ಆಕಾಸಾ ಏರ್‌ಗೆ ಬಾಂಬ್ ಬೆದರಿಕೆ, 174 ಪ್ರಯಾಣಿಕರೊಂದಿಗೆ ಬೆಂಗಳೂರಿಗೆ ಹೊರಟಿದ್ದ ವಿಮಾನ ದೆಹಲಿಗೆ ವಾಪಸ್!
ಭಾರತದ ವಿಮಾನಯಾನ ಕಂಪನಿಗಳಿಗೆ ಬಾಂಬ್ ಬೆದರಿಕೆ ಕರೆಗಳು ಮುಂದುವರಿದಿದ್ದು, ಬುಧವಾರ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಆಕಾಸಾ ಏರ್ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಇದರ ಬೆನ್ನಲ್ಲಿಯೇ ವಿಮಾನ ದೆಹಲಿಗೆ ವಾಪಸಾಗಿದೆ.
ನವದೆಹಲಿ (ಅ.16): ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬುಧವಾರವೂ ಮುಂದುವರಿದಿದೆ. ದೆಹಲಿ-ಬೆಂಗಳೂರು ನಡುವಿನ ಆಕಾಸಾ ಏರ್ ವಿಮಾನವು ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಆಕಾಸಾ ಏರ್ ನಿರ್ವಹಣರ ಮಾಡುವ ವಿಮಾನ - QP 1335 ಮಧ್ಯಾಹ್ನ 12.16 ಕ್ಕೆ ದೆಹಲಿಯಿಂದ ಹೊರಟಿತ್ತು. ಫ್ಲೈಟ್ ಟ್ರ್ಯಾಕಿಂಗ್ ಡೇಟಾದ ಪ್ರಕಾರ ಹಾರಾಟ ಆರಂಭಿಸಿ ಒಂದು ಗಂಟೆ ಆಗುವ ಮುನ್ನವೇ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿತ್ತು. ಇದರಿಂದಾಗಿ ಬೋಯಿಂಗ್ 737 ವಿಮಾನ ದೆಹಲಿಗೆ ವಾಪಸಾಗಿ, ಮಧ್ಯಾಹ್ನ 2 ಗಂಟೆಗೆ ದೆಹಲಿ ಏರ್‌ಪೋರ್ಟ್‌ನಲ್ಲಿ ಇಳಿದಿದೆ. ಕಳೆದ ಮೂರು ದಿನಗಳಲ್ಲಿ ಭಾರತದ ವಿಮಾನಯಾನ ಕಂಪನಿಯ ವಿಮಾನಗಳಿಗೆ ಬಂದಿರುವ 12ನೇ ಬಾಂಬ್ ಬೆದರಿಕೆ ಕರೆಯಾಗಿದೆ. ಏರ್ ಇಂಡಿಯಾದ 2 ಹಾಗೂ ಇಂಡಿಗೋದ 1 ಅಂತಾರಾಷ್ಟ್ರೀಯ ವಿಮಾನಗಳಿಗೆ ಸೋಮವಾರ ಬಾಂಬ್ ಬದರಿಕೆ ಕರೆ ಬಂದಿದ್ದರೆ, ಮಂಗಳವಾರ ದೇಶದ ಪ್ರಮುಖ ವಿಮಾನಯಾನ ಕಂಪನಿಗಳ 8 ವಿಮಾಗಳಿಗೆ ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು. ಸೋಮವಾರ ಮತ್ತು ಮಂಗಳವಾರದ ಎಲ್ಲಾ ಬೆದರಿಕೆಗಳು ಸೋಶಿಯಲ್ ಮೀಡಿಯಾ ಅಕೌಂಟ್‌ಗಳಿಂದ ಬಂದಿದ್ದು, ಕೊನೆಗೆ ಇವೆಲ್ಲವೂ ನಕಲಿ ಎಂದು ಹೇಳಲಾಗಿದೆ.
ವಿಮಾನದ ಕ್ಯಾಪ್ಟನ್ ಅಗತ್ಯವಿರುವ ಎಲ್ಲಾ ತುರ್ತು ವಿಧಾನಗಳನ್ನು ಅನುಸರಿಸಿದರು, ವಿಮಾನವನ್ನು ದೆಹಲಿಗೆ ಹಿಂತಿರುಗಿಸಿದರು ಮತ್ತು ಮಧ್ಯಾಹ್ನ 1.48 ಕ್ಕೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಆಕಾಸಾ ಏರ್ ಪ್ರಕಟಣೆಯ ಮೂಲಕ ತಿಳಿಸಿದೆ “ನಿಗದಿತ ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಪ್ರಕಾರ, ವಿಮಾನವನ್ನು ಲ್ಯಾಂಡಿಂಗ್ ನಂತರ ಪ್ರತ್ಯೇಕ ವಿಭಾಗಕ್ಕೆ ಕೊಂಡೊಯ್ಯಲಾಯಿತು. ಅಗತ್ಯ ಸುರಕ್ಷತೆ ಮತ್ತು ಭದ್ರತಾ ತಪಾಸಣೆಗಳನ್ನು ಕೈಗೊಂಡ ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಎಲ್ಲಾ ಪ್ರಯಾಣಿಕರನ್ನು ಮಧ್ಯಾಹ್ನ 1.57 ಕ್ಕೆ ಇಳಿಸಲಾಯಿತು' ಎಂದು ತಿಳಿಸಿದೆ.
'ಆಕಾಸಾ ಏರ್ ವಿಮಾನ ಕ್ಯೂಪಿ 1335, 174 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಇದರಲ್ಲಿ 3 ಶಿಶಿಗಳು ಹಾಗೂ 7 ಮಂದಿ ಸಿಬ್ಬಂದಿ ಕೂಡ ಸೇರಿದ್ದರು. ಈ ಹಂತದಲ್ಲಿ ಭದ್ರತಾ ಅಲರ್ಟ್‌ಅನ್ನು ರಿಸೀವ್ ಮಾಡಲಾಗಿತ್ತು' ಎಂದು ಆಕಾಸಾ ಏರ್ ವಕ್ತಾರ ತಿಳಿಸಿದ್ದಾರೆ. ಏರ್‌ಲೈನ್‌ನ ತುರ್ತು ಪ್ರತಿಕ್ರಿಯೆ ತಂಡಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದವು ಮತ್ತು "ಹೆಚ್ಚು ಮುನ್ನೆಚ್ಚರಿಕೆ" ಯೊಂದಿಗೆ ವಿಮಾನವನ್ನು ದೆಹಲಿಗೆ ತಿರುಗಿಸಲು ಪೈಲಟ್‌ಗೆ ಸಲಹೆ ನೀಡಿದ್ದರು.
ಭದ್ರತಾ ಕಾಳಜಿಯ ಸ್ವರೂಪ ಅಥವಾ ಬಾಂಬ್ ಬೆದರಿಕೆಯ ಮೂಲವನ್ನು ವಿಮಾನಯಾನ ಕಂಪನಿ ತಿಳಿಸಿಲ್ಲ. ಆಕಾಸಾ ಏರ್ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯದೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ. ಆಕಾಸಾ ಏರ್ ತಂಡಗಳು ಗ್ರೌಂಡ್‌ನಲ್ಲಿದ್ದು, ಎಲ್ಲಾ ಪ್ರಯಾಣಿಕರಿಗೆ ಅವರ ಸುರಕ್ಷತೆ ಮತ್ತು ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ಸಿದ್ಧವಾಗಿವೆ, ”ಎಂದು ಏರ್‌ಲೈನ್‌ನ ವಕ್ತಾರರು ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಜಗಳ ಶುರು ಮಾಡಿದ್ದೇ ಉಗ್ರಂ ಮಂಜು; ಶಕುನಿ ಪಟ್ಟ ಕೊಟ್ಟ ವೀಕ್ಷಕರು
ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾದ ಪ್ರೋಟೋಕಾಲ್‌ಗಳ ಪ್ರಕಾರ ವಿಮಾನ, ಪ್ರಯಾಣಿಕರು ಮತ್ತು ಅವರ ಬ್ಯಾಗ್‌ಗಳನ್ನು ಭದ್ರತಾ ಏಜೆನ್ಸಿಗಳು ಪರೀಕ್ಷಿಸುತ್ತವೆ. ಸ್ಕ್ರೀನಿಂಗ್ ಮತ್ತು ಭದ್ರತಾ ತಪಾಸಣೆಯ ನಂತರ, ಬೆದರಿಕೆ ಸುಳ್ಳು ಎಂದು ಕಂಡುಬಂದರೆ, ವಿಮಾನವನ್ನು ಕಾರ್ಯಾಚರಣೆಗೆ ಬಿಡುಗಡೆ ಮಾಡಲಾಗುತ್ತದೆ. ಹೆಚ್ಚಿನ ಬಾಂಬ್ ಬೆದರಿಕೆಗಳು ನಕಲಿ ಎಂದು ಕಂಡುಬಂದರೂ, ವಿಮಾನಯಾನ ಸಂಸ್ಥೆಗಳು ಮತ್ತು ವಾಯುಯಾನ ಅಧಿಕಾರಿಗಳು ಜಾಗತಿಕವಾಗಿ ಅವುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಾರೆ.
ಬೆಂಗಳೂರು ಮಳೆ: ಸಾವಿನ ಕದ ತಟ್ಟಿಬಂದ ಅನುಭವ ಹಂಚಿಕೊಂಡ ಫ್ಲಿಪ್‌ಕಾರ್ಟ್ ಉದ್ಯೋಗಿ!