ಸ್ಯಾಂಡಲ್‌ವುಡ್ ಹಿಟ್ ಕಪಲ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಂದು 3 ನೇ ವಿವಾಹ ವಾರ್ಷಿಕೋತ್ಸವಕ್ಕೆ ಕಾಲಿಟ್ಟಿದ್ದಾರೆ. ಇದರ ಪ್ರಯುಕ್ತ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಪೆಷಲ್  ವಿಶ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್ ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ ಇಂದು 3ನೇ ವರ್ಷದ ವಾರ್ಷಿಕೋತ್ಸವಕ್ಕೆ ಕಾಲಿಟ್ಟಿದ್ದು ರಾಧಿಕಾ ಪಂಡಿತ್ ತಮ್ಮ ಹಳೆಯ ಫೋಟೋ ಶೇರ್ ಮಾಡಿ ಪತಿಗೆ ವಿಶ್ ಮಾಡಿದ್ದಾರೆ. ಈ ಪೋಟೋವನ್ನು ರಾಧಿಕಾ ಕುಮಾರಸ್ವಾಮಿ ನಿರ್ಮಾಣದ 'ಲಕ್ಕಿ' ಚಿತ್ರದ ಸಮಯದಲ್ಲಿ ತೆಗೆದಿರುವುದು ಅನಿಸುತ್ತದೆ.

ರಾಕಿಂಗ್ ಪ್ರಿನ್ಸಸ್ Ayra 'ಕ್ಯಾಂಡಿ' ಥೀಮ್ ಬರ್ತಡೇ ಫೋಟೋಗಳಿವು!

''ನಾನು ತುಂಬಾ ಹಳೆ ಫೋಟೋ ಶೇರ್ ಮಾಡಿದ್ದೀನಿ. ಇದರ ಅರ್ಥ ನಮ್ಮದು ಕೇವಲ 3 ವರ್ಷದ ಮದುವೆ ಅಲ್ಲ. ಎಷ್ಟೋ ವರ್ಷದ ಸಂಬಂಧ ಎಂದು. ಹ್ಯಾಪಿ ಆ್ಯನಿವರ್ಸರಿ ಮೈ ಸೋಲ್ ಮೇಟ್ ( ಫೋಟೋ ಕ್ಲಾರಿಟಿ ಬಗ್ಗೆ ಕ್ಷಮಿಸಿ) ಎಂದು ಬರೆದುಕೊಂಡು ವಿಶ್ ಮಾಡಿದ್ದಾರೆ. 

View post on Instagram

ಇವರಿಬ್ಬರ ಲವ್ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್‌. 'ಮೊಗ್ಗಿನ ಮನಸು'ನಿಂದ ಅರಳಿದ ಪ್ರೀತಿ 'ಸಂತು ಸ್ಟ್ರೇಟ್‌ ಫಾರ್ವರ್ಡ್‌' ವರೆಗೂ ಹಿಟ್‌ ಆಗಿತ್ತು. ಡಿಸೆಂಬರ್ 9, 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಾಗೂ ಡಿಸೆಂಬರ್ 2, 2018 ರಲ್ಲಿ ಲಿಟಲ್ ಏಂಜಲ್‌ ಐರಾಳನ್ನು ಬರ ಮಾಡಿಕೊಂಡರು. ಅಷ್ಟೇ ಅಲ್ಲದೆ ಅಕ್ಟೋಬರ್ 30 ರಂದು ಜೂನಿಯರ್ ರಾಕಿ ಬಾಯ್‌ನ ಬರ ಮಾಡಿಕೊಂಡರು.

ರಾಧಿಕಾ ಎರಡನೇ ಬೇಬಿ ಶವರ್; ಐರಾ ಕಾಣಿಸಿಕೊಂಡಿದ್ದು ಹೀಗೆ!