ಶಿವಮೊಗ್ಗ (ಏ.04): ಸಕ್ರೆಬೈಲು ಆನೆ ಬಿಡಾರಕ್ಕೆ ಮತ್ತೊಂದು ಹೊಸ ಅತಿಥಿಯ ಆಗಮನವಾಗಿದೆ. ಸಕ್ರೆಬೈಲು ಆನೆ ಬಿಡಾರದಲ್ಲಿ ಸಂಭ್ರಮ ಮನೆ ಮಾಡಿದೆ. 

ಇಲ್ಲಿನ ಭಾನುಮತಿ ಎಂಬ 32 ವರ್ಷದ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಎರಡು ದಿನಗಳ ಹಿಂದೆ ಆನೆ ಮರಿ ಜನನವಾಗಿದೆ. 

ಸಫಾರಿ ವಾಹನ ಅಟ್ಟಾಡಿಸಿದ ಆನೆಗಳು : ವಿಡಿಯೋ ವೈರಲ್‌

ಆನೆ ಮರಿಯನ್ನ ಮಾವುತರು, ಕಾವಾಡಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ.   ಸಕ್ರೇಬೈಲಿನಲ್ಲಿ ಆನೆ ಮರಿ ಜನನದಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಹಾಸನದಲ್ಲಿ 2014ರಲ್ಲಿ ಸೆರೆ ಹಿಡಿದಿದ್ದ ಭಾನುಮತಿ ಆನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತರಲಾಗಿತ್ತು.  ಅಲ್ಲಿಂದ ಇಲ್ಲಿಯವರೆಗೆ ಒಟ್ಟು ಮೂರು ಮರಿಗಳಿಗೆ ಭಾನುಮತಿ ಜನ್ಮ ನೀಡಿದ್ದಾಳೆ.

ಇದೀಗ ಪುಟ್ಟ ಹೆಣ್ಣು ಮರಿ ಜನನವಾಗಿದೆ.