Asianet Suvarna News Asianet Suvarna News

ಸೋಂಕು ಹೆಚ್ಚಳ : ಭಾರತದ ಗಡಿ ಮುಚ್ಚಿದ ಬಾಂಗ್ಲಾ

 ಏ.14ರಿಂದಲೇ ಭಾರತದ ಜೊತೆಗಿನ ವಿಮಾನ ಸೇವೆಗೆ ನಿಷೇಧ ಹೇರಿದ ಬಾಂಗ್ಲಾದೇಶ ಇದೀಗ 2 ವಾರಗಳ ಕಾಲ ಭಾರತಕ್ಕೆ ಹೊಂದಿಕೊಂಡಿರುವ ತನ್ನೆಲ್ಲಾ ಗಡಿಗಳನ್ನು ಬಂದ್ ಮಾಡಿದೆ. 

Bangladesh closes land borders with India Due To Covid 19 snr
Author
Bengaluru, First Published Apr 26, 2021, 8:00 AM IST

ಢಾಕಾ (ಏ.26): ಕೊರೋನಾದ 2ನೇ ಅಲೆಯ ಭೀಕರತೆ ಪರಿಣಾಮ ಏ.14ರಿಂದಲೇ ಭಾರತದ ಜೊತೆಗಿನ ವಿಮಾನ ಸೇವೆಗೆ ನಿಷೇಧ ಹೇರಿದ ಬಾಂಗ್ಲಾದೇಶ ಇದೀಗ 2 ವಾರಗಳ ಕಾಲ ಭಾರತಕ್ಕೆ ಹೊಂದಿಕೊಂಡಿರುವ ತನ್ನೆಲ್ಲಾ ಗಡಿಗಳನ್ನು 2 ವಾರಗಳ ಕಾಲ ಬಂದ್‌ ಮಾಡಿದೆ.

 ಕೊರೋನಾದ 2ನೇ ಅಲೆಯ ತೀವ್ರತೆ ಹೆಚ್ಚಿರುವ ಕಾರಣಕ್ಕೆ 2 ವಾರ ಕಾಲ ಉಭಯ ದೇಶಗಳ ಮಧ್ಯೆಯ ಮಾನವ ಸಂಚಾರ ಸೇರಿದಂತೆ ಎಲ್ಲಾ ಚಟುವಟಿಕೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. 

ಕೊರೋನಾ 2ನೇ ಅಲೆ; ಕನೆಡಾ ವಿಮಾನ ಪ್ರಯಾಣ ರದ್ದುಗೊಳಿಸಿದ ಏರ್ ಇಂಡಿಯಾ

ಆದರೆ ಸರಕು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್‌ ಮೊಮೆನ್‌ ತಿಳಿಸಿದ್ದಾರೆ.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...

ಈಗಾಗಲೇ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗಿದ್ದು ಸಾವಿನ ಸಂಖ್ಯೆಯೂ ಮಿತಿ ಮೀರಿದೆ. ಭಾರತದಲ್ಲಿ ಮಹಾಮಾರಿ ಅಟ್ಟಹಾಸ ಅತ್ಯಂತ ವಿಕೋಪದ ಹಂತಕ್ಕೆ ತಲುಪಿದೆ. 

Follow Us:
Download App:
  • android
  • ios