ಕೆಲಸದ ವೇಳೆ ತಿನ್ನುವವರ ವಿರುದ್ಧ ಕಠಿಣ ಕ್ರಮ ತಿನ್ನುವವರನ್ನು ಪತ್ತೆ ಮಾಡಿ ವರದಿ ನೀಡಿದವರಿಗೆ ಬಹುಮಾನ ಕಂಪನಿಯ ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್  

ಕೋವಿಡ್‌ ಕಾರಣದಿಂದ ಎರಡು ವರ್ಷಗಳ ಕಾಲ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಕೋವಿಡ್ ಕಡಿಮೆಯಾಗುತ್ತಿದ್ದಂತೆ ಎಲ್ಲಾ ಸಂಸ್ಥೆಗಳು ಈಗ ಕಚೇರಿಗೆ ಕರೆಸಿಕೊಳ್ಳುತ್ತಿವೆ. ಈ ಮಧ್ಯೆ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ತಿನ್ನುವಂತಿಲ್ಲ ಎಂದು ನಿಯಮ ಹೇರಿದೆ. ಇದರ ಫೋಟೋವೊಂದನ್ನು ಆ ಸಂಸ್ಥೆಯ ಉದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಫೋಟೋ ವೈರಲ್ ಆಗಿದೆ. ಜೊತೆಗೆ ಸಂಸ್ಥೆಯ ಈ ಅಮಾನವೀಯ ನಿರ್ಧಾರಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲಸದ ಸಮಯದಲ್ಲಿ ತಿನ್ನುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸುವ ಪೋಸ್ಟರ್‌ನ್ನು ಕಚೇರಿಯಲ್ಲಿ ಅಂಟಿಸಲಾಗಿದೆ. ಕೆಲಸದ ವೇಳೆ ತಿನ್ನುವವರನ್ನು ಗುರುತಿಸಿ ಮಾಹಿತಿ ನೀಡಿದ ಸಹೋದ್ಯೋಗಿಗೆ $20 (ರೂ. 1,500) ಪಾವತಿಸಲಾಗುವುದು ಎಂದು ಸಂಸ್ಥೆ ಹೇಳಿದೆ. ಪ್ರಾರಂಭದಲ್ಲಿ ಮೂರು ಎಚ್ಚರಿಕೆಗಳನ್ನು ನೀಡಲಾಗುವುದು. ನಂತರವೂ ಇದನ್ನು ಮುಂದುವರಿಸಿದಲ್ಲಿ ಯಾವುದೇ ನಿರೀಕ್ಷೆಯಿಲ್ಲದೆ ವಜಾಗೊಳಿಸಲಾಗುವುದು ಎಂದು ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲಿಂದ ಬೇಕಾದ್ರು ಕೆಲ್ಸ ಮಾಡಿ, ಸ್ಯಾಲರಿ ಕಡಿಮೆ ಮಾಡಲ್ಲ: ಉದ್ಯೋಗಿಗಳಿಗೆ Airbnb ಆಫರ್

ಈ ಪೋಸ್ಟರ್‌ನಲ್ಲಿ, ಎಚ್ಚರಿಕೆ ಎಲ್ಲಾ ಉದ್ಯೋಗಿಗಳು ಕೆಲಸದ ಸಮಯದಲ್ಲಿ ಊಟ ಮಾಡಬಾರದು ಕೆಲಸದ ಸಮಯದಲ್ಲಿ ನಿಮ್ಮ ಸಹೋದ್ಯೋಗಿ ತಿನ್ನುವುದನ್ನು ನೀವು ಪತ್ತೆ ಮಾಡಿದರೆ $20 (ಡಾಲರ್‌) ಬಹುಮಾನವನ್ನು ಸ್ವೀಕರಿಸಬಹುದು. ಈ ಬಗ್ಗೆ ಮೂರು ಬಾರಿ ಎಚ್ಚರಿಕೆ ನೀಡಲಾಗುವುದು ನಂತರವೂ ಇದನ್ನು ಮುಂದುವರಿಸಿದಲ್ಲಿ ಉದ್ಯೋಗಿಗಳನ್ನು ಯಾವುದೇ ವಿನಾಯಿತಿಗಳಿಲ್ಲದೆ ವಜಾಗೊಳಿಸಲಾಗುತ್ತದೆ. 

ಆದರೆ ನೆಟ್ಟಿಗರು ಇದು ಭಯಾನಕ ಕಲ್ಪನೆ ಎಂದಿದ್ದಾರೆ. ಅವರೆಲ್ಲರೂ ಒಬ್ಬರಿಗೊಬ್ಬರು ಪರಸ್ಪರ ದೂರು ನೀಡಬೇಕು. ನಂತರ ಆತನಿಂದ ತಮ್ಮ ಸಂಸ್ಥೆಯಿಂದ 20 ಡಾಲರ್ ಪಡೆದುಕೊಂಡು ಆಫೀಸಿನಿಂದ ಹೊರಗೆ ಆಹಾರ ಅಥವಾ ಪಾನೀಯ ಸೇವನೆಗೆ ಹೋಗಬೇಕು. ಉದ್ಯೋಗಿಗಳೆಲ್ಲರೂ ಜೊತೆಯಾಗಿ ತಮ್ಮ ಮ್ಯಾನೇಜರ್‌ಗೆ ಪದೇ ಪದೇ ವರದಿ ಮಾಡಬೇಕು. ಆದರೆ ಹೀಗೆ ದೂರು ನೀಡುವುದು ಒಳ್ಳೆಯದಲ್ಲವಾದರೂ ಇದು ಉದ್ಯೋಗಿಗೆ ಉತ್ತಮ ಪಾವತಿ ಮಾಡುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಅಮೆರಿಕಾದ ಕಂಪನಿ Airbnb ಉದ್ಯೋಗಿಗಳಿಗೆ ಹೊಸ ಆಫರ್ ಮಾಡಿತ್ತು. ಉದ್ಯೋಗಿಗಳಿಗೆ ಕೋವಿಡ್‌ ನಂತರವೂ ಎಲ್ಲಿಂದ ಬೇಕಾದರೂ ಕೆಲಸ ಮಾಡಲು ಅವಕಾಶ ನೀಡಿದ್ದು, ಇದು ಉದ್ಯೋಗಿಗಳ ಸಂಬಳದ ಮೇಲೆ ಯಾವುದೇ ಪರಿಣಾಮ ಬೀಳುವುದಿಲ್ಲ ಕರೋನವೈರಸ್ ಸಾಂಕ್ರಾಮಿಕ ರೋಗವು ಬರುವ ಮೊದಲು ಅವರು ಪಡೆಯುತ್ತಿದ್ದ ಮೊತ್ತವನ್ನೇ ಈಗಲೂ ಕಂಪನಿ ಉದ್ಯೋಗಿಗಳಿಗೆಗೆ ಪಾವತಿಸುವುದನ್ನು ಮುಂದುವರಿಸುತ್ತದೆ ಎಂದು ಸಂಸ್ಥೆ ಹೇಳಿತ್ತು. 

ಆಸ್ಪತ್ರೆಯಿಂದಲೇ Interview ಕೊಟ್ಟ ಕ್ಯಾನ್ಸರ್ ರೋಗಿ, ನೆಟ್ಟಿಗರಿಂದ ಹೀರೋ ಪಟ್ಟ

Airbnb ತನ್ನ ಉದ್ಯೋಗಿಗಳಿಗೆ ಮನೆಯಿಂದ ಅಥವಾ ತಮಗೆಲ್ಲಿ ಬೇಕೋ ಅಲ್ಲಿಂದ ಕೆಲಸ ಮಾಡುವ ಪ್ರಕ್ರಿಯೆಯನ್ನು ಶಾಶ್ವತಗೊಳಿಸಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯೂ ಸಂಬಳದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ. ಕರೋನವೈರಸ್ ಸಾಂಕ್ರಾಮಿಕ ರೋಗ ಬರುವುದಕ್ಕೂ ಮೊದಲು ಅವರು ಪಡೆಯುತ್ತಿದ್ದ ಅದೇ ಮೊತ್ತವನ್ನು ಕಂಪನಿಯು ಅವರಿಗೆ ಪಾವತಿಸುವುದನ್ನು ಮುಂದುವರಿಸುತ್ತದೆ ಎಂದು ಏರ್‌ಬಿಎನ್‌ಬಿ ಸಿಇಒ ಬ್ರಿಯಾನ್ ಚೆಸ್ಕಿ ( CEO Brian Chesky) ತನ್ನ ಉದ್ಯೋಗಿಗಳಿಗೆ ಇಮೇಲ್ ಮೂಲಕ ತಿಳಿಸಿದ್ದು, ಹೊಸ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದರು. ದೂರದ ಕೆಲಸಗಾರರನ್ನು ಆಕರ್ಷಿಸುವ ಸಲುವಾಗಿ ಕಂಪನಿಯು ಈ ಪಾಲುದಾರಿಕೆ ಮಾಡುತ್ತದೆ ಎಂದು ಉದ್ಯೋಗಿಗಳಿಗೆ ಕಳುಹಿಸಿದ ಮೇಲ್‌ನಲ್ಲಿ ಸಂಸ್ಥೆ ಹೇಳಿತ್ತು. 

ಚೆಸ್ಕಿ ತಾವು ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ Airbnb ಜಗತ್ತಿನ ಎಲ್ಲಾ ಸ್ಥಳಗಳಿಂದ ಜನರನ್ನು ನೇಮಿಸಿಕೊಳ್ಳಲು ಬಯಸುತ್ತದೆ ಎಂದು ಹೇಳಿದರು. ನಾವು ವಿಶ್ವದ ಅತ್ಯುತ್ತಮ ಜನರನ್ನು ನೇಮಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಬಯಸುತ್ತೇವೆ (ನಿಮ್ಮಂತೆ). ನಮ್ಮ ಟ್ಯಾಲೆಂಟ್ ಪೂಲ್ ಅನ್ನು ನಾವು ನಮ್ಮ ಕಚೇರಿಗಳ ಸುತ್ತಲಿನ ಜಾಗಕ್ಕೆ ಸೀಮಿತಗೊಳಿಸಿದರೆ, ನಾವು ಗಮನಾರ್ಹ ಅನನುಕೂಲತೆಯನ್ನು ಎದುರಿಸುತ್ತೇವೆ. ಅತ್ಯುತ್ತಮ ಜನರು ಎಲ್ಲೆಡೆ ವಾಸಿಸುತ್ತಾರೆ, ಒಂದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವುದಿಲ್ಲ. ಮತ್ತು ಉದ್ಯೋಗಿಗಳನ್ನು ವೈವಿಧ್ಯಮಯ ಸಮುದಾಯಗಳಿಂದ ನೇಮಕ ಮಾಡಿಕೊಳ್ಳುವ ಮೂಲಕ, ನಾವು ಹೆಚ್ಚು ವೈವಿಧ್ಯಮಯ ಕಂಪನಿಯಾಗುತ್ತೇವೆ ಎಂದು ಅವರು ಮೇಲ್‌ನಲ್ಲಿ ತಿಳಿಸಿದ್ದಾರೆ.