ರಾಮ್ಗಢದಲ್ಲಿ ಹೋಮ್ಗಾರ್ಡ್ ನೇಮಕಾತಿಯ 1600 ಮೀಟರ್ ಓಟದಲ್ಲಿ ಸೀರೆಯುಟ್ಟು, ಬರಿಗಾಲಿನಲ್ಲಿ ಓಡಿ ಕವಿತಾ ದೇವಿ ಗಮನ ಸೆಳೆದಿದ್ದರು. ಆದರೆ, ನಂತರ ನಡೆದ ಹೈಜಂಪ್ ಪರೀಕ್ಷೆಯಲ್ಲಿ ಅವರು ವಿಫಲರಾಗಿದ್ದಾರೆ. ಇದರಿಂದಾಗಿ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅವರ ಹೋಮ್ ಗಾರ್ಡ್ ಆಗುವ ಕನಸು ನುಚ್ಚುನೂರಾಗಿದೆ.
ರಾಂಚಿ: ಅದು ಅಕ್ಟೋಬರ್ 25, ರಾಮ್ಗಢ ಜಿಲ್ಲೆಯ ಹೋಮ್ಗಾರ್ಡ್ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡ ಕವಿತಾ ಅವರು ಸೀರೆಯಲ್ಲಿಯೇ, ಯಾವುದೇ ಚಪ್ಪಲಿ ಧರಿಸದೆ ಓಡುವ ಮೂಲಕ ದೇಶದ ಗಮನ ಸೆಳೆದಿದ್ದರು. ಆದರೆ ಮುಂದಿನ ಹಂತದ ಪರೀಕ್ಷೆಯಲ್ಲಿ ಕವಿತಾ ಅವರಿಗೆ ನಿರಾಸೆ ಎದುರಾಗಿದ್ದು, ಹೋಮ್ ಗಾರ್ಡ್ ಆಗಬೇಕು ಎಂಬ ಅವರ ಕನಸು ನುಚ್ಚುನೂರಾಗಿದೆ.
ಹೈಜಂಪ್ನಲ್ಲಿ ಅರ್ಹತೆ ಸಾಧಿಸಲು ವಿಫಲ
ದೈಹಿಕ ಪರೀಕ್ಷೆಯ ಮೊದಲ ಸುತ್ತಿನಲ್ಲಿ 1600 ಮೀಟರ್ ರನ್ನಿಂಗ್ನಲ್ಲಿ ಕವಿತಾ ಸುಲಭವಾಗಿ ಗೆಲುವು ಪಡೆದಿದ್ದರು. ಆದರೆ ಆ ಬಳಿಕ ನಡೆದ ಹೈಜಂಪ್ ಸ್ಪರ್ಧೆಯಲ್ಲೂ ಇದೇ ರೀತಿ ಗೆಲುವು ಪಡೆಯುತ್ತಾರೆ ಎಂದು ಭಾವಿಸಿಲಾಗಿತ್ತು. ಆದರೆ ಹೈಜಂಪ್ ಅರ್ಹತೆಯನ್ನು ಪೂರ್ಣಗೊಳಿಸುವುದರಲ್ಲಿ ಅವರು ವಿಫಲರಾಗಿದ್ದಾರೆ.
ಬೆಳಗ್ಗೆ ಐದು ಗಂಟೆಗೆ ಮನೆಯಿಂದ ಹೊರಟ ಸಂದರ್ಭದಲ್ಲಿ ಹೈಜಂಪ್ನಲ್ಲಿ ಕಾಲು ಜಾರಿ ಅವರ ಕನಸು ನುಚ್ಚುನೂರಾಗಿದೆ. ಈ ಶಾಕ್ ನಿಂದ ಆಕೆ ಹೊರಬರಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು, ಕವಿತಾಗೆ ಉಚಿತವಾಗಿ ಕೋಚಿಂಗ್ ನೀಡಿದ್ದ ಅಂಕಿತ್ ತಿಳಿಸಿದ್ದಾರೆ.
ಇಡೀ ಕುಟುಂಬದ ಜವಾಬ್ದಾರಿ ಕವಿತಾ ದೇವಿ ಹೆಗಲಿಗೆ
ಐದು ವರ್ಷಗಳ ಕಾಲ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕವಿತಾ ದೇವಿ ಪತಿ 2023ರಲ್ಲಿ ಸಾವನ್ನಪ್ಪಿದ್ದರು. ಈ ಸಮಯದಲ್ಲಿ ಪತಿಯ ಆರೋಗ್ಯ ಸಮಸ್ಯೆಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಮಾಡಿದ್ದ ಖರ್ಚಿನಿಂದ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಇದರೊಂದಿಗೆ ಮನೆಯಲ್ಲಿದ್ದ ಮಾವ-ಅತ್ತೆ, ಮಗಳು ಹಾಗು ಪುತ್ರಿಯ ಸಂಪೂರ್ಣ ಜವಾಬ್ದಾರಿ ಕವಿತಾ ಹೆಗಲ ಮೇಲೆ ಬಿದ್ದಿತ್ತು. ಮನೆಯವರ ಪೋಷಣೆಗಾಗಿ ಕೂಲಿ ಕೆಲಸಕ್ಕೆ ಹೋಗಲು ಆರಂಭ ಮಾಡಿದ್ದರು.
ಇನ್ನು, ರಾಮ್ಗಢ್ನಲ್ಲಿ ಹೋಮ್ಗಾರ್ಡ್ ನೇಮಕ ಕುರಿತಂತೆ ನೋಟಿಫಿಕೇಶನ್ ಬಂದ ಸಂದರ್ಭದಲ್ಲಿ ಕವಿತಾ ದೇವಿ ಅವರಿಗೆ ಹೊರ ಹೊಸ ಭರವಸೆ ಮೂಡಿತ್ತು. ಇಂಟರ್ ವರೆಗೂ ಶಿಕ್ಷಣ ಪಡೆದಿದ್ದ ಕಾರಣ ಆಕೆಗೆ ಹೋಮ್ ಗಾರ್ಡ್ ಆಗಬೇಕು. ಇದರಿಂದ ಮಕ್ಕಳಿಗೆ ಒಳ್ಳೆಯ ಭವಿಷ್ಯ ಸಿಗಬಹುದು ಎಂದು ಆಕೆ ಚಿಂತನೆ ಮಾಡಿದ್ದರು. ಇದೇ ಆಸೆಯೊಂದಿಗೆ ಪ್ರಯತ್ನವನ್ನು ಆರಂಭಿಸಿದ್ದರು. ಇದಕ್ಕೆ ಕುಟುಂಬಸ್ಥರು ಕೂಡ ಪ್ರೋತ್ಸಾಹ ನೀಡಿದ್ದರು.
ಕವಿತಾ ಎದುರಾದ ವೈಫಲ್ಯ ಏನು ಹೇಳುತ್ತದೆ?
ಸೆಪ್ಟೆಂಬರ್ 4ರಂದು ಉಚಿತ ಕೋಚಿಂಗ್ ಸೆಂಟರ್ ಟ್ರಯಲ್ನಲ್ಲಿ ಪಾಲ್ಗೊಂಡ ಕವಿತಾ, ನಿಗದಿತ ಸಮಯಕ್ಕಿಂತ ಮುನ್ನವೇ 1600 ಮೀಟರ್ ರನ್ನಿಂಗ್ ಅನ್ನು ಪೂರ್ಣಗೊಳಿಸಿದ್ದರು. ಸೀರೆಯಲ್ಲೇ ಕಾಲಿಗೆ ಚಪಲಿಯೂ ಇಲ್ಲದೆ ರನ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದರೊಂದಿಗೆ ಕವಿತಾ ಅವರಿಗೆ ಭಾರೀ ಪ್ರಶಂಸೆಗಳು ಹರಿದು ಬಂದಿತ್ತು.
ಆ ಬಳಿಕ ಕವಿತಾ ಅವರಿಗೆ ರನ್ನಿಂಗ್ ಶೂ, ಟ್ರಾಕ್ ಸೂಟ್, ಟ್ರೈನಿಂಗ್ ಕಿಟ್ ಅನ್ನು ಉಚಿತವಾಗಿ ನೀಡಿದ್ದರು. ಕೋಚ್ ಬೆಂಬಲ ಹಾಗೂ ಜನರ ಪ್ರೋತ್ಸಾಹ ಕವಿತಾ ಅವರಿಗೆ ಭಾರೀ ಭರವಸೆ ಮೂಡಿಸಿತ್ತು. ಇದರಂತೆ ಅಕ್ಟೋಬರ್ 25ರಂದು ಹೋಮ್ ಗಾರ್ಡ್ ಪರೀಕ್ಷೆಯಲ್ಲಿ ಕವಿತಾ 1600 ಮೀಟರ್ ರೇಸ್ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಆದರೆ ಹೈಜಂಪ್ನಲ್ಲಿ ವಿಫಲರಾಗಿದ್ದರು. ಇದರೊಂದಿಗೆ ಹಲವು ತಿಂಗಳುಗಳ ಕಾಲ ಶ್ರಮವಹಿಸಿದ್ದ ಕವಿತಾ ಅವರ ಕನಸುಗಳು ಒಂದು ಕ್ಷಣದಲ್ಲಿ ವಿಫಲವಾಗಿದ್ದವು. ಕವಿತಾ ಅವರಿಗೆ ಎದುರಾದ ವೈಫಲ್ಯ ಒಂದು ಪರೀಕ್ಷೆಯಲ್ಲಿ ಎದುರಾದ ವೈಫಲ್ಯ ಅಷ್ಟೇ ಅಲ್ಲ, ಒಂದು ಪ್ರತಿಭೆಯುಳ್ಳ ವ್ಯಕ್ತಿಯ ಕನಸುಗಳು ಸೂಕ್ತ ಮೂಲಭೂತ ಸೌಲಭ್ಯಗಳು ಇಲ್ಲದೆ ಹೇಗೆ ನುಚ್ಚುನೂರಾಯ್ತು ಎಂಬುವುದಕ್ಕೆ ತಾಜಾ ಉದಾಹರಣೆಯಾಗಿದೆ.






