*ಐಪಿಎಲ್‌ನಲ್ಲಿ 10ಲಕ್ಷ ಕಳೆದುಕೊಂಡಿದ್ದ ಬ್ಯಾಂಕ್‌ ಉದ್ಯೋಗಿ*ಸೇನಾ ಯೋಧ ಸೇರಿದಂತೆ ಇನ್ನೊಬ್ಬನ ಜತೆ  ATMಗೆ ಕನ್ನ*ದೀಪಾವಳಿ ರಜೆ ಮೇಲೆ ಮನೆಗೆ ಬಂದಿದ್ದ ಸೇನಾ ಯೋಧ*ಪಾಟ್ನಾದ ಇಂಡಿಕ್ಯಾಶ್ ಎಟಿಎಂ ಲೂಟಿ ಆರೋಪ..! 

ಬಿಹಾರ(ನ.14): ಹೆಚ್‌ಡಿಎಫ್‌ಸಿ ಬ್ಯಾಂಕ್‌ನ (HDFC Bank) ಉದ್ಯೋಗಿಯೊಬ್ಬರು ಐಪಿಎಲ್ (IPL) ಪಂದ್ಯಗಳ ಬೆಟ್ಟಿಂಗ್‌ನಲ್ಲಿ (Betting) 10 ಲಕ್ಷ ರೂಪಾಯಿ ಕಳೆದುಕೊಂಡ ಹಿನ್ನೆಲೆ ಬಿಹಾರದ (Bihar) ಪಾಟ್ನಾದ ಪತ್ರಾಕರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಇಂಡಿಕ್ಯಾಶ್‌ನ (Indicash) ಎಟಿಎಂನಿಂದ ಹಣವನ್ನು ಲೂಟಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಒಬ್ಬ ಸೇನಾ ಯೋಧ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ.ಬಂಧಿತರನ್ನು ಪುಣೆಯ ಬ್ಯಾಂಕ್‌ನ ಬ್ಯಾನರ್ ಶಾಖೆಯಲ್ಲಿ ನಿಯೋಜಿಸಲಾದ ಎಚ್‌ಡಿಎಫ್‌ಸಿ ಉದ್ಯೋಗಿ ಕೀರ್ತಿ ಶುಭಂ (28), ಜಮ್ಮುವಿನಲ್ಲಿ ನಿಯೋಜಿಸಲಾದ ಯೋಧ ವಾಲ್ಮೀಕಿ ಕುಮಾರ್ (32) ಮತ್ತು ಸ್ನೇಹಿತ ರಾಹುಲ್ ಕುಮಾರ್ (28) ಎಂದು ಗುರುತಿಸಲಾಗಿದೆ. 

ಐಪಿಎಲ್ ಬೆಟ್ಟಿಂಗ್‌ನಲ್ಲಿ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದ!

ಪೊಲೀಸರ ಪ್ರಕಾರ, ಇಂಡಿಕ್ಯಾಶ್ ಎಟಿಎಂ ಅನ್ನು ಲೂಟಿ ಮಾಡಲು ಪ್ರಯತ್ನಿಸುವ ಮೊದಲು, ಮೂವರು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಅನ್ನು ಕಿತ್ತುಹಾಕಲು ಪ್ರಯತ್ನಿಸಿದರು. ಆದಾಗ್ಯೂ, ಅವರು ಅದನ್ನು ತೆರೆಯುವಲ್ಲಿ ಯಶಸ್ವಿಯಾಗಲಿಲ್ಲ. ನಂತರ ಅದೇ ಕಟ್ಟಡದಲ್ಲಿರುವ ಇಂಡಿಕ್ಯಾಶ್ ಎಟಿಎಂನಿಂದ ಹಣವನ್ನು ದೋಚಲು ನಿರ್ಧರಿಸಿದ್ದಾರೆ. ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂನಲ್ಲಿ 33 ಲಕ್ಷ ಹಾಗೂ ಇಂಡಿಕ್ಯಾಶ್ ಎಟಿಎಂನಲ್ಲಿ 2.5 ಲಕ್ಷ ರೂ ಹಣ ಇತ್ತು. ಅವರ ಅನುಮಾನಾಸ್ಪದ ಚಲನವಲನವನ್ನು ಮಾಹಿತಿದಾರರೊಬ್ಬರು ಗಮನಿಸಿದ ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Crime News: ಎಎಸ್‌ಐ ಆತ್ಮಹತ್ಯೆಗೆ ಶರಣು, ಗೋಡೆ ಕುಸಿದು ಬಾಲಕ ಸಾವು, ಮೂವರು ಬಾಲಕರು ನೀರುಪಾಲು

ವಿಚಾರಣೆ ವೇಳೆ, ಕೀರ್ತಿ ತಾನು ಐಪಿಎಲ್ ಬೆಟ್ಟಿಂಗ್‌ನಲ್ಲಿ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದೇನೆ ಮತ್ತು ತೀವ್ರ ಒತ್ತಡಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ. ವಾಲ್ಮೀಕಿ ದೀಪಾವಳಿ ಮತ್ತು ಛತ್‌ ಪೂಜಾ ರಜೆಯ ಮೇಲೆ ಮನೆಗೆ ಬಂದಿದ್ದರು. ಕೀರ್ತಿ ಆತನನ್ನು ರಾಹುಲ್‌ನೊಂದಿಗೆ ಅಪರಾಧ ಎಸಗಲು ಸೇರಿಕೊಂಡಿದ್ದಾರೆ” ಎಂದು ಪತ್ರಕರ್ ನಗರ (Patrakar Nagar) ಪೋಲಿಸ್‌ ಅಧಿಕಾರಿ ಮನೋರಂಜನ್ ಭಾರ್ತಿ (Manoranjan Bharti) ಹೇಳಿದ್ದಾರೆ.

ಪೆಟ್ರೋಲ್ ಪಂಪ್ ಸಿಬ್ಬಂದಿ ಮೇಲೆ ಹಲ್ಲೆ,ದರೋಡೆ!

ಆಗ್ರಾದ (Agra) ರುನಕ್ತಾ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಇಬ್ಬರು ಪೆಟ್ರೋಲ್ ಪಂಪ್ (Petrol Pump) ಉದ್ಯೋಗಿಗಳ ಮೇಲೆ ಬೈಕ್‌ನಲ್ಲಿ ಬಂದ ಮೂವರು 11 ಲಕ್ಷ ರೂಪಾಯಿ ಹಣವನ್ನು ದರೋಡೆ ಮಾಡಿದ ತಿಂಗಳುಗಳ ನಂತರ ಈ ಪ್ರಕರಣ ನಡೆದಿದೆ. ಪೆಟ್ರೋಲ್ ಪಂಪ್ ಕೆಲಸಗಾರರು, ಸೇಲ್ಸ್‌ಮ್ಯಾನ್ (Salesman) ಮತ್ತು ಕ್ಯಾಷಿಯರ್ (Cashier) ರುನಕ್ಟಾ ಪ್ರದೇಶದ ಬ್ಯಾಂಕ್‌ಗೆ ಹಣವನ್ನು ಠೇವಣಿ ಮಾಡಲು ಹೋಗುತ್ತಿದ್ದಾಗ ಈ ಅಪರಾಧ ಸಂಭವಿಸಿದೆ. ಬಂದೂಕು ಹಿಡಿದು ಬೈಕ್‌ನಲ್ಲಿ ಬಂದಿದ್ದ ಮೂವರು ಅಪರಿಚಿತರು ಗಾಳಿಯಲ್ಲಿ ಗುಂಡು ಹಾರಿಸಿ ಪೆಟ್ರೋಲ್ ಪಂಪ್ ಸಿಬ್ಬಂದಿಯಿಂದ ನಗದು (Cash) ಹಣವಿದ್ದ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆನೆ ಪಾದ ಸೇರಿ 1 ಕೋಟಿ ಮೌಲ್ಯದ ಪ್ರಾಚೀನ ವಸ್ತು ವಶ

ಬ್ರಿಟಿಷರ(British) ಕಾಲದ ಆನೆ ಪಾದ ಸೇರಿದಂತೆ ಪ್ರಾಚೀನ(Ancient) ಕಾಲದ ದುಬಾರಿ ಮೌಲ್ಯದ ವಸ್ತುಗಳನ್ನು ಹಾಡಹಗಲೇ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಟ್ಟಿಗೇನಹಳ್ಳಿ ನಿವಾಸಿ ಆರ್ಯನ್‌ ಖಾನ್‌(32) ಬಂಧಿತ(Arrest). ಕೆಲ ದಿನಗಳ ಹಿಂದೆ ಆರೋಪಿಯು(Accused) ಕಾಡುಗೊಂಡನಹಳ್ಳಿ ವ್ಯಾಪ್ತಿಯ ಜೆಎಸ್‌ಎಸ್‌ ಶಾಲೆ ರಸ್ತೆಯ ಬಿಡಿಎ ಕಾಂಪ್ಲೆಕ್ಸ್‌ ಹಿಂಭಾಗ ವನ್ಯಜೀವಿಗಳಿಗೆ(Wildlife) ಸಂಬಂಧಿಸಿದ ಹಾಗೂ ದೇಶ-ವಿದೇಶಗಳ ಪ್ರಾಚೀನ ಕಾಲದ ವಸ್ತುಗಳ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ(Raid) ನಡೆಸಿ ಮಾಲು ಸಮೇತ ಬಂಧಿಸಲಾಗಿದೆ.

Smuggling| ಆನೆ ಪಾದ ಸೇರಿ 1 ಕೋಟಿ ಮೌಲ್ಯದ ಪ್ರಾಚೀನ ವಸ್ತು ವಶ