Asianet Suvarna News Asianet Suvarna News

ಬಾರಾಮತಿ ಲೋಕಸಭಾ ಕ್ಷೇತ್ರ: ಅತ್ತಿಗೆಯ ಹಿಂದಿಕ್ಕಿ ಗೆಲುವಿನತ್ತ ಸುಪ್ರಿಯಾ ಸುಲೆ ದಾಪುಗಾಲು

ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಅತ್ತಿಗೆ ನಾದಿನಿಯರ ಸ್ಪರ್ದೆಯಿಂದ ತೀವ್ರ ಕುತೂಹಲ ಕೆರಳಿಸಿತ್ತು. ಈ ಕ್ಷೇತ್ರದಲ್ಲಿ ಈಗ ಅತ್ತಿಗೆ ಹಾಗೂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಹಿಂದಿಕ್ಕಿ ಸುಪ್ರೀಯಾ ಸುಲೆ ಮುನ್ನಡೆ ಸಾಧಿಸಿದ್ದಾರೆ

Baramati Lok Sabha Constituency Supriya Sule leads to victory against sister-in-law sunetra pawar akb
Author
First Published Jun 4, 2024, 12:00 PM IST

ಬಾರಾಮತಿ: ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಅತ್ತಿಗೆ ನಾದಿನಿಯರ ಸ್ಪರ್ದೆಯಿಂದ ತೀವ್ರ ಕುತೂಹಲ ಕೆರಳಿಸಿತ್ತು. ಈ ಕ್ಷೇತ್ರದಲ್ಲಿ ಈಗ ಅತ್ತಿಗೆ ಹಾಗೂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಹಿಂದಿಕ್ಕಿ ಸುಪ್ರೀಯಾ ಸುಲೆ ಮುನ್ನಡೆ ಸಾಧಿಸಿದ್ದಾರೆ. ಸುಪ್ರಿಯಾ ಸುಲೆ ಇಲ್ಲಿ ಮೂರನೇ ಬಾರಿ ಕಣಕ್ಕಿಳಿದಿದ್ದರೆ ಇತ್ತ ಸುನೇತ್ರಾ ಪವಾರ್ ಅವರಿಗೆ ಇದು ಚೊಚ್ಚಲ ಚುನಾವಣೆ. 

ಸುಪ್ರಿಯಾ ಸುಲೆ ಶರದ್ ಪವಾರ್ ಅವರ ಪುತ್ರಿಯಾಗಿದ್ದು, ಈ ಕ್ಷೇತ್ರದ ಹಾಲಿ ಸಂಸದರೂ ಹೌದು. ಪ್ರತಿ ಚುನಾವಣೆಯಲ್ಲಿ ನಾದಿನಿ ಸುಪ್ರಿಯಾ ಸುಲೆ ಅವರನ್ನು ಬೆಂಬಲಿಸುತ್ತಿದ್ದ ಅಜಿತ್ ಪವಾರ್ ಪತ್ನಿ ಸುನೇತ್ರಾ ರಾಜಕೀಯ ಮಿಶ್ರಿತ ಕೌಟುಂಬಿಕ ಕಲಹದ ಕಾರಣದಿಂದಾಗಿ ನಾದಿನಿ ಸುಪ್ರಿಯಾ ಸುಲೆ ವಿರುದ್ಧವೇ ಈ ಬಾರಿ ಸ್ಪರ್ಧೆ ಮಾಡಿದ್ದಾರೆ. ಇವರಿಬ್ಬರ ಈ ಸ್ಪರ್ಧೆ ಬಾರಾಮತಿ ಲೋಕಸಭಾ ಕ್ಷೇತ್ರಕ್ಕೆ ಬೇರೆಯದೇ ರಂಗು ನೀಡಿದ್ದು, ಇಲ್ಲಿ ಪವಾರ್ ವರ್ಸಸ್ ಪವಾರ್ ಸ್ಪರ್ಧೆ ಎಂದೇ ಬಿಂಬಿತವಾಗಿತ್ತು. 

ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಅತ್ತಿಗೆ ನಾದಿನಿಯರ ಸಮರ: ಅಜಿತ್ ಪತ್ನಿ, ಶರದ್ ಪವಾರ್ ಪುತ್ರಿ ಕಣದಲ್ಲಿ

ಇನ್ನುಅತ್ತಿಗೆಯೇ ತಮ್ಮ ವಿರುದ್ಧ ಸ್ಪರ್ಧೆ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ನಾದಿನಿ ಸುಪ್ರಿಯಾ, ಸುನೇತ್ರಾ ಅವರು ನನ್ನ ಹಿರಿಯ ಅಣ್ಣನ ಹೆಂಡತಿ, ಹಾಗಾಗಿ ನನಗೆ ಅತ್ತಿಗೆ, ಅತ್ತಿಗೆ ಎಂದರೆ ಅಮ್ಮನ ಸಮಾನ ಎಂದು ಹೇಳಿದ್ದಾರೆ. ಸುಪ್ರಿಯಾ ಸುಲೆ ಇಲ್ಲಿ ಮೂರನೇ ಬಾರಿ ಕಣಕ್ಕಿಳಿದಿದ್ದಾರೆ. 1960ರಿಂದಲೂ ಬಾರಾಮತಿ ಲೋಕಸಭಾ ಕ್ಷೇತ್ರವೂ ಶರದ್ ಪವಾರ್ ಅವರ ಬಿಗಿ ಹಿಡಿತವನ್ನು ಹೊಂದಿದೆ. ಇತ್ತ ಅಜಿತ್ ಪವಾರ್ 1991ರಿಂದಲೂ ಬಾರಾಮತಿ ಕ್ಷೇತ್ರದ ಶಾಸಕರಾಗಿದ್ದಾರೆ.  ಈ ಕ್ಷೇತ್ರವು ಮಹಾರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಿಸಬಲ್ಲ ಶಕ್ತಿ ಇರುವುದರಿಂದ ದೇಶದ ಗಮನ ಸೆಳೆಯುತ್ತಿದೆ.

Latest Videos
Follow Us:
Download App:
  • android
  • ios