ಅಸ್ಸಾಂ ಪ್ರವಾಹದಲ್ಲಿ ಕೊಚ್ಚಿ ಹೋದ ಮರಿ ಆನೆ ರಕ್ಷಿಸಿದ ಅರಣ್ಯಾಧಿಕಾರಿ ತಂಡ, ವಿಡಿಯೋ!

ಈಶಾನ್ಯ ಭಾರತದಲ್ಲಿ ಭಾರಿ ಮಳೆಯಾಗುತ್ತಿದೆ. ತಾಯಿ ಹಾಗೂ ಆನೆಗಳ ಹಿಂಡಿನ ಜೊತೆಗಿತ್ತ ಮರಿ ಆನೆ ಏಯ್ ನದಿ ದಾಟುವಾಗ ಕೊಚ್ಚಿ ಹೋಗಿದೆ. ಈ ಆನೆ ಮರಿಯನ್ನು ಅರಣ್ಯಾಧಿಕಾರಿಗಳ ತಂಡ ರಕ್ಷಿಸಿದೆ. ವಿಡಿಯೋ ಇದೀಗ ವೈರಲ್ ಆಗಿದೆ.
 

Baby elephant rescued flood water at assam Aie River CM Himanta share video ckm

ಗುವ್ಹಾಟಿ(ಜು.2) ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದಲ್ಲಿ ಭಾರಿ ಮಳೆಯಾಗುತ್ತಿದೆ. ಹಲೆವೆಡೆ ಪ್ರವಾಹ ಸೃಷ್ಟಿಯಾಗಿದೆ. ಬ್ರಹ್ಮಪುತ್ರ ನದಿ ತುಂಬಿ ಹರಿಯುತ್ತಿದೆ. ಅಸ್ಸಾಂ 19 ಜಿಲ್ಲೆಯ 6 ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಹದಿಂದ ತತ್ತರಿಸಿದ್ದಾರೆ. ಈ ಪ್ರವಾಹದಲ್ಲಿ ಆನೆ ಮರಿಯೊಂದು ಕೊಚ್ಚಿ ಹೋಗಿದೆ. ಆದರೆ ಅರಣ್ಯ ಸಿಬ್ಬಂದಿಗಳ ಪ್ರಯತ್ನದಿಂದ ಈ ಆನೆ ಮರಿಯನ್ನು ರಕ್ಷಿಸಲಾಗಿದೆ. ಈ ಕುರಿತ ವಿಡಿಯೋವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಂಚಿಕೊಂಡಿದ್ದಾರೆ. ಇದೇ ವೇಳೆ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಮಳೆಗಾಲ ಕಾಡಿನ ದೊಡ್ಡ ಪ್ರಾಣಿಗಳಿಗೂ ಸಂಕಷ್ಟ ತಂದಿದೆ. ಇತ್ತೀಚೆಗೆ ಚಿರಾಂಗ್ ಪ್ರದೇಶದಲ್ಲಿ ಮರಿ ಆನೆಯೊಂದು ಏಯ್ ನದಿನ ಪ್ರವಾಹ ನೀರಿನಲ್ಲಿ ಕೊಚ್ಚಿ ಹೋಗಿದೆ. ಹೆಣ್ಣ ಮರಿ ಆನೆಯನ್ನು ಅರಣ್ಯ ಸಿಬ್ಬಂದಿಗಳು ರಕ್ಷಿಸಿ ಆರೈಕೆ ಮಾಡುತ್ತಿದ್ದಾರೆ. ಈ ಮರಿ ಆನೆಯನ್ನು ಅದರ ತಾಯಿ ಜೊತೆ ಮರಳಿ ಸೇರಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ತಾಯಿ ಕಳೆದುಕೊಂಡ ಮರಿ ಆನೆ ರಕ್ಷಿಸಿ ಮಗುವಿನಂತೆ ಆರೈಕೆ, ಫೋಟೋ ಹಂಚಿಕೊಂಡ IFS ಅಧಿಕಾರಿ!

ಇತ್ತೀಚೆಗೆ ಅಸ್ಸಾಂನಲ್ಲಿ ತುಂಬಿ ಹರಿಯುತ್ತಿದ್ದ ಬ್ರಹ್ಮಪುತ್ರಾ ನದಿಯಲ್ಲಿ 100ಕ್ಕೂ ಹೆಚ್ಚು ಆನೆಗಳ ಹಿಂಡು ದಾಟುವ ದೃಶ್ಯ ಭಾರಿ ವೈರಲ್ ಆಗಿತ್ತು. ಅಸ್ಸಾಂ ಭಾರತದ ಅತೀ ಹೆಚ್ಚು ಆನೆಗಳ ಹೊಂದಿರುವ 2ನೇ ರಾಜ್ಯವಾಗಿದೆ. ಮೊದಲ ಸ್ಥಾನದಲ್ಲಿ ಕರ್ನಾಟಕ ವಿರಾಜಮಾನವಾಗಿದೆ.

ಅಸ್ಸಾಂನಲ್ಲಿ ಭಾರೀ ಮಳೆಯಿಂದ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿ ಹಾಗೆಯೇ ಮುಂದುವರೆದಿದೆ 19 ಜಿಲ್ಲೆಗಳಲ್ಲಿ ಭೀಕರ ಪ್ರವಾಹದ ಪರಿಸ್ಥಿತಿ ಮುಂದುವರೆದಿದ್ದು 6 ಲಕ್ಷ ಜನರು ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹೀಮಂತ್‌ ಬಿಸ್ವಾಸ್‌ ಶರ್ಮಾ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದು,  968 ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿದೆ’ ಎಂದು ಬಿಸ್ವಾಸ್ ತಿಳಿಸಿದ್ದಾರೆ.

 

 

ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರ ರಕ್ಷಣೆಗೆ ಈಗಾಗಲೇ ಸರ್ಕಾರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಸರ್ಕಾರ ನಿರಾಶ್ರಿತರಿಗೆ ಶಿಬಿರಗಳನ್ನು ತೆರೆದಿದ್ದು, ಆ ಶಿಬಿರಗಳಲ್ಲಿ ಒಟ್ಟು 17,661 ಮಂದಿ ಆಶ್ರಯ ಪಡೆದಿದ್ದಾರೆ. ಈ ನಡುವೆಯೇ ಅಸ್ಸಾಂನ ಕುಶಿಯಾರಾ ನದಿಯು ಬರಾಕ್ ಕಣಿವೆಯ ಕರೀಮ್‌ ಗಂಜ್‌ನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶನಿವಾರ ಪ್ರವಾಹಕ್ಕೆ ಇಬ್ಬರು ಬಲಿಯಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ವಿಶ್ರಾಂತಿ ವೇಳೆ ಮರಿಯಾನೆಗೆ ಆನೆ ಕುಟುಂಬದ Z ಪ್ಲಸ್ ಭದ್ರತೆ, ಅಣ್ಣಾಮಲೈ ಅರಣ್ಯದ ವಿಡಿಯೋ ವೈರಲ್!
 

Latest Videos
Follow Us:
Download App:
  • android
  • ios