ಉತ್ತರ ಪ್ರದೇಶದಲ್ಲಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಉದ್ಯಮಿ ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಪತ್ನಿಯೊಂದಿಗೆ ಕುಣಿಯುತ್ತಿದ್ದಾಗ ಹೃದಯಾಘಾತ ಸಂಭವಿಸಿದೆ.
ಲಕ್ನೋ (ಏ.4): ಆತ ಉದ್ಯಮಿ, ಜೀವನದಲ್ಲಿ ಬಹಳ ಕಷ್ಟಪಟ್ಟು ಇತ್ತೀಚಿನ ವರ್ಷಗಳ ನೆಮ್ಮದಿಯ ಜೀವನ ನಡೆಸುತ್ತಿದ್ದ. ಆತನ ಜೀವನದ ಜೀವನದ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದು ಆಕೆಯ ಪತ್ನಿ. ಇತ್ತೀಚೆಗೆ ಈ ಜೋಡಿ ತಮ್ಮ 25ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಭರ್ಜರಿಯಾಗಿ ಆಚರಣೆ ಮಾಡಿತ್ತು. ಆದರೆ, 50 ವರ್ಷದ ವ್ಯಕ್ತಿಯ ಸಂಭ್ರಮ ದೇವರಿಗೆ ಇಷ್ಟವಾಗಲಿಲ್ಲ. ತನ್ನ ಪತ್ನಿಯ ಜೊತೆ ವೇದಿಕೆಯಲ್ಲಿ ಡಾನ್ಸ್ ಮಾಡುವಾಗಲೇ ಹೃದಯಾಘಾತವಾಗಿದೆ. ಇಡೀ ಕುಟುಂಬ ಇವರ ಸಂಭ್ರಮವನ್ನು ನೋಡುವ ವೇಳೆಗಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿ ವೇದಿಕೆಯಲ್ಲಿಯೇ ಪ್ರಾಣ ಬಿಟ್ಟಿದ್ದ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬರೇಲಿಯಲ್ಲಿ 50 ವರ್ಷದ ವಸೀಮ್ ಇತ್ತೀಚೆಗೆ ತಮ್ಮ 25ನೇ ವರ್ಷದ ವಿವಾಹ ವಾರ್ಷಿಕೋತ್ಸವನನ್ನು ಫಾಹಮ್ ಲಾನ್ಸ್‌ನಲ್ಲಿ ಆಚರಿಸಿದ್ದರು. ಪತ್ನಿ ಫರ್ಹಾ ಜೊತೆ ಡಾನ್ಸ್ ಮಾಡುವಾಗಲೇ ವಸೀಮ್‌ಗೆ ಹೃದಯಾಘಾತವಾಗಿ ಸಾವು ಕಂಡಿದ್ದಾರೆ. ಅಲ್ಲಿಯೇ ಅವರನ್ನು ಬದುಕಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಯಿತಾದರೂ, ಕಾರ್ಡಿಯಾಕ್ ಅರೆಸ್ಟ್‌ನಿಂದ ವಸೀಮ್ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಭಾರೀ ಪ್ರಮಾಣದಲ್ಲಿ ವೈರಲ್ ಆಗಿದೆ. ಬುಧವಾರ ಸಂಜೆ ಫಾಹಮ್ ಲಾನ್ಸ್‌ನಲ್ಲಿ ಈ ಘಟನೆ ನಡೆದಿದೆ. ಕಣ್ಣ ಎದುರಲ್ಲೇ ಡಾನ್ಸ್ ಮಾಡಿ ಸಂಭ್ರಮಿಸುತ್ತಿದ್ದ ವ್ಯಕ್ತಿ ಸಾವಾಗಿದ್ದನ್ನು ಕಂಡು ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಹಾಗೂ ಕುಟುಂಬಸ್ಥರಿಗೂ ಆಘಾತವಾಗಿದೆ.
ವಾಸೀಂ ಹಾಗೂ ಫರ್ಹಾ ಮದುವೆಯಾಗಿ ಇತ್ತೀಚೆಗೆ 25 ವರ್ಷಗಳಾಗಿತ್ತು. ಅದನ್ನು ಕುಟುಂಬದ ಆಪ್ತರೊಂದಿಗೆ ಸಂಭ್ರಮಿಸಲು ಫಾಹಮ್ ಲಾನ್ಸ್‌ನಲ್ಲಿ ದೊಡ್ಡ ಪಾರ್ಟಿ ಏರ್ಪಾಡು ಮಾಡಿದ್ದರು. ಇನ್ನು ಕಾರ್ಯಕ್ರಮದ ಇನ್ವಿಟೇಷನ್ ಕಾರ್ಡ್‌ಗಳನ್ನು ಇವರು ಸ್ವತಃ ಹಂಚಿದ್ದರು, ಇದರಲ್ಲಿ 'ಇನ್ನೂ ಮುಂದೆ ಹೋಗೋದು ಬಾಕಿ ಇದೆ. ವಾಸಿಂಹ್ ಹಾಗೂ ಫರ್ಹಾರ 25ನೇ ಮದುವೆ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ' ಎಂದು ಬರೆಯಲಾಗಿತ್ತು.
ಕಾರ್ಯಕ್ರಮದಲ್ಲಿ ವಾಸಿಂ, ತಮ್ಮ ಪತ್ನಿಯೊಂದಿಗೆ ಡಾನ್ಸ್ ಮಾಡುತ್ತಿರುವುದು ಕಂಡಿದೆ. ಇಡೀ ಕುಟುಂಬದವರು ನಗುತ್ತಲೇ ಅವರ ಅಕ್ಕಪಕ್ಕದಲ್ಲಿ, ಸ್ಟೇಜ್‌ನ ಕೆಳಗೆ ನಿಂತಿರುವುದು ಕಂಡಿದೆ. ಆದರೆ, ವಾಸಿಂ ಇದ್ದಕ್ಕಿಂದ ಹಾಗೆ ಸ್ಟೇಜ್‌ನಲ್ಲಿ ಕುಸಿದು ಬಿದ್ದಿದ್ದಾರೆ. ಅವರನ್ನು ಬದುಕಿಸುವ ಪ್ರಯತ್ನ ನಡೆಸುವ ಪ್ರಯತ್ನ ಯಶಸ್ವಿಯಾಗಲಿಲ್ಲ. ಅವರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ ಎಂದು ಘೋಷಿಸಲಾಗಿತ್ತು.
ಕುಡಿದ ಮತ್ತಿನಲ್ಲಿ ವಧುವಿನ ಬದಲು ಸ್ನೇಹಿತನ ಕೊರಳಿಗೆ ಹಾರ ಹಾಕಿದ ವರ..!
ಅಷ್ಟು ದಿಢೀರ್ ಆಗಿ ಅವರು ಕುಸಿದು ಬೀಳಲು ಕಾರಣವೇನು ಅನ್ನೋದನ್ನು ತನಿಖೆ ಮಾಡಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿರಬಹುದು ಎನ್ನಲಾಗಿದೆ.
