ಮಾಡಿದ್ದೀರಿ. ಅದನ್ನು ಮುಂದುವರಿಸಿ ಹೀಗೆ ಅನೇಕರು ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕಂಪನಿಯೊಂದು ನಮಗೆ ನಿದ್ದೆ ಮಾಡುವುದಕ್ಕೂ ಪಾವತಿ ಮಾಡುತ್ತೆ ಎಂದರೆ ಕನಸೊಂದು ನನ್ನಸಾದಂತೆ ಅನಿಸುವುದಿಲ್ಲವೇ? 

Latest Videos
Follow Us:
Download App:
  • android
  • ios