ಉದ್ಯಾನನಗರಿಯಲ್ಲಿ ವಿಕೃತಕಾಮಿಗಳ ಹಾವಳಿ ಹೆಚ್ಚಾಗಿದ್ಯಾ? ನಗರದ ಎರಡೆರಡು ಕಡೆ ಕಾಮುಕರು ಟೆರೇಸ್ ಮೇಲೆ ಒಣ ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ದೃಶ್ಯ ಅಲ್ಲಿ ಹಾಕಲಾಗಿದ್ದ ಸಿಸಿ ಕ್ಯಾಮರಾಗಳಲ್ಲಿ ಸೆರೆ ಆಗಿದೆ.

ಬೆಂಗಳೂರು: ಉದ್ಯಾನನಗರಿಯಲ್ಲಿ ವಿಕೃತಕಾಮಿಗಳ ಹಾವಳಿ ಹೆಚ್ಚಾಗಿದ್ಯಾ? ನಗರದ ಎರಡೆರಡು ಕಡೆ ಕಾಮುಕರು ಟೆರೇಸ್ ಮೇಲೆ ಒಣ ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ದೃಶ್ಯ ಅಲ್ಲಿ ಹಾಕಲಾಗಿದ್ದ ಸಿಸಿ ಕ್ಯಾಮರಾಗಳಲ್ಲಿ ಸೆರೆ ಆಗಿದೆ. ವಿಕೃತಕಾಮಿಯೋರ್ವ ಮನೆಯ ಟೆರೇಸ್ ಮೇಲೆ ಒಣ ಹಾಕಿದ್ದ ಮಹಿಳೆಯರ ಒಳ ಉಡುಪನ್ನು ಕಳ್ಳತನ ಮಾಡುತ್ತಿದ್ದಾನೆ. ಮೊದಲ ಪ್ರಕರಣವೂ ಗಾರ್ಡನ್‌ ಸಿಟಿ ಬೆಂಗಳೂರಿನ ರಾಜಗೋಪಾಲನಗರ (Rajagopala nagara) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಅಲ್ಲಿ ಪ್ರಕರಣ ದಾಖಲಾಗಿದೆ. ಒಳ ಉಡುಪು ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಲಗ್ಗೆರೆ ಬಳಿಯ ವಿಧಾನಸೌಧ ಲೇಔಟ್ ಬಳಿ ಇಂತಹದ್ದೇ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೋರ್ವ ಟೆರೇಸ್ ಮೇಲೆ ಒಣ ಹಾಕಿದ್ದ ಮಹಿಳೆಯರ ಒಳ ಉಡುಪು ಕದ್ದು ಅಲ್ಲೇ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಸುದ್ದಿಮೂಲಗಳ ಪ್ರಕಾರ ಈ ವಿಕೃತಕಾಮಿ ಮನೆ ಬಾಡಿಗೆ ಕೇಳುವ ನೆಪದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಈತ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುವ ಮಹಿಳೆಯರನ್ನು ತನ್ನ ಫೋನ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ. 

ಈ ದೇಶದಲ್ಲಿ ಒಳಉಡುಪು ಧರಿಸೋಕು ವಿಚಿತ್ರ ಕಾನೂನಿದೆ, ತಪ್ಪಿದ್ರೆ ದಂಡ ಕಟ್ಬೇಕು!

ಮತ್ತೊಂದೆಡೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿಯೂ ಇಂತಹ ಘಟನೆ ನಡೆದಿದ್ದು, ಈ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ಪ್ರಕರಣದಲ್ಲಿ ಆರೋಪಿಯ ಬಂಧನವಾಗಿದೆ. ವೀಡಿಯೋದಲ್ಲಿ ಕದ್ದ ಒಳ ಉಡುಪುಗಳೊಂದಿಗೆ ಕಾಮುಕ ಓಡುತ್ತಿರುವ ದೃಶ್ಯ ಸೆರೆ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಗೌಸ್‌ಪುರ (Gauspura) ನಿವಾಸಿಯೊಬ್ಬರು ದೂರು ನೀಡಿದ್ದು, ಅಪರಿಚಿತ ವ್ಯಕ್ತಿಯೋರ್ವ ಒಳ ಉಡುಪು ಮಾತ್ರವಲ್ಲದೇ ಹಣವನ್ನು ಕದ್ದೊಯ್ದಿದ್ದಾನೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಆತನನ್ನು ಬಂಧಿಸಿದ್ದು, ಕಳ್ಳ ತನ್ನ ಈ ಕೃತ್ಯಕ್ಕೆ ತನ್ನದೇ ಕಾರ್ಯ ವಿಧಾನವನ್ನು ಹೊಂದಿದ್ದನು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀಟ್‌ ಪರೀಕ್ಷೆ ವೇಳೆ ಒಳ ಉಡುಪು ಪರಿಶೀಲಿಸಿದ ಅಧಿಕಾರಿಗಳು: ಬ್ರಾ ಧರಿಸದೆ ಎಕ್ಸಾಂ ಬರೆದ ವಿದ್ಯಾರ್ಥಿನಿಯರು!

Scroll to load tweet…