Crime News: ಎಎಸ್‌ಐ ಆತ್ಮಹತ್ಯೆಗೆ ಶರಣು, ಗೋಡೆ ಕುಸಿದು ಬಾಲಕ ಸಾವು, ಮೂವರು ಬಾಲಕರು ನೀರುಪಾಲು

* ಮೈಸೂರಿನಲ್ಲಿ  ಎಎಸ್ ಐ ಆತ್ಮಹತ್ಯೆಗೆ ಶರಣು
* ಮಂಡ್ಯದಲ್ಲಿ ಗೋಡೆ ಕುಸಿದು ಬಾಲಕ ಸಾವು
* ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು

Mysuru Mandya Bengaluru and Davanagere district Crime News nov 14th rbj

ಮೈಸೂರು, (ನ.14) : ಟ್ರಾಫಿಕ್ ಎಎಸ್ ಐ ಒಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೌರಿ ಶಂಕರ ನಗರದಲ್ಲಿ ನಡೆದಿದೆ.

ವಿವಿಪುರಂ ಟ್ರಾಫಿಕ್ ಠಾಣೆಯ ಎಎಸ್ ಐ ಶಿವಕುಮಾರಸ್ವಾಮಿ(54) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಎಎಸ್ ಐ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Asianet Suvarna FIR :5 ಜನರ ಇಡೀ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ, ಇಲ್ಲಿದೆ ಪ್ರಕರಣದ ಅಸಲಿ ಕಥೆ

ಈ ಕುರಿತು ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯಿಂದ ಅವರ ಸಾವಿಗೆ ನಿಜವಾದ ಕಾರಣ ತಿಳಿದು ಬರಲಿದೆ.

 ಗೋಡೆ ಕುಸಿದು ಬಾಲಕ ಸಾವು
ಮಂಡ್ಯ: ಗೋಡೆ ಕುಸಿದು ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕ ಸಾವನ್ನಪ್ಪಿದ ದುರ್ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ನಡೆದಿದೆ. ಇಲ್ಲಿ ಮಳೆಗೆ ಗೋಡೆ ಕುಸಿದು ದುರ್ಘಟನೆ ಸಂಭವಿಸಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಗಗನ್ (10) ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಜವರೇಗೌಡ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿತಗೊಂಡಿದೆ. ಮನೆ ಪಕ್ಕದ ಕೊಟ್ಟಿಗೆಯಲ್ಲಿದ್ದ 2 ಹಸು, ಕುರಿಗಳೂ ಸಾವನ್ನಪ್ಪಿವೆ.

ಈಜಲು ಹೋಗಿದ್ದ ಮೂವರು ಬಾಲಕರು ಸಾವು
ದಾವಣಗೆರೆ: ಇಲ್ಲಿನ ಜಗಳೂರು ಕೆರೆಯಲ್ಲಿ ಈಜಲು ಹೋಗಿದ್ದ 3 ಬಾಲಕರು ನೀರುಪಾಲಾದ ಘಟನೆ ನಿನ್ನೆ (ನವೆಂಬರ್ 13) ನಡೆದಿತ್ತು. ನೀರುಪಾಲಾದ ಮಕ್ಕಳು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಿನ್ನೆ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕರು ನೀರುಪಾಲಾಗಿದ್ದರು. ಜಗಳೂರಿನ ಹೊರವಲಯದ ಕೆರೆಯಲ್ಲಿ ಘಟನೆ ನಡೆದಿತ್ತು. ಸೈಯದ್ (10), ಅಶ್ರಫ್ (7) ಮತ್ತು ಆಸೀಫ್ (5) ಮೃತಪಟ್ಟಿದ್ದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೃತ ಮಕ್ಕಳ ನಿವಾಸಕ್ಕೆ ಶಾಸಕ ಎಸ್.ವಿ. ರಾಮಚಂದ್ರ ಇಂದು ಭೇಟಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ನಿವಾಸಕ್ಕೆ ಭೇಟಿ ನೀಡಿ ಮೃತ ಬಾಲಕರ ಕುಟುಂಬಕ್ಕೆ  ವೈಯಕ್ತಿಕವಾಗಿ ತಲಾ 50 ಸಾವಿರ ರೂ. ನೀಡಿದ್ದಾರೆ.

ಎನ್​ಆರ್​ಐ ಲೇಔಟ್​ನ​ ಮನೆಯಲ್ಲಿ ಕಳ್ಳತನ
ಬೆಂಗಳೂರಿನ ಎನ್​ಆರ್​ಐ ಲೇಔಟ್​ನ ಮನೆಯಲ್ಲಿ ಕಳ್ಳತನವಾದ ಘಟನೆ ಇಂದು (ನವೆಂಬರ್ 14) ಸಂಭವಿಸಿದೆ. ಶಿವಾನಂದ, ವೇದಾವತಿ ದಂಪತಿ ಮನೆಯಲ್ಲಿ ಕಳ್ಳತನ ಆಗಿದೆ. ಬೆಳಗ್ಗೆ 10ರ ಸುಮಾರಿಗೆ ವೇದಾವತಿ ತಾಯಿ ಮನೆಗೆ ತೆರಳಿದ್ದರು. ಮಧ್ಯಾಹ್ನ 1 ಗಂಟೆಗೆ ಮನೆಗೆ ಹಿಂದಿರುಗುವಷ್ಟರಲ್ಲಿ ಕಳ್ಳತನ ಆಗಿದೆ. 40 ಗ್ರಾಮ್​ ಚಿನ್ನ, 4 ಸಾವಿರ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಬೆಳ್ಳಿ ಆಭರಣ ಬಿಟ್ಟು ಚಿನ್ನಾಭರಣ ಮಾತ್ರ ಕದ್ದೊಯ್ದಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

Latest Videos
Follow Us:
Download App:
  • android
  • ios