Asianet Suvarna News Asianet Suvarna News

CDS Gen Bipin Rawat: ಕಾಪ್ಟರ್‌ ಪತನಕ್ಕೆ ಪ್ರತಿಕೂಲ ಹವಾಮಾನ ಕಾರಣ?

ದೇಶದ ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹಾಗೂ ಅವರ ಪತ್ನಿ ಸೇರಿದಂತೆ 13 ಮಂದಿ ಪ್ರಯಾಣಿಸುತ್ತಿದ್ದ ವಾಯುಪಡೆಯ ಹೆಲಿಕಾಪ್ಟರ್‌ ಹಠಾತ್‌ ಪತನಗೊಂಡಿದ್ದಕ್ಕೆ ಕಾರಣ ಪ್ರತಿಕೂಲ ಹವಾಮಾನವಾಗಿರಬಹುದು ಎಂಬ ನಿಲುವಿಗೆ ತನಿಖಾ ತಂಡ ಬಂದಿದೆ ಎಂದು ಮೂಲಗಳು ತಿಳಿಸಿವೆ.

Bad Weather Likely Factor In General Bipin Rawats Chopper Crash gvd
Author
Bangalore, First Published Jan 3, 2022, 7:57 AM IST

ನವದೆಹಲಿ (ಜ.03): ದೇಶದ ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ (Gen Bipin Rawat) ಹಾಗೂ ಅವರ ಪತ್ನಿ ಸೇರಿದಂತೆ 13 ಮಂದಿ ಪ್ರಯಾಣಿಸುತ್ತಿದ್ದ ವಾಯುಪಡೆಯ ಹೆಲಿಕಾಪ್ಟರ್‌ ಹಠಾತ್‌ ಪತನಗೊಂಡಿದ್ದಕ್ಕೆ (IAF Chopper Crash) ಕಾರಣ ಪ್ರತಿಕೂಲ ಹವಾಮಾನವಾಗಿರಬಹುದು ಎಂಬ ನಿಲುವಿಗೆ ತನಿಖಾ ತಂಡ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಡಿ.8ರಂದು ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ದುರಂತ ಸಂಬಂಧ ತನಿಖೆ ನಡೆಸಲು ದೇಶದ ಅತ್ಯುನ್ನತ ಹೆಲಿಕಾಪ್ಟರ್‌ ಪೈಲಟ್‌ ಏರ್‌ ಮಾರ್ಷಲ್‌ ಮಾನವೇಂದ್ರ ಸಿಂಗ್‌ (Manavendra Singh) ನೇತೃತ್ವದ ಕೋರ್ಟ್‌ ಆಫ್‌ ಎನ್‌ಕ್ವಯರಿ ತಂಡವನ್ನು ರಚನೆ ಮಾಡಲಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ ದೃಷ್ಟಿಯ ಗೋಚರತೆ ಮಂದವಾಗಿದ್ದೇ ದುರಂತಕ್ಕೆ ಕಾರಣವಾಗಿರಬಹುದು ಎಂಬ ಅಭಿಪ್ರಾಯ ಸಮಿತಿಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ವಾಯುಪಡೆಯಾಗಲಿ, ಸರ್ಕಾರವಾಗಲಿ ಅಧಿಕೃತ ಮಾಹಿತಿ ನೀಡಿಲ್ಲ.

ಪ್ರತಿಕೂಲ ಹವಾಮಾನದಿಂದಾಗಿ ದೃಷ್ಟಿಗೋಚರತೆ ಮಂದವಾಗಿ ಪೈಲಟ್‌ ದಾರಿ ತಪ್ಪಿರಬಹುದು. ಆ ವೇಳೆ ಹೆಲಿಕಾಪ್ಟರ್‌ ಪತನವಾಗಿರಬಹುದು. ಈ ಅವಘಡಕ್ಕೆ ಕಾಪ್ಟರ್‌ನ ತಾಂತ್ರಿಕ ಅಥವಾ ಇನ್ನಾವುದೇ ದೋಷ ಕಾರಣವಲ್ಲ ಎಂಬ ಅಭಿಪ್ರಾಯ ಸಮಿತಿಯದ್ದಾಗಿದೆ ಎನ್ನಲಾಗಿದೆ. ವರದಿಯನ್ನು ಅಂತಿಮಗೊಳಿಸಲು ಕೋರ್ಟ್‌ ಆಫ್‌ ಎನ್‌ಕ್ವಯರಿ ತಂಡಕ್ಕೆ ವಾಯುಪಡೆಯ ಕಾನೂನು ವಿಭಾಗ ಸಹಾಯ ಮಾಡುತ್ತಿದೆ. ಮುಂದಿನ ಐದು ದಿನಗಳಲ್ಲಿ ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ ಅವರಿಗೆ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.

Vijay Parv: ಹುತಾತ್ಮ ಬಿಪಿನ್ ರಾವತ್ ಕೊನೇ ವಿಡಿಯೋ ವೈರಲ್, ಯೋಧರಿಗೆ ಕೊಟ್ಟಿದ್ರು ಸಂದೇಶ!

ಮುಂದಿನ ವಾರ ತನಿಖಾ ವರದಿ ಸಲ್ಲಿಕೆಯಾಗುವ ಸಾಧ್ಯತೆ: ಸಶಸ್ತ್ರ ಸೇನಾ ಪಡೆಗಳ ಮೊದಲ ಮುಖ್ಯಸ್ಥ ಜನರಲ್ ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿಯ ಸಾವಿಗೆ ಕಾರಣವಾದ ಸೇನಾ ಹೆಲಿಕಾಪ್ಟರ್‌ ದುರ್ಘಟನೆ ತನಿಖಾ ವರದಿ ಮುಂದಿನ ವಾರ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಡಿ.8ರಂದು ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್‌ ದುರಂತದ  ಬಗ್ಗೆ ಸೇನಾಪಡೆಗಳ 3 ವಿಭಾಗಗಳನ್ನು ತಜ್ಞರನ್ನು ಒಳಗೊಂಡ ಸಮಿತಿ ತನಿಖೆ ನಡೆಸಿತ್ತು. ಏರ್‌ ಮಾರ್ಷಲ್‌ ಮಾನವೇಂದ್ರ ಸಿಂಗ್‌ ಈ ತಂಡದ ನೇತೃತ್ವ ವಹಿಸಿದ್ದರು.

ಮನುಷ್ಯನಿಂದ ಆದ ತಪ್ಪುಗಳು, ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಆಗುವ ವೇಳೆ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದರೇ? ಎಂಬುದೂ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗಿದ್ದು, ಅದರ ವರದಿ ಅಂತಿಮ ಘಟ್ಟದಲ್ಲಿದೆ. ಹೀಗಾಗಿ ಮುಂದಿನ ವಾರ ಎಲ್ಲಾ ಅಂಶಗಳನ್ನು ಒಳಗೊಂಡ ಬೃಹತ್‌ ಗಾತ್ರದ ತನಿಖಾ ವರದಿ ವಾಯುಪಡೆ ಮುಖ್ಯ ಕಚೇರಿಗೆ ಸಲ್ಲಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಯಲಾಯ್ತು ರಾವತ್ ಹೆಲಿಕಾಪ್ಟರ್ ದುರಂತದ ರಹಸ್ಯ: ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತದ ತನಿಖೆಗಾಗಿ ರಚಿಸಲಾಗಿರುವ ತನಿಖಾ ಸಮಿತಿ ತನ್ನ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿಯಲು ರಕ್ಷಣಾ ಸಚಿವಾಲಯ ತ್ರಿಸೇವಾ ತನಿಖೆಗೆ ಆದೇಶಿಸಿತ್ತು.

IAF Helicopter Crash : ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ

ಹೌದು ಡಿಸೆಂಬರ್ 8 ರಂದು ಸೇನಾ ದಂಡನಾಯಕ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ದುರಂತದಲ್ಲಿ ಚಾಪರ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದರು. ದುರಂತದ ಬಳಿಕ ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಈ ಕಾರಣಕ್ಕಾಗಿಯೇ ಅಪಘಾತದ ಕಾರಣವನ್ನು ತನಿಖೆ ಮಾಡಲು ನ್ಯಾಯಾಲಯದ ವಿಚಾರಣೆ ಸ್ಥಾಪಿಸಲಾಗಿದೆ ಹಾಗೂ ಭಾರತೀಯ ವಾಯುಪಡೆಯ ತರಬೇತಿ ವಿಭಾಗದ ಕಮಾಂಡಿಂಗ್-ಇನ್-ಚೀಫ್ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆ, ವಿಚಾರಣೆ ನಡೆಸಲಾಗಿದೆ. IAF ನ Mi-17V5 ಪತನದ ಕಾರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. 

Follow Us:
Download App:
  • android
  • ios