Asianet Suvarna News Asianet Suvarna News

ಪಾಕಿಸ್ತಾನದ 2ನೇ ಅತೀದೊಡ್ಡ ನೇವಿ ಏರ್‌ಬೇಸ್‌ ಮೇಲೆ ಬಲೂಚಿಸ್ತಾನದ ಮಜೀದ್ ಬ್ರಿಗೇಡ್ ದಾಳಿ

ಪಾಕಿಸ್ತಾನದ  ನೌಕಾ ನೆಲೆಗೆ ಸೇರಿದ 2ನೇ ಅತೀದೊಡ್ಡ ವಿಮಾನ ನಿಲ್ದಾಣದ ಮೇಲೆ  ದಾಳಿ ನಡೆದಿದೆ.  ಪಾಕಿಸ್ತಾನದ ಟರ್ಬತ್‌ನಲ್ಲಿರುವ ಪಿಎನ್‌ಎಸ್ ಸಿದ್ಧಿಕ್ ಮೇಲೆ ನಿಷೇಧಿತ ಬಲೋಚಿಸ್ತಾನ್ ಲಿಬರೇಷನ್ ಆರ್ಮಿಯ ಮಜೀದ್ ಬ್ರಿಗೇಡ್ ದಾಳಿ ನಡೆಸಿದೆ.

Balochistan Liberation Army attacks Pakistans second largest naval air station in Turbat akb
Author
First Published Mar 26, 2024, 8:39 AM IST

ಕರಾಚಿ: ಪಾಕಿಸ್ತಾನದ  ನೌಕಾ ನೆಲೆಗೆ ಸೇರಿದ 2ನೇ ಅತೀದೊಡ್ಡ ವಿಮಾನ ನಿಲ್ದಾಣದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.  ಪಾಕಿಸ್ತಾನದ ಟರ್ಬತ್‌ನಲ್ಲಿರುವ ಪಿಎನ್‌ಎಸ್ ಸಿದ್ಧಿಕ್ ಮೇಲೆ ನಿಷೇಧಿತ ಬಲೋಚಿಸ್ತಾನ್ ಲಿಬರೇಷನ್ ಆರ್ಮಿಯ ಮಜೀದ್ ಬ್ರಿಗೇಡ್ ದಾಳಿ ನಡೆಸಿದೆ. ದಾಳಿಯ ಹೊಣೆ ಹೊತ್ತುಕೊಂಡಿರುವ ಮಜೀದ್ ಬ್ರಿಗೇಡ್ ಬಲೂಚಿಸ್ತಾನದಲ್ಲಿ ಚೀನಾದ ಹೂಡಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದೆ. ಪಾಕಿಸ್ತಾನ ಹಾಗೂ ಚೀನಾ ಎರಡೂ ಸೇರಿ ಬಲೂಚಿಸ್ತಾನದ ಸಂಪನ್ಮೂಲವನ್ನು ಕಬಳಿಸುತ್ತಿವೆ ಎಂದು ಬಿಎಎಲ್‌ ಆರೋಪಿಸಿದೆ. ದಾಳಿಗೊಳಗಾದ ಪಾಕ್‌ನ ವಾಯುನೆಲೆಯೊಳಗೆ ನಮ್ಮ ಯೋಧರು ನುಗ್ಗಿದ್ದಾರೆ ಎಂದು ಬಿಎಎಲ್ ಹೇಳಿಕೊಂಡಿದೆ. 

ಈ ದಾಳಿಯಿಂದಾಗಿ ಕನಿಷ್ಠ ಮೂರು ಗಂಟೆಗಳ ಕಾಲ ನಿರಂತರ ಗುಂಡಿನ ದಾಳಿ ಮುಂದುವರೆದಿತ್ತು ಎಂದು ವರದಿಯಾಗಿದೆ. ಹಲವು ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಹಾರಾಡುತ್ತಾ ಗಸ್ತು ತಿರುಗುವಂತೆ  ಕಂಡು ಬಂದಿತ್ತು.  ಜೊತೆಗೆ ಗುಂಡಿನ ಚಕಮಕಿ ನಡೆದಿತ್ತು ಎಂದು ವರದಿಯಾಗಿದೆ. ಈ ದಾಳಿಯ ಹಿನ್ನೆಲೆಯಲ್ಲಿ ಫ್ರಾಂಟಿಯರ್ ಕಾರ್ಪ್ಸ್ ಹಲವಾರು ಪ್ರಮುಖ ಟರ್ಬಟ್ ರಸ್ತೆಗಳನ್ನು ಬಂದ್ ಮಾಡಿದೆ ಮತ್ತು ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿಯ ದೊಡ್ಡ ತುಕಡಿಯು ನೌಕಾ ವಾಯುನೆಲೆಯ ಕಡೆಗೆ ಚಲಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಪ್ರಖ್ಯಾತ ಗ್ವಾದರ್ ಬಂದರಿನ ಮೇಲೆ ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ದಾಳಿ!

ದಾಳಿಯಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಪಾಕಿಸ್ತಾನಿ ಸಿಬ್ಬಂದಿಯನ್ನು ಕೊಂದಿರುವುದಾಗಿ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್  ಹೇಳಿಕೊಂಡಿದೆ. ಇದಲ್ಲದೆ, ತನ್ನ ಹೋರಾಟಗಾರರೊಬ್ಬರು ಪಿಎನ್‌ಎಸ್‌ ಸಿದ್ದಿಕ್ ಮೇಲೆ ದಾಳಿ ಮಾಡಿದ ಆಡಿಯೋ ಕ್ಲಿಪ್ ಅನ್ನು ಬಿಡುಗಡೆ ಮಾಡಿದೆ. ಅಲ್ಲಿ ದಾಳಿ ಮಾಡಿದವನು ವಿವಿಧ ವಾಹನಗಳನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಈ ದಾಳಿಯಿಂದಾಗಿ ಟರ್ಬಟ್‌ನ ಬೋಧನಾ ಆಸ್ಪತ್ರೆಯಲ್ಲಿ  ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.  ಆಸ್ಪತ್ರೆಯ ಎಲ್ಲಾ ವೈದ್ಯರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಕೆಚ್ ಅವರು ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.  ಬಲೂಚಿಸ್ತಾನ್ ಲಿಬರೇಷ್‌ ಆರ್ಮಿ ನಡೆಸಿದ ಈ ದಾಳಿಯೂ ಒಂದೇ ವಾರದಲ್ಲಿ ನಡೆದ 2ನೇ ದಾಳಿಯಾಗಿದೆ. ಹಾಗೆಯೇ ವರ್ಷದಲ್ಲಿ ನಡೆದ ಮೂರನೇ ದಾಳಿಯಾಗಿದೆ. ಇದಕ್ಕೂ ಮೊದಲು ಜನವರಿ 29ರಂದು ಮೆಕ್ ನಗರವನ್ನು  ಬಿಎಎಲ್‌ ಗುರಿ ಮಾಡಿ ದಾಳಿ ನಡೆಸಿತ್ತು. ಇದಾದ ನಂತರ ಮಾರ್ಚ್‌ 20 ರಂದು ಗ್ವಾದರ್‌ನಲ್ಲಿರುವ  ಮಿಲಿಟರಿ ಹೆಡ್‌ ಕ್ವಾರ್ಟರ್ ಮೇಲೆಯೂ ದಾಳಿ ನಡೆಸಿತ್ತು. ಈಗ ನೌಕಾನೆಲೆಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ.

ಪಾಕಿಸ್ತಾನವನ್ನು ಜಗತ್ತಿನಿಂದ್ಲೇ ನಿರ್ನಾಮ ಮಾಡಲಾಗುವುದು: ತಾಲಿಬಾನ್‌ ಪ್ರತಿಜ್ಞೆ!

Follow Us:
Download App:
  • android
  • ios