ಹಾವು ಚೇಳುಗಳು ಕಚ್ಚಿ ಮನುಷ್ಯರು ಸಾಯುವುದುಂಟು ಆದರೆ ಇಲ್ಲೊಂದು ಕಡೆ ಇರುವೆ ಕಚ್ಚಿ ಪುಟ್ಟ ಬಾಲಕನೋರ್ವ ಸಾವನ್ನಪ್ಪಿದ ವಿಚಿತ್ರ ಆಘಾತಕಾರಿ ಘಟನೆ ನಡೆದಿದೆ. ಕೆಂಪು ಬಣ್ಣದ ಇರುವೆಯೊಂದು ಕಚ್ಚಿ ಎರಡು ಗಂಟೆಯೊಳಗೆ ಮೂರು ವರ್ಷದ ಬಾಲಕನೋರ್ವ ಸಾವನ್ನಪ್ಪಿದ್ದಾನೆ.
ಉತ್ತರಾಖಂಡ್: ಹಾವು ಚೇಳುಗಳು ಕಚ್ಚಿ ಮನುಷ್ಯರು ಸಾಯುವುದುಂಟು ಆದರೆ ಇಲ್ಲೊಂದು ಕಡೆ ಇರುವೆ ಕಚ್ಚಿ ಪುಟ್ಟ ಬಾಲಕನೋರ್ವ ಸಾವನ್ನಪ್ಪಿದ ವಿಚಿತ್ರ ಆಘಾತಕಾರಿ ಘಟನೆ ನಡೆದಿದೆ. ಕೆಂಪು ಬಣ್ಣದ ಇರುವೆಯೊಂದು ಕಚ್ಚಿ ಎರಡು ಗಂಟೆಯೊಳಗೆ ಮೂರು ವರ್ಷದ ಬಾಲಕನೋರ್ವ ಸಾವನ್ನಪ್ಪಿದ್ದಾನೆ. ಉತ್ತರಾಖಂಡ್‌ನ ಬಾಗೇಶ್ವರ್ ಜಿಲ್ಲೆಯ ಪಸೌರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕೆಲದಿನಗಳ ಹಿಂದೆ ಚೇಳು ಕಚ್ಚಿ ಬ್ರೆಜಿಲ್ ಮೂಲದ ಪುಟ್ಟ ಬಾಲಕನೋರ್ವ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಗ್ರಾಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಭೂಪೇಶ್ ರಾಮ್ ಎಂಬುವವರ ಮಕ್ಕಳಾದ ಐದು ವರ್ಷದ ಪ್ರಿಯಾಂಶು ಹಾಗೂ ಮೂರು ವರ್ಷದ ಸಾಗರ್ ಮನೆ ಸುತ್ತಲಿನ ಖಾಲಿ ಜಾಗದಲ್ಲಿ ಮಣ್ಣಿನಲ್ಲಿ ಆಟಾಡುತ್ತಿದ್ದಾಗ ಇಬ್ಬರಿಗೂ ಕೆಂಪಿರುವೆಗಳು ಕಚ್ಚಿವೆ. ಇರುವೆ ಕಚ್ಚಿದ ನಂತರ ಇಬ್ಬರು ಮಕ್ಕಳ ಆರೋಗ್ಯವೂ ಹದಗೆಟ್ಟಿದ್ದು, ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ದಾರಿ ಮಧ್ಯೆಯೇ ಮೂರು ವರ್ಷದ ಮಗು ಸಾಗರ್ ಪ್ರಾಣಪಕ್ಷಿ ಹಾರಿ ಹೋಗಿದೆ. ಸಾಗರ್ ಸಹೋದರ ಪ್ರಿಯಾಂಶು ಅವರ ಆರೋಗ್ಯ ಸುಧಾರಿಸಿದ್ದು, ಮಾರನೇ ದಿನ ಬಾಲಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
Astrology Tips : ಸತ್ತ ಚೇಳು ಮನೆಯಲ್ಲಿ ಕಂಡ್ರೆ ಶುಭವಾ? ಅಶುಭವಾ?
ಇವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ರಾಹುಲ್ ಶರ್ಮಾ (Rahul Sharma), ಮಾಧ್ಯಮದವರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಕ್ಕಳ ದೇಹದ ವಿವಿಧ ಭಾಗಗಳಲ್ಲಿ ಇರುವೆ ಕಚ್ಚಿದ ಗುರುತಿತ್ತು. ಇರುವೆ ಕಚ್ಚಿದ ಬಳಿಕ ಮಕ್ಕಳು ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಇರುವೆ ಕಚ್ಚಿದ ಒಂದೂವರೆ ಗಂಟೆಯೊಳಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಪುಟಾಣಿ ಬಾಲಕ ಸಾಗರ್ ಸಾವನ್ನಪ್ಪಿದ್ದ. ಸಾಗರ್ ಸಹೋದರ ಪ್ರಿಯಾಂಶುವಿಗೆ ನಾವು ಚಿಕಿತ್ಸೆ ನೀಡಿದೆವು. ಆತನ ತಂದೆ ಮಕ್ಕಳಿಗೆ ಕೆಂಪಿ ಇರುವೆ ಕಚ್ಚಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ವ್ಯದ್ಯರು ಹೇಳಿದ್ದಾರೆ.
ಚೇಳು ಕಚ್ಚಿ ಬಾಲಕ ಸಾವು
ಕೆಲ ದಿನಗಳ ಹಿಂದೆ ಶೂ ಒಳಗಿದ್ದ ವಿಷಕಾರಿ ಚೇಳೊಂದು ಕಚ್ಚಿದ ಬಳಿಕ ಏಳು ವರ್ಷದ ಬಾಲಕನಿಗೆ ಏಳು ಬಾರಿ ಹೃದಯಾಘಾತವಾಗಿದ್ದು, ಬಳಿಕ ಬಾಲಕ ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿತ್ತು. ಬ್ರೆಜಿಲ್ ಮೂಲದ (ಲೂಯಿಜ್ ಮಿಗುಯೆಲ್ ಫುರ್ಟಾಡೊ ಬಾರ್ಬೋಸಾ) Luiz Miguel Furtado Barbosa ಚೇಳು ಕಚ್ಚಿ ಮೃತಪಟ್ಟ ಬಾಲಕ. ಶೂ ಧರಿಸುತ್ತಿದ್ದ ವೇಳೆ ಈ ಅನಾಹುತ ಸಂಭವಿಸಿತ್ತು.
ಶೂ ಒಳಗಿತ್ತು ಸಾವು: ಚೇಳು ಕಚ್ಚಿ ಬಳಿಕ ಬಾಲಕನಿಗೆ ಏಳು ಬಾರಿ ಹೃದಯಾಘಾತ
ಈ ಬಾಲಕ ತನ್ನ ಪೋಷಕರೊಂದಿಗೆ ಆಕ್ಟೋಬರ್ 23 ರಂದು ಹೊರಗೆ ಹೋಗಲು ಸಿದ್ಧಗೊಳ್ಳುತ್ತಿದ್ದ ವೇಳೆ ಈತನಿಗೆ ಶೂ ಒಳಗಿದ್ದ ಚೇಳೊಂದು ಕಚ್ಚಿದೆ. ಮೃತ ಲೂಯಿಜ್ ಮಿಗುಯೆಲ್ ಫುರ್ಟಾಡೊ ಬಾರ್ಬೋಸಾ, ಬ್ರೆಜಿಲ್‌ನ ಸಾವೊ ಪೌಲೋ (Sao Paulo state) ರಾಜ್ಯದ ಅನ್ಹೆಬಿ (Anhembi) ನಗರದ ನಿವಾಸಿಯಾಗಿದ್ದ. ಈತ ಶೂ ಧರಿಸಿ ಕ್ಷಣದಲ್ಲಿಯೇ ಈತನ ಕಾಲಿಗೆ ಏನೋ ಕಚ್ಚಿದ ಅನುಭವವಾಗಿದ್ದು, ಬಾಲಕ ನೋವಿನಿಂದ ಚೀರಿಕೊಂಡಿದ್ದಾನೆ. ಆದರೆ ಮಗುವಿಗೆ ಕಚ್ಚಿದ್ದೇನು ಎಂಬುದರ ಬಗ್ಗೆ ಪೋಷಕರಿಗೆ ಆ ಕ್ಷಣದಲ್ಲಿ ಗೊತ್ತಾಗಿಲ್ಲ. ಆದರೆ ಚೇಳು ಕಚ್ಚಿದ ಸ್ವಲ್ಪ ಸಮಯದಲ್ಲೇ ಆತನ ಕಾಲು ಕೆಂಪು ಬಣ್ಣಕ್ಕೆ ತಿರುಗಿದೆ. ಮಗು ನೋವು ಸಮಯದಿಂದ ಸಮಯಕ್ಕೆ ಹೆಚ್ಚುತ್ತಿದೆ ಎಂದು ಅಳುತ್ತಿದ್ದ ಈ ವೇಳೆ ಬಾಲಕನಿಗೆ ಕಚ್ಚಿದ್ದು ಚೇಳು ಎಂದು ನಾವು ಭಾವಿಸಿದೆವು ಎಂದು ಪೋಷಕರು ಹೇಳಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೆಲ ದಿನ ಆಸ್ಪತ್ರೆಯಲ್ಲಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ನಂತರ ಸಾವನ್ನಪ್ಪಿದ್ದ.