ಲಕ್ನೋ[ಡಿ.11]: ಉತ್ತರ ಪ್ರದೇಶದಲ್ಲಿ ವರನೊಬ್ಬ ಮದುವೆ ಮಂಟಪಕ್ಕೆ ಬರುವುದು ತಡವಾಯಿತೆಂದು, ಮಧುಮಗಳು ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಘಟನೆ ವಾರದ ಹಿಂದೆ ನಡೆದಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವರನನ್ನು ರಿಜೆಕ್ಟ್ ಮಾಡಿದ ಯುವತಿ, ಮದುವೆ ಕಾರ್ಯಕ್ರಮ ನಡೆಯಬೇಕಿದ್ದ ಮರುದಿನ ಸ್ಥಳೀಯ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಾಳೆ. ಮಾಧ್ಯಮಗಳ ವರದಿಯನ್ವಯ ಈ ಯುವತಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದಳು. ಬಳಿಕ ಖಾಸಗಿ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ವರ ಬರಲು ತಡ ಮಾಡಿದ್ದರಿಂದ ಆಕೆ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿದ್ದಾಳೆ.

ಒಂದೇ ಮಂಟಪದಲ್ಲಿ ಅಕ್ಕ, ತಂಗಿಯನ್ನು ಮದುವೆಯಾದ: ಕೊಟ್ಟ ಕಾರಣ ಮಾತ್ರ ವಿಚಿತ್ರ!

ಧಾಮ್ಪುರದಿಂದ ವರ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದ ಆರತಕ್ಷತೆ ಕಾರ್ಯಕ್ರಮಕ್ಕೆ ದಿಬ್ಬಣದೊಂದಿಗೆ ಹುಡುಗಿ ಮನೆಗೆ ಹೊರಟಿದ್ದ. ಆದರೆ ಮಧ್ಯಾಹ್ನ ತಲುಪಬೇಕಿದ್ದ ಆತ, ಮಧ್ಯರಾತ್ರಿ ತಲುಪಿದ್ದಾನೆ. ಅಲ್ಲದೇ ಎರಡೂ ಕುಟುಂಬದ ನಡುವೆ ವರದಕ್ಷಿಣೆ ವಿಚಾರವಾಗಿ ಜಗಳವೂ ಆಗಿದೆ. ಇದರಿಂದ ಮಧುಮಗಳು ಹಾಗೂ ಆಕೆಯ ಕುಟುಂಬ ಸದಸ್ಯರು ಚಿಂತೆಗೀಡಾಗಿದ್ದಾರೆ.

ವರದಕ್ಷಿಣೆ ವಿಚಾರವೆತ್ತಿದ್ದರಿಂದ ಕುಪಿತರಾದ ವಧುವಿನ ಕುಟುಂಬ ಸದಸ್ಯರು, ಮದುವೆ ಗಂಡು ಹಾಗೂ ಆತನ ಕುಟುಂಬ ಸದಸ್ಯರನ್ನು ಬಂಧಿಸಿದ್ದಾರೆ. ಅಲ್ಲದೇ ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡಿದ್ದಾರೆ. ಅಂತಿಮವಾಗಿ ಅವರನ್ನು ರಕ್ಷಿಸಲು ಪೊಲೀಸರು ಆಗಮಿಸಿದ್ದಾರೆ.

ಎರಡೂ ಕುಟುಂಬದವರು ಕೊನೆಗೆ ಒಪ್ಪಂದವೊಂದನ್ನು ಮಾಡಿ ಈ ವಿಚಾರವನ್ನು ಕೈ ಬಿಟ್ಟಿದ್ದಾರೆ. ಆದರೆ ಮಧುಮಗಳು ವರನ ಜೊತೆ ಹೋಗಲು ಹಿಂದೇಟು ಹಾಕಿದ್ದಾಳೆ. ಅಲ್ಲದೇ ಮರುದಿನ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿದ್ದಾಳೆ.

ಆ್ಯನಿವರ್ಸರಿಗೆ ಓಲ್ಡ್‌ ಫೋಟೋ ರಿವೀಲ್; ಯಶ್‌ಗೆ ರಾಧಿಕಾ ಸ್ಪೆಷಲ್‌ ವಿಶ್!