ವಧುವಿನ ತಂಗಿಗೆ ತಾಳಿ ಕಟ್ಟಿದ ವರ ಮದುವೆ ವೇಳೆ ಕರೆಂಟು ಹೋಗಿ ಎಡವಟ್ಟು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಘಟನೆ

ಮಧ್ಯಪ್ರದೇಶ: ತಾಳಿ ಕಟ್ಟುವ ವೇಳೆ ವಿದ್ಯುತ್ ಸ್ಥಗಿತಗೊಂಡು ವರನೊಬ್ಬ ವಧುವಿನ ಬದಲಾಗಿ ಆಕೆಯ ತಂಗಿಗೆ ತಾಳಿ ಕಟ್ಟಿದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ರಮೇಶ್ ಲಾಲ್‌ ಎಂಬುವವರ ಇಬ್ಬರು ಪುತ್ರಿಯರಾದ ನಿಕಿತಾ ಹಾಗೂ ಕರಿಷ್ಮಾ ಅವರಿಗೆ ಕ್ರಮವಾಗಿ ಬೇರೆ ಬೇರೆ ಕುಟುಂಬದ ಇಬ್ಬರು ಹುಡುಗರಾದ ದಂಗ್ವಾರ ಗ್ರಾಮದ ಭೊಲ ಹಾಗೂ ಗಣೇಶ್ ಎಂಬುವರೊಂದಿಗೆ ವಿವಾಹ ನಿಗದಿಯಾಗಿತ್ತು. ಆದರೆ ಮದುವೆ ವೇಳೆ ವಧುಗಳು ಮಾಸ್ಕ್‌ ಜೊತೆಗೆ ಮುಖ ಕಾಣದಂತೆ ಶಾಲು ಧರಿಸಿದ್ದರಿಂದ ಅದರ ಜೊತೆಗೆ ವಿದ್ಯುತ್ ಕೂಡ ಕೈ ಕೊಟ್ಟಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮದುವೆ ದಿನ ದೊಡ್ಡ ಸಹೋದರಿ ಹಾಗೂ ಆಕೆಯ ತಂಗಿ ಒಂದೇ ರೀತಿಯ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರು. ಇಬ್ಬರು ಸಹೋದರಿಯರ ಮದುವೆಯನ್ನು ಒಟ್ಟಿಗೆ ನಿಶ್ಚಯಿಸಲಾಗಿತ್ತು. ಇಲ್ಲಿನ ಬಿಲ್ ಸಮುದಾಯದ ಕುಟುಂಬವೊಂದರ ಮದುವೆಯಲ್ಲಿ ಈ ಅನಾಹುತ ನಡೆದಿದೆ. ಧೀರ್ಘಕಾಲ ಕರೆಂಟು ಹೋದರೂ ಇಲ್ಲಿ ಜನರೇಟರ್‌ನ್ನು ಕೂಡ ವ್ಯವಸ್ಥೆ ಮಾಡಿಲ್ಲ. ಇದರಿಂದ ಎಲ್ಲೆಡೆ ಕತ್ತಲೆ ಆವರಿಸಿದ್ದು, ಕತ್ತಲೆಯ ಮಧ್ಯೆಯೇ ವಧುಗಳು ಬದಲಾಗಿದ್ದು ವರ ವಧುವಿನ ತಂಗಿಗೆ ತಾಳಿ ಕಟ್ಟಿದ್ದಾರೆ.

ಮೂರಡಿ ಹುಡುಗನೊಂದಿಗೆ ಎರಡಡಿ ಹುಡುಗಿಯ ಮದ್ವೆ..ಅಪರೂಪದ ಜೋಡಿಗೆ ಶುಭ ಹಾರೈಸಿ..!

ಮದುವೆ ಮುಗಿದ ನಂತರ ಸಹೋದರಿಯರನ್ನು ಅವರ ಅತ್ತೆ ಮನೆಗಳಿಗೆ ಪೋಷಕರು ಕಳುಹಿಸಿ ಕೊಟ್ಟಿದ್ದಾರೆ. ಅಲ್ಲಿಯವರೆಗೂ ವಧುಗಳು ಬದಲಾದ ಬಗ್ಗೆ ಯಾರ ಗಮನಕ್ಕೂ ಬಂಧಿರಲಿಲ್ಲ. ನಂತರ ವಧು ದಂಗ್ವಾರದಲ್ಲಿರುವ ತನ್ನ ಅತ್ತೆ ಮನೆಗೆ ಬಂದಾಗ ಅಲ್ಲಿ ಮದುವೆ ದಿಬ್ಬಣದ ವೇಳೆ ವಧು ಬದಲಾಗಿರುವುದು ತಿಳಿದು ಬಂದಿದೆ.

ಅಮ್ಮನಿಗೆ ಚಿಕಿತ್ಸೆ ಕೊಡಿಸಲು ಬಂದ ಯುವತಿಯ ಪ್ರೀತಿಯಲ್ಲಿ ಬಿದ್ದ ಡಾಕ್ಟರ್, ಏಳೇ ದಿನದಲ್ಲಿ ಮದುವೆ!

ವಧು ಬದಲಾಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಎರಡು ಕುಟುಂಬಗಳ ಮಧ್ಯೆ ದೊಡ್ಡ ವಿವಾದ ಶುರುವಾಗಿದೆ. ವಧುವಿನ ಅತ್ತೆ ಮನೆಯವರು ಹಾಗೂ ಬಂಧುಗಳು ವಧು ಬದಲಾಗಿರುವುದನ್ನು ಗಮನಿಸಿ ಶಾಕ್‌ಗೆ ಒಳಗಾಗಿದ್ದಾರೆ. ನಂತರ ವಧು ಹಾಗೂ ವರನ ಫೋಷಕರೆಲ್ಲರೂ ಒಂದು ಕಡೆ ಸೇರಿ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ನಿಖಿತಾ ಎಂಬ ವಧುವನ್ನು ಮದುವೆಯಾಗಬೇಕಿದ್ದ ವರ ಗಣೇಶ್‌ (Ganesh Bhola) ಪುರೋಹಿತರು ಮತ್ತೊಮ್ಮೆ ಸರಿಯಾದ ವಧುವಿನೊಂದಿಗೆ ವಿವಾಹ ನೆರವೇರಿಸಿದ್ದಾರೆ ಎಂದು ಹೇಳಿದ್ದಾರೆ.