ಬೆಂಗಳೂರು-ಸೇಲಂ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹಲವು ವಾಹನಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಇದರಲ್ಲಿ 7 ವರ್ಷದ ಬಾಲಕನು ಸೇರಿದ್ದಾನೆ.
ಕೃಷ್ಣಗಿರಿ (ಜು.20) ಹೆದ್ದಾರಿಯಲ್ಲಿ ಸಂಭವಿಸಿ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಬೆಂಗಳೂರು-ಸೇಲಂ ಹೆದ್ದಾರಿಯಲ್ಲಿ ಆಪಘಾತ ಸಂಭವಿಸಿದೆ. ಹಲವು ವಾಹನಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ 7 ವರ್ಷದ ಬಾಲಕ ಸೇರಿ ಮೂವರು ಮೃತಪಟ್ಟಿದ್ದರೆ, 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೊದಲು ಟ್ರಕ್ ವಾಹನ ಅಪಘಾತಕ್ಕೀಡಾಗಿತ್ತು. ಇದರ ಬೆನ್ನಲಲ್ೇ ಎರಡು ಕಾರು ಮತ್ತೊಂದು ಟ್ರಪ್ ಅಪಘಾತಕ್ಕೀಡಾಗಿದೆ. ಎರಡು ಕಾರು ಹಾಗೂ ಬೈಕ್‌ನಲ್ಲಿದ್ದ ಪ್ರಯಾಣಿಕರ ಪೈಕಿ ಮೂವರು ಮೃತಪಟ್ಟರೆ, 7 ಮಂದಿ ಗಾಯಗೊಂಡಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಬಳಿ ಬೆಂಗಳೂರು-ಸೇಲಂ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಕೂಡ ಜಖಂ ಆಗಿದೆ. ಒಟ್ಟು 5 ವಾಹನಗಳು ಈ ಅಪಘಾತದಲ್ಲಿ ಜಖಂ ಆಗಿದೆ. ಒಂದು ಕಾರಿನಲ್ಲಿದ್ದ ಮೂವರು ಮೃತಪಟ್ಟಿರುವುದಾಗಿ ಕೃಷ್ಣಗಿರಿ ಪೊಲೀಸರು ಹೇಳಿದ್ದಾರೆ. ಕೃಷ್ಣಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಲನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸಾರಿಗೆ ಬಸ್ ಕಾರು ನಡುವೆ ಅಪಘಾತ
ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಮೀಪದ ಸಾರಿಗೆ ಬಸ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಿಲ್ಲ . ಮರಿಯಮ್ಮನಹಳ್ಳಿ ಹಳ್ಳಿ ಪಟ್ಟಣದ ಬಳಿ ನಡೆದಿದೆ. ಕಾರಿನಲ್ಲಿದ್ದವರಿಗೆ ಸಣ್ಣ, ಪುಟ್ಟ ಗಾಯಗಳು ಹೊರತುಪಡಿಸಿದರೆ, ಯಾವುದೇ ಪ್ರಾಣಹಾನಿಯಿಲ್ಲ . ಮರಿಯಮ್ಮನಹಳ್ಳಿ ಹಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಕೊಡಗಿನ ಕೂಡ್ಲಿಪೇಟೆ ಅಪಘಾತದಲ್ಲಿ ಯುವಕ ಸಾವು
ಕೊಡಗಿನ ಕೊಡ್ಲಿಪೇಟೆಯಲ್ಲಿ ಸಂಭವಿಸಿದ ಅಪಘಾತದಲ್ಲಿ 27 ವರ್ಷದ ಮೋಹನ್ ಕುಮಾರ್ ಮೃತಪಟ್ಟಿದ್ದಾನೆ. ಮೋಹನ್ ಕುಮಾರ್ ಕೊಡ್ಲಿಪೇಟೆ ಸಮೀಪದ ಮಾವಿನಹಳ್ಳಿ ನಿವಾಸಿಯಾಗಿದ್ದ. ಅಂಚೆ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿದ್ದ ಮೋಹನ್ ಕುಮಾರ್ ಕರ್ತವ್ಯ ಮುಗಿಸಿ ಮನೆಗೆ ಹೋಗುವಾಗ ಚಿಕ್ಕಾಕುಂದ ಸಮೀಪ ಬೈಕ್ ಅಪಘಾತಕ್ಕೀಡಾಗಿದೆ. ಮಳೆ ಕಾರಣ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಅಪಘಾತದ ತೀವ್ರತೆ ಹೆಚ್ಚಾಗಿದ್ದ ಕಾರಣ ಮೋಹನ್ ಕುಮಾರ್ ಮೃತಪಟ್ಟಿದ್ದಾರೆ.
