ಬೆಂಗಳೂರಿನಿಂದ ಆಯೋಧ್ಯೆ ತಲುಪಿದ ಬರೋಬ್ಬರಿ 2.5 ಕೋಟಿ ರೂ ಮೌಲ್ಯದ ಶ್ರೀರಾಮ ಕಲಾಚಿತ್ರ, ಭಾರಿ ಭದ್ರತೆ, ಹಲವು ಅಂತರದ ಸುರಕ್ಷತೆಯೊಂದಿಗೆ ಶ್ರೀರಾಮನ ಅದ್ಭುತ ಕಲಾಚಿತ್ರ ಆಯೋಧ್ಯೆ ರಾಮ ಮಂದಿರ ತಲುಪಿದೆ. 

ಆಯೋಧ್ಯೆ (ಡಿ.25) ಬೆಂಗಳೂರಿನಲ್ಲಿ ತಯಾರಾದ ಅತ್ಯಮೂಲ್ಯ ಶ್ರೀರಾಮನ ಕಲಾಚಿತ್ರ ಇದೀಗ ಆಯೋಧ್ಯೆ ತಲುಪಿದೆ. ತಂಜಾವೂರು ಶಿಲಿಯ ಈ ಶಿಲ್ಪಕಲಾ ಚಿತ್ರ ಚಿನ್ನದ ಲೇಪನ, ರತ್ನಗಳು, ಹವಳ ಸೇರಿದಂತೆ ಹಲವು ಅತ್ಯಮೂಲ್ಯ ವಸ್ತುಗಳಿಂದ ತಯಾರಿಸಲ್ಪಟ್ಟಿದೆ. ಈ ಆರ್ಟ್ ವರ್ಕ್ ಮೌಲ್ಯ ಬರೋಬ್ಬರಿ 2.5 ಕೋಟಿ ರೂಪಾಯಿ. ಸಾಂಸ್ಕೃತಿಕ ಹಿರಿಮೆಯ ಈ ಶಿಲ್ಪಕಲಾಚಿತ್ರ ಇದೀಗ ಪ್ರಮುಖ ಆಕರ್ಷಣೆಯಾಗಿದೆ. ಈ ವಿಶೇಷ ಶಿಲ್ಪ ಕಲಾಚಿತ್ರವನ್ನು ಬೆಂಗಳೂರಿನ ಜಯಶ್ರಿ ಫನೀಶ್ ಆಯೋಧ್ಯೆಗೆ ದೇಣಿಗೆಯಾಗಿ ನೀಡಿದ್ದಾರೆ.

12 ಅಡಿ ಎತ್ತರ, 800 ಕೆಜಿ ತೂಕ

ಅತ್ಯಮ್ಯೂಲ್ಯ ವಸ್ತುಗಳಿಂದ ತಯಾರಿಸಿದ ಈ ಶ್ರೀರಾಮನ ಶಿಲ್ಪಾ ಕಲಾಚಿತ್ರ 12 ಅಡಿ ಎತ್ತರ, 8 ಅಡಿ ಅಗಲವಿದೆ. ಇದರ ಒಟ್ಟು ತೂಕ 800 ಕೆಜಿ. ಈ ಅತ್ಯಮೂಲ್ಯ ಶ್ರೀರಾಮನ ಶಿಲ್ಪಾ ಕಲಾಚಿತ್ರವನ್ನು ಅತ್ಯಂತ ಸುರಕ್ಷಿತವಾಗಿ ಬೆಂಗಳೂರಿನಿಂದ ಆಯೋಧ್ಯೆಗೆ ಸಾಗಿಸಲಾಗಿದೆ. ಮರದ ಬಾಕ್ಸ್ ತಯಾರಿಸಿ ಅದರೊಳಗೆ ಈ ಶ್ರೀರಾಮನ ಶಿಲ್ಪಕಾಲಚಿತ್ರವನ್ನು ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಇಟ್ಟು ಭದ್ರವಾಗಿ ಸೀಲ್ ಮಾಡಿ ಸಾಗಿಸಲಾಗಿದೆ. ಜೊತೆಗೆ ಬೆಂಗಳೂರಿನಿಂದ ಆಯೋಧ್ಯೆ ತಲುಪುವರಗೆ ಈ ಶಿಲ್ಪಾಕಲಾಚಿತ್ರಕ್ಕೆ ಭದ್ರತೆಯನ್ನು ಒದಗಿಸಲಾಗಿದೆ.

ಬೆಂಗಳೂರಿನಿಂದ ಆಯೋಧ್ಯೆಗೆ 6 ದಿನದ ಪ್ರಯಾಣ

ಅತ್ಯಮ್ಯೂಲ್ಯ 2.5 ಕೋಟಿ ಬೆಲೆ ಬಾಳುವ ಶ್ರೀರಾಮನ ಶಿಲ್ಪಾ ಕಲಾಚಿತ್ರವನ್ನು ಬೆಂಗಳೂರಿನಿಂದ ಆಯೋಧ್ಯೆಗೆ ಸಾಗಿಸಲು 6 ದಿನ ತೆಗೆದುಕೊಂಡಿದೆ. 1,900 ಕಿಲೋಮೀಟರ್ ದೂರ ಕ್ರಮಿಸಿದೆ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶದ ಮೂಲಕ ಉತ್ತರ ಪ್ರದೇಶದ ಆಯೋಧ್ಯೆಗೆ ತಲುಪಿದೆ. ಪ್ರತಿ ಹಂತದಲ್ಲಿ ಆಯಾ ವಿಭಾಗದ, ಠಾಣ ವ್ಯಾಪ್ತಿಯ ಪೊಲೀಸರು ಭದ್ರತೆ ನೀಡಿದೆ. ಉತ್ತರ ಪ್ರದೇಶಕ್ಕೆ ಎಂಟ್ರಿಯಾಗುತ್ತಿದ್ದಂತೆ ಅತೀವ ಚಳಿ ಹಾಗೂ ಮಂಜಿನ ವಾತಾವರಣದಿಂದ ಟ್ರಕ್ ಕೊಂಚ ನಿಧಾನವಾಗಿ ಸಾಗಿದೆ. ಇನ್ನು ಕ್ರೇನ್ ಬಳಸಿ ಈ ಶಿಲ್ಪಕಲಾಚಿತ್ರವನ್ನು ಲೋಡ್ ಹಾಗೂ ಅನ್‌ಲೋಡ್ ಮಾಡಲಾಗಿದೆ.

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಪೈಂಟಿಂಗ್ ಹಸ್ತಾಂತರ

ಆಯೋಧ್ಯೆ ತಲುಪಿದ ಈ ವಿಶೇಷ ಆರ್ಟ್ ವರ್ಕ್‌ನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು. ಈ ಕುರಿತ ವಿಡಿಯೋವನ್ನು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹಂಚಿಕೊಂಡಿದ್ದಾರೆ.

View post on Instagram