ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸಕ್ಕೆ ಬಾಂಗ್ಲಾ ಕೆಲ ಗುಂಪುಗಳ ಬೆಂಬಲ ಮೂಲಭೂತವಾದಿಗಳಿಂದ ತಾಲಿಬಾನ್‌ಗೆ ಬೆಂಬಲ, ಆಫ್ಘಾನಿಸ್ತಾನಕ್ಕೆ ತೆರಳಲು ನಿರ್ಧಾರ ಭಾರತ ಮೂಲಕ ಆಫ್ಗಾನ್ ಪ್ರವೇಶಿಸಲು ಸರ್ಕಸ್, ಗಡಿಯಲ್ಲಿ ಹೈಅಲರ್ಟ್ ಘೋಷಣೆ

ನವದೆಹಲಿ(ಆ.22): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಗ್ದ ಜನರ ಪ್ರಾಣ ಬಲಿತೆಗೆಯುತ್ತಿದೆ. ಆಫ್ಘಾನಿಸ್ತಾನ ತಾಲಿಬಾನ್ ಕೈವಶ ಮಾಡಿದ ಬಳಿಕ ಪಾಕಿಸ್ತಾನ, ಚೀನಾ ಸೇರಿದಂತ ಕೆಲ ರಾಷ್ಟ್ರಗಳು ಬಹಿರಂಗ ಬೆಂಬಲ ಸೂಚಿಸಿದೆ. ಇನ್ನು ಕೆಲ ಉಗ್ರ ಸಂಘಟನೆಗಳು ತಾಲಿಬಾನ್‌ಗೆ ಸಹಕಾರ ನೀಡುವುದಾಗಿ ಘೋಷಿಸಿದೆ. ಬಾಂಗ್ಲಾದೇಶದ ಕೆಲ ಮೂಲಭೂತವಾದಿಗಳು ತಾಲಿಬಾನ್‌ಗೆ ನೆರವು ನೀಡಲು ಆಫ್ಘಾನಿಸ್ತಾನಕ್ಕೆ ತೆರಳಲು ಮುಂದಾಗಿದೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ, ಭಾರತ-ಬಾಂಗ್ಲಾದೇಶ ಸೇರಿದಂತೆ ಅಂತಾರಾಷ್ಟ್ರೀಯ ಗಡಿಯಲ್ಲಿ ಹೈಅಲರ್ಟ್ ಘೋಷಿಸಿದೆ.

ಕಾಬೂಲ್‌ ಏರ್‌ಪೋರ್ಟ್‌ನಲ್ಲಿ 7 ಬ್ರಿಟನ್ ನಾಗರಿಕರ ಸಾವು!

ಆಫ್ಘಾನಿಸ್ತಾನದ ಮೂಲಭೂತವಾದಿ ಯುವಕರ ಗುಂಪು ಆಫ್ಘಾನಿಸ್ತಾನಕ್ಕೆ ತೆರಳಿ ತಾಲಿಬಾನ್‌ಗಳಿಗೆ ನೆರವು ನೀಡಲು ಮುಂದಾಗಿದೆ. ಈ ಯುವಕರ ಗುಂಪು ಹೇಗಾದರೂ ಮಾಡಿ ಆಫ್ಘಾನಿಸ್ತಾನ ಪ್ರವೇಶಿಸಲು ಮುಂದಾಗಿದೆ. ಹೀಗಾಗಿ ಭಾರತದ ಮೂಲಕ ಅಕ್ರಮವಾಗಿ ಆಫ್ಘಾನಿಸ್ತಾನ ಪ್ರವೇಶಕ್ಕೆ ಸರ್ಕಸ್ ಮಾಡುತ್ತಿದೆ. ಈ ಮೂಲಭೂತವಾದಿಗಳ ಗುಂಪಿಗೆ ಕೆಲ ಭಯೋತ್ಪಾದಕ ಸಂಘಟನೆಗಳ ನೆರವು ಸಿಕ್ಕಿದೆ ಎಂದು ಬಾಂಗ್ಲಾದೇಶ ರಾಜಧಾನಿ ಢಾಕ ಪೊಲೀಸ್ ಕಮೀಶನರ್ ಶಫೀಕುಲ್ ಇಸ್ಲಾಂ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಪ್ಘಾನ್‌ನಲ್ಲಿದ್ದ ಅಮೆರಿಕದ ಶಸ್ತ್ರಾಸ್ತ್ರ ಪಾಕಿಸ್ತಾನಕ್ಕೆ ರವಾನೆ: ಭಾರತಕ್ಕೆ ಕಂಟಕ?

ಮಹತ್ವದ ಎಚ್ಚರಿಕೆಯನ್ನು ಕೇಂದ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಭಾರತ ಹಾಗೂ ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತೆ ಹೆಚ್ಚಿಸಲು ಹೆಚ್ಚುವರಿ BSF ಯೋಧರನ್ನು ನಿಯೋಜಿಸಲಾಗಿದೆ. 

ತಾಲಿಬಾನ್ ಉಗ್ರ ಸಂಘಟನೆ ಸೇರಿಕೊಳ್ಳಲು ಬಾಂಗ್ಲಾದ ಯುವಕರು ಹವಣಿಸುತ್ತಿದ್ದಾರೆ. ಇತ್ತ ತಾಲಿಬಾನ್ ಕೂಡ ಯುವಕರ ಪಡೆಯ ಅವಶ್ಯಕವಿದೆ ಎಂದಿತ್ತು. ಹೀಗಾಗಿ ಮೂಲಭೂತವಾದಿಗಳು, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಹಲವರು ಇದೀಗ ತಾಲಿಬಾನ್ ಸೇರಿಕೊಳ್ಳಲು ಬಯಸುತ್ತಿದ್ದಾರೆ ಎಂದು ಶಫೀಕುಲ್ ಇಸ್ಲಾಂ ಹೇಳಿದ್ದಾರೆ.

ಭಾರತಕ್ಕೆ ಬಂದಿಳಿದ ಅಪ್ಘಾನ್ ಸಚಿವರು: ಪಿಎಂ ಮೋದಿ, ವಾಯುಪಡೆಗೆ ಧನ್ಯವಾದ!

ಭಾರತದ ವೀಸಾ ಪಡೆದುಕೊಳ್ಳುವುದು ಸುಲಭವಾಗಿರುವುದರಿಂದ ಈ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 20 ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಹಲವು ಯುವಕರು ತಾಲಿಬಾನ್ ಸೇರಿಕೊಂಡಿದ್ದಾರೆ. ಈ ವೇಳೆ ಭಾರತದ ಮೂಲಕವೇ ಸಾಗಿದ್ದಾರೆ. ಇದೀಗ ಮತ್ತೆ ಅದೇ ತಪ್ಪು ಮರುಕಳಿಸಬಾರದು ಎಂದು ಶಫೀಕುಲ್ಲಾ ಇಸ್ಲಾಂ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.