ಅಂತ್ಯಸಂಸ್ಕಾರ ನಡೆದ 18 ದಿನದ ಬಳಿಕ ಮೃತ ಅಜ್ಜಿ ಪತ್ತೆ!

  • ಕೋವಿಡ್‌ ಸೋಂಕು ತಗುಲಿ ಆಸ್ಪತ್ರೆಗೆ ಸೇರಿದ್ದ ವೃದ್ದೆ
  • ಅಂತ್ಯಸಂಸ್ಕಾರ ನಡೆಸಿದ 18 ದಿನಗಳ ಬಳಿಕ ವಯೋವೃದ್ಧೆ ಪ್ರತ್ಯಕ್ಷ
  • ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಜಗ್ಗಯ್ಯ ಪೇಟಾ ನಗರದಲ್ಲಿ ಘಟನೆ
Believed To Be Dead  Covid Positive Woman Back To home after cremation  snr

ಹೈದರಾಬಾದ್‌ (ಜೂ.04):ಕೋವಿಡ್‌ ಸೋಂಕು ತಗುಲಿ ಮೃತಪಟ್ಟ ವಯೋವೃದ್ಧೆಯ ಅಂತ್ಯಸಂಸ್ಕಾರ ನಡೆಸಿದ 18 ದಿನಗಳ ಬಳಿಕ ವಯೋವೃದ್ಧೆ ಪ್ರತ್ಯಕ್ಷಳಾಗಿರುವ ಅಚ್ಚರಿಯ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಜಗ್ಗಯ್ಯ ಪೇಟಾ ನಗರದಲ್ಲಿ ನಡೆದಿದೆ.

"

75 ವರ್ಷದ ಗಿರಿಜಮ್ಮ ಎಂಬವರು ಕೋವಿಡ್‌ ಸೋಂಕಿಗೆ ತುತ್ತಾಗಿ ವಿಜಯವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಮೂರು ದಿನಗಳ ಬಳಿಕ, ಮೇ 15ರಂದು ಪತಿ ಮುತ್ಯಾಲಾ ಗಡ್ಡಯ್ಯ ಪತ್ನಿಗಾಗಿ ಕೋವಿಡ್‌ ವಾರ್ಡ್‌ನಲ್ಲಿ ಹುಡುಕಾಟ ನಡೆಸಿದಾಗ ಗಿರಿಜಮ್ಮ ನಾಪತ್ತೆಯಾಗಿದ್ದರು. ಅಂತಿಮವಾಗಿ ಶವಗಾರಕ್ಕೆ ಹೋಗಿ ನೋಡಿದರೆ ಅದೇ ಅಜ್ಜಿ ಹೋಲುವ ಶವ ಪತ್ತೆಯಾಗಿತ್ತು. ಕುಟುಂಬಸ್ಥರು ಆ ಶವ ಪಡೆದು ಅಂತ್ಯಕ್ರಿಯೆ ನೇರವೇರಿಸಿದ್ದರು. ಈ ನಡುವೆ ಅಜ್ಜಿಯ ಮಗ ರಮೇಶ ಕೂಡ ಸೋಂಕಿಗೆ ಬಲಿಯಾಗಿದ್ದ.

ಕೋಡಿಮಠದ ಶ್ರೀಗಳಿಂದ ಸ್ಫೋಟಕ ಭವಿಷ್ಯ : ಕೊರೋನಾ ಕೊನೆಯಾಗುತ್ತಾ-ಮತ್ತೇನು ಕಾದಿದೆ ಜಗಕೆ..?

ಈ ಮಧ್ಯೆ ಆಸ್ಪತ್ರೆಯಲ್ಲೇ ಕೋವಿಡ್‌ ಚೇತರಿಸಿಕೊಂಡ ಗಿರಿಜಮ್ಮ ಎಷ್ಟುದಿನವಾದರೂ ಮನೆಯವರು ಬರದಿದ್ದಾಗ ಜೂ.1ರಂದು ತಾವೇ ಮನೆಗೆ ಬಂದಿದ್ದಾರೆ. ಬಳಿಕ ಆಸ್ಪತ್ರೆ ಯಡವಟ್ಟಿಂದಾಗಿ ಕುಟುಂಬಸ್ಥರು ಬೇರೊಂದು ಕುಟುಂಬದ ಶವಕ್ಕೆ ಅಂತ್ಯಸಂಸ್ಕಾರ ನಡೆಸಿದ್ದ ವಿಷಯ ಬಹಿರಂಗವಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios