ಜೂನ್ 07ರ ಬಳಿಕವೂ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ: ಸಿಎಂ ಅಧಿಕೃತ ಘೋಷಣೆ

* ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆ
* ಜೂನ್ 7ರ ಬಳಿಕೆವೂ ಒಂದು ವಾರ ಲಾಕ್‌ಡೌನ್ ಮುಂದುವರಿಕೆ
* ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪನವರಿಂದ ಅಧಿಕೃತ ಘೋಷಣೆ

 

lockdown extension In Karnataka till June 14th Says CM BSY rbj

ಬೆಂಗಳೂರು, (ಜೂನ್.03): ಇದೇ ಜೂನ್ 07ರ ಬಳಿಕೆ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ? ಬೇಡವೋ ಎನ್ನುವ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ.

"

ಈ ಬಗ್ಗೆ ಇಂದು (ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಒಂದು ವಾರ ಅಂದ್ರೆ ಜೂನ್ 14ರ ವರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗುತ್ತದೆ. ಪಾಸಿಟಿವಿಟಿ ಕಡೆಮೆಯಾಗುವವರೆಗೂ ಅನ್‌ಲಾಕ್‌ ಮಾತೇ ಇಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಸಿಎಂ ಸಭೆ ಅಂತ್ಯ: ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆಗೆ ನಿರ್ಧಾರ, ಎಷ್ಟು ದಿನ..?

 ಕೋವಿಡ್ ಸಾಂಕ್ರಾಮಿಕ ಸೋಂಕನ್ನು ಸಂಪೂರ್ಣ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಕ್ತವೆಂದು ಪರಿಗಣಿಸಿ ಈ ಹಿಂದೆ ಜೂನ್ 7ರವರೆಗೆ ಜಾರಿಗೊಳಿಸಲಾಗಿತ್ತು. ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಕೂಡ, ವೈರಾಣು ಹರಡುವಿಕೆ ಮುಂದುವರೆದಿದೆ. ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಮುಂದುವರೆಸೋದು ಸೂಕ್ತ ಎಂದು ಪರಿಗಣಿಸಿ ಜೂನ್14ರ ವರೆಗೆ ಒಂದು ವಾರ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಬಾರಿ ಲಾಕ್ ಡೌನ್ ನಡುವೆಯೂ ಹೋಟೆಲ್, ಬಾಸ್ ಸಂಜೆಯವರೆಗೆ ತೆರೆಯಬಹುದು. ಆದ್ರೆ, ಪಾರ್ಸಲ್ ಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಈ ಹಿಂದಿನ ಮಾರ್ಗಸೂಚಿ ಕ್ರಮಗಳೇ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದರು.

ಈಗ ಸದ್ಯಕ್ಕೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಒಂದು ವಾರದಲ್ಲೇ ಶೇ.5ರಷ್ಟು ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗುವ ನಿರೀಕ್ಷೆ ಇದೆ. ಒಂದು ವೇಳೆ ಹಾಗೆ ಆದ್ರೇ.. ಲಾಕ್ ಡೌನ್ ನಿರ್ಬಂಧ ವಾಪಾಸ್ ಪಡೆಯಲಾಗುತ್ತದೆ ಎಂದರು.

Latest Videos
Follow Us:
Download App:
  • android
  • ios