ಬೆಂಗಳೂರು(ಎ.03): ಎಂಜಿನಿಯರ್ಸ್ ಪ್ರತಿ ದಿನ ಹೊಸತನ್ನು ಆವಿಷ್ಕಾರ ಮಾಡತ್ತಲೇ ಇರುತ್ತಾರೆ. ಈ ಮೂಲಕ ಪರ್ಯಾಯ ಮಾರ್ಗ ಹಾಗೂ ಕಡಿಮೆ ವೆಚ್ಚರದಲ್ಲಿ ಕೆಲಸ ಪೂರ್ಣಗೊಳಿಸಲು ದಾರಿಗಳನ್ನು ಹುಡುಕುತ್ತಾರೆ. ಇದೀಗ ಬೆಂಗಳೂರಿನ ಎಂಜಿಯನರ್ಸ್ ವಿಶ್ವದಲ್ಲೇ ಮೊದಲ ಬಾರಿಗೆ ವಿಶೇಷ ಪ್ಲಾಸ್ಟಿಕ್ ತಯಾರಿಸಿದ್ದಾರೆ. ಈ ವಿಶೇಷ ಪ್ಲಾಸ್ಟಿಕ್ ಹೆಸರು ನೊರಿಲ್ GTX.

ಜಗತ್ತಿನ ಅತಿ ಎತ್ತರದ ರೈಲ್ವೆ ಬ್ರಿಡ್ಜ್: ಎಂಜಿನಿಯರಿಂಗ್ ಮೈಲುಗಲ್ಲು ಎಂದ ಸಚಿವ...

ಇದು ಸ್ಟೀಲ್‌ಗೆ ಪರ್ಯಾವಾಗಿ ಕಂಡು ಹಿಡಿಯಲಾಗಿದೆ. ವಿಶೇಷ ಅಂದರೆ ಸ್ಟೀಲ್‌ಗಿಂತ ಬಲಿಷ್ಠ, ಹೆಚ್ಚು ಬಾಳಿಕೆ ಬರುವ, ಕಡಿಮೆ ವೆಚ್ಚದ, ಕಡಿಮೆ ತೂಕದ ಹಾಗೂ ಮರು ಉಪಯೋಗಿಸುವ ಪ್ಲಾಸ್ಟಿಕ್ ಇದಾಗಿದೆ. ಸ್ಟೀಲ್‌ನಂತೆ ಬೆಂಡ್ ಮಾಡಬಹುದಾಗಿದೆ . ಪಿಎ ಪಾಲಿಮರ್‌ನ ರಾಸಾಯನಿಕ ಪ್ರತಿರೋಧ ಮತ್ತು ಹರಿವಿನೊಂದಿಗೆ PPE ಪಾಲಿಮರ್‌ನ  ಸ್ಥಿರತೆ, ಕಡಿಮೆ ನೀರು ಹೀರಿಕೊಳ್ಳುವಿಕೆ ಮತ್ತು ಶಾಖ ನಿರೋಧಕತೆಯನ್ನು ಈ  ನೊರಿಲ್ GTX ಹೊಂದಿದೆ.

ಬೆಂಗಳೂರಿನಲ್ಲಿ ಸೆಬಿಕ್ ಪೆಟ್ರೋಕೆಮಿಕಲ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಈ ವಿಶೇಷ ಪ್ಲಾಸ್ಟಿಕ್ ನಿರ್ಮಾಣ ಮಾಡಲಾಗಿದೆ. ಸೆಬಿಕ್ ಪೆಟ್ರೋಕೆಮಿಕಲ್  ಸೌದಿ ಅರೆಬಿಯಾದ ಕಂಪನಿಯಾಗಿದ್ದು, ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ವಿಶ್ವದ ಹಲವು ದೇಶದಲ್ಲಿ ಶಾಖೆಗಳನ್ನು ಹೊಂದಿದೆ.

ಬರಲಿದೆ, ವಿಶ್ವದ ಮೊದಲ ಬ್ಯಾಟರಿ ರೈಲು: ಬೆಂಗಳೂರಲ್ಲಿ ವಿನ್ಯಾಸವಾದ ಬ್ಯಾಟರಿ!

ಸಾಮಾನ್ಯವಾಗಿ ಪ್ಲಾಸ್ಟಿಕ್ ಅನ್ನು ಹೆಚ್ಚಿನ ತಾಪಮಾನದೊಂದಿಗೆ ಸಂಯೋಜಿಸುವುದಿಲ್ಲ. ಕಾರಣ ಪ್ಲಾಸ್ಟಿಕ್ ಕರಗುತ್ತದೆ. ಅಥವಾ ನಾಶವಾಗುತ್ತದೆ.  ಆದರೆ ನಾವು ಹೆಚ್ಚಿನ ತಾಪಮಾನದಲ್ಲಿ ಮತ್ತು ಸಾಂಪ್ರದಾಯಿಕ ಲೋಹಗಳನ್ನು ಬದಲಿಸುವಂತಹ ಪಾಲಿಮರ್‌ಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಸೆಬಿಕ್ ಪೆಟ್ರೋಕೆಮಿಕಲ್ ಕಂಪನಿಯ ಸೌತ್ ಈಸ್ಟ್ ಏಷ್ಯಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದ ರೀಜನಲ್ ಹೆಡ್ ಜನಾರ್ಧನ ರಾಮಾನುಜಲು ಹೇಳಿದ್ದಾರೆ.