ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಮೂಲಕ ಶೇಕ್ ಹಸೀನಾ ಸರ್ಕಾರವನ್ನು ಉರುಳಿಸಿದ ನಾಯಕ ನ್ಯೂಟನ್ ದಾಸ್, ಭಾರತದ ಪಶ್ಚಿಮ ಬಂಗಾಳದಲ್ಲಿ ಯಾರು ಅಧಿಕಾರಕ್ಕೆ ಬರಬೇಕು ಅನ್ನೋದನ್ನು ನಿರ್ಧರಿಸುತ್ತಾನೆ. ಇದು ನಿಜ, ಈತ ಬಾಂಗ್ಲಾದೇಶದ ಪ್ರಜೆ, ಆದರೆ ಪಶ್ಚಿಮ ಬಂಗಾಳದ ಮತದಾರರ ಗುರುತಿನ ಚೀಟಿಯೂ ಈತನಲ್ಲಿದೆ.
ಕೋಲ್ಕತಾ(ಜೂ.09) ಅಕ್ರಮವಾಗಿ ಭಾರತ ನುಸುಳುವರ ಬಾಂಗ್ಲಾದೇಶಿಗಳು, ರೋಹಿಂಗ್ಯ ಮುಸ್ಲಿಮರು ಮಾತ್ರವಲ್ಲ, ಯಾರಿಗೆ ಬೇಕಾದರೂ ಪಶ್ಚಿಮ ಬಂಗಾಳದಲ್ಲಿ ಸುಲಭವಾಗಿ ಭಾರತದ ವೋಟರ್ ಐಡಿ, ಆಧಾರ್ ಕಾರ್ಡ್ ಮಾಡಿಸಿಕೊಡಲಾಗುತ್ತದೆ ಅನ್ನೋ ಬಿಜೆಪಿ ಆರೋಪ ನಿಜವಾಗಿದೆ. ಈ ಅತೀ ದೊಡ್ಡ ಜಾಲದಲ್ಲಿ ಮಮತಾ ಬ್ಯಾನರ್ಜಿಯ ಟಿಎಂಸಿ ಪಕ್ಷ ಪ್ರಮುಖ ಪಾತ್ರನಿರ್ವಹಿಸುತ್ತಿದೆ ಎಂದು ಬಿಜೆಪಿ ಸತತವಾಗಿ ಆರೋಪ ಮಾಡುತ್ತಲೇ ಬರುತ್ತಿದೆ. ಆದರೆ ಇದೀಗ ಇದಕ್ಕೆ ಬಿಜೆಪಿ ಮತ್ತೊಂದು ಸಾಕ್ಷ್ಯ ನೀಡಿದೆ. ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಪ್ರತಿಭಟನೆ ಮೂಲಕ ದೇಶದಲ್ಲೇ ಕಿಚ್ಚು ಹಚ್ಚಿ ಕೊನೆಗೆ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನ ಸರ್ಕಾರವನ್ನೇ ಉರುಳಿಸಿದ ನಾಯಕ ನ್ಯೂಟನ್ ದಾಸ್ ಭಾರತದ ಪಶ್ಚಿಮ ಬಂಗಾಳ ರಾಜ್ಯದ ವೋಟರ್ ಐಡಿ ಹೊಂದಿದ್ದಾನೆ. ಈತ ಬಾಂಗ್ಲಾದೇಶದ ಪ್ರಜೆ, ಆದರೆ ಭಾರತದಲ್ಲೂ ಮತದಾನ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಆರೋಪಿಸಿದೆ.
ಬಾಂಗ್ಲಾದೇಶದಲ್ಲಿ ಪ್ರತಿಭಟನೆಯ ನಾಯಕತ್ವ ವಹಿಸಿಕೊಂಡು ಸರ್ಕಾರವನ್ನೇ ಉರುಳಿಸಿದ್ದ ನ್ಯೂಟನ್ ದಾಸ್ ಬಳಿ ಪಶ್ಚಿಮ ಬಂಗಾಳದ 24 ಪರಗಣ ದಕ್ಷಿಣದ ಜಿಲ್ಲೆಯ ಕಾಕ್‌ದ್ವೀಪ್ ಕ್ಷೇತ್ರದ ಮತದಾರ ಚೀಟಿ ಹೊಂದಿದ್ದಾನೆ. ಕಳೆದ 11 ವರ್ಷಗಳಿಂದ ಬಾಂಗ್ಲಾದೇಶದ ಚುನಾವಣೆ ಹಾಗೂ ಭಾರತ- ಪಶ್ಚಿಮ ಬಂಗಾಳದ ಚುನಾವಣೆಯಲ್ಲೂ ಮತದಾನ ಮಾಡಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಈತನ ಬಳಿ ಎರಡು ದೇಶದ ಮತದಾರ ಚೀಟಿ ಇದೆ. ಇದು ಅಚಾನಕ್ಕಾಗಿ ಆಗಿದ್ದಲ್ಲ, ಅಚಾತುರ್ಯದಿಂದ ಆಗಿಲ್ಲ, ಇದು ಟಿಎಂಸಿ ನಾಯಕರು ಅಕ್ರಮ ಬಾಂಗ್ಲಾದೇಶಗಳಿಗೆ ಚುನಾವಣೆ ಗೆಲ್ಲುವ ಸಲುವಾಗಿ ಮತದಾರ ಚೀಟಿ, ಆಧಾರ್ ಕಾರ್ಡಿ ಮಾಡಿಸಿಕೊಡುತ್ತಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಆರೋಪಿಸಿದೆ.
ನ್ಯೂಟನ್ ದಾಸ್ ಯಾವ ದೇಶದ ನಾಗರಿಕ?
ಬಾಂಗ್ಲಾದೇಶದ ಕೋಟಾ ಆಂದೋಲನದ ವಿದ್ಯಾರ್ಥಿ ನಾಯಕ ನ್ಯೂಟನ್ ದಾಸ್ ದಕ್ಷಿಣ 24 ಪರಗಣಗಳ ಕಾಕ್‌ದ್ವೀಪ್‌ನ ಮತದಾರರೂ ಹೌದು. 2014 ರಲ್ಲಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದರು. ಸುಂದರಬನ್ಸ್‌ನ ಕಾಕ್‌ದ್ವೀಪ್‌ಗೆ ಬಂದು ಟಿಎಂಸಿಯ ಆಶ್ರಯದಲ್ಲಿ ಬೆಳೆದರು. ನಂತರ ಟಿಎಂಸಿ ನಾಯಕರ ಸಹಾಯದಿಂದ ಕಾಕ್‌ದ್ವೀಪ್‌ನಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮಾಡಿಸಿಕೊಂಡರು. ಟಿಎಂಸಿಯ ಬೆಂಬಲದೊಂದಿಗೆ ಬೆಳೆದು ಟಿಎಂಸಿಯ ಆಸ್ತಿಯಾದರು. ಶಾಸಕರ ಆಪ್ತ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಆದರೆ 2021 ರಲ್ಲಿ ಅಕ್ರಮವಾಗಿ ಗಡಿಯನ್ನು ದಾಟಲು ಯತ್ನಿಸುವಾಗ ನಿವ್ಟನ್ ಸಿಕ್ಕಿಬಿದ್ದಿದ್ದರು. ಸ್ಥಳೀಯ ಟಿಎಂಸಿ ನಾಯಕರು ನಿವ್ಟನ್‌ರನ್ನು ಬಿಡುಗಡೆ ಮಾಡಿಸಲು ತೀವ್ರ ಪ್ರಯತ್ನ ನಡೆಸಿದ್ದರು. ಕಾಕ್‌ದ್ವೀಪ್‌ನ ಸ್ಥಳೀಯ ಟಿಎಂಸಿ ವಿದ್ಯಾರ್ಥಿ ನಾಯಕನೊಬ್ಬನ ರೆಸ್ಟೋರೆಂಟ್ ವ್ಯವಹಾರದಲ್ಲಿ ನಿವ್ಟನ್ ಪಾಲುದಾರರಾಗಿದ್ದಾರೆ. ಆದರೆ ಆ ನಾಯಕ ಈ ಆರೋಪವನ್ನು ನಿರಾಕರಿಸಿದ್ದಾರೆ.
ಬಾಂಗ್ಲಾದೇಶದ ಪಾಸ್‌ಪೋರ್ಟ್ ಮತ್ತು ಭಾರತೀಯ ಮತದಾರರ ಗುರುತಿನ ಚೀಟಿ
ಅತ್ಯಂತ ಆಘಾತಕಾರಿ ವಿಷಯವೆಂದರೆ 2021 ರಲ್ಲಿ ನ್ಯೂಟನ್ ದಾಸ್ ಬನಗಾಂ ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ಬರುತ್ತಿದ್ದಾಗ ಸಿಕ್ಕಿಬಿದ್ದರು. ಬಿಎಸ್‌ಎಫ್ ವಿಚಾರಣೆ ನಡೆಸಿತು. ಆ ಸಮಯದಲ್ಲಿ ಅವರ ಬಳಿ ಬಾಂಗ್ಲಾದೇಶದ ಪಾಸ್‌ಪೋರ್ಟ್ ಮತ್ತು ಭಾರತೀಯ ಮತದಾರರ ಗುರುತಿನ ಚೀಟಿ ಪತ್ತೆಯಾಯಿತು. ಭಾರತದ ನಾಗರಿಕ ಗುರುತಿನ ಚೀಟಿ ಆಧಾರ್ ಕಾರ್ಡ್ ಕೂಡ ಪತ್ತೆಯಾಯಿತು. ಪಾನ್ ಕಾರ್ಡ್ ಕೂಡ ಇತ್ತು. ಸ್ಥಳೀಯರ ಪ್ರಕಾರ, ಆ ಸಮಯದಲ್ಲಿ ಕಾಕ್‌ದ್ವೀಪ್‌ನ ಟಿಎಂಸಿ ನಾಯಕ ದೇಬಾಶಿಸ್ ದಾಸ್ ನ್ಯೂಟನ್ ದಾಸ್‌ಗೆ ಜಾಮೀನು ನೀಡಲು ಬನಗಾಂಗೆ ಹಲವು ಬಾರಿ ಭೇಟಿ ನೀಡಿದ್ದರು. ಆದರೆ ನ್ಯೂಟನ್ ದಾಸ್ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಯಿತು.
