ಜಗತ್ತಿನ ಅತಿ ಎತ್ತರದ ರೈಲ್ವೆ ಬ್ರಿಡ್ಜ್: ಎಂಜಿನಿಯರಿಂಗ್ ಮೈಲುಗಲ್ಲು ಎಂದ ಸಚಿವ
ಜಗತ್ತಿನ ಅತ್ಯಂತ ಎತ್ತರದ ರೈಲ್ವೆ ಬ್ರಿಡ್ಜ್ ಕೆಲಸ ಬಹುತೇಕ ಪೂರ್ಣ | ಇದು ಎಂಜಿನಿಯರಿಂಗ್ ಮೈಲುಗಲ್ಲು ಎಂದ ಸಚಿವ

ಕೌರಿ ಪ್ರದೇಶದ ಚೆನಾಬ್ ನದಿಯ ಮೇಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆ ಮತ್ತೊಂದು ಎಂಜಿನಿಯರಿಂಗ್ ಮೈಲಿಗಲ್ಲು ತಲುಪಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ಚೆನಾಬ್ ಸೇತುವೆಯ ಉಕ್ಕಿನ ಕಮಾನು ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು ಭಾರತೀಯ ರೈಲ್ವೆ ಮತ್ತೊಂದು ಎಂಜಿನಿಯರಿಂಗ್ ಮೈಲಿಗಲ್ಲು ಸಾಧಿಸುವ ಹಾದಿಯಲ್ಲಿದೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಲು ಸಜ್ಜಾಗಿದೆ ಎಂದು ಗೋಯಲ್ ತಿಳಿಸಿದ್ದಾರೆ.
ಸ್ಥಳದಲ್ಲೇ ಲಸಿಕೆ ನೋಂದಣಿಗೆ ಅವಕಾಶ: ಕೋ- ವಿನ್ 2.0 ಆ್ಯಪ್ ಬಿಡುಗಡೆ!
ಈ ವರ್ಷ ಮಾರ್ಚ್ ಕೊನೆಯಲ್ಲಿ ಸೇತುವೆ ಪೂರ್ಣವಾಗಲಿದೆ. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್) ಉದಾಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಲಿಂಕ್ (ಯುಎಸ್‌ಬಿಆರ್ಎಲ್) ಯೋಜನೆಯಡಿ 111 ಕಿ.ಮೀ ಉದ್ದದ ಚೆನಾಬ್ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದು ರೈಲ್ವೆ ಮೂಲಕ ಕಣಿವೆ ಪ್ರದೇಶಗಳನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.
ಕಾಶ್ಮೀರದಲ್ಲಿ ವಿಶ್ವದ ಅತೀ ಎತ್ತರದ ರೈಲ್ವೆ ಬ್ರಿಜ್; ಇದು ಐಫೆಲ್ ಟವರ್'ಗಿಂತಲೂ ಎತ್ತರದ್ದು
ರೈಲ್ವೆ ಅಧಿಕಾರಿಗಳ ಪ್ರಕಾರ ಚೆನಾಬ್ ಸೇತುವೆಯನ್ನು ಚೆನಾಬ್ ನದಿಯ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಿದೆ (ಇದು 324 ಮೀಟರ್ ಎತ್ತರವನ್ನು ಹೊಂದಿದೆ).