ಸುಪ್ರೀಂ ಮೊರೆ ಹೋದ ಬಾಬಾ ರಾಮ್‌ದೇವ್ ಪ್ರಕರಣಗಳನ್ನು ಒಟ್ಟುಗೂಡಿಸಿ ದೆಹಲಿಗೆ ವರ್ಗಾಯಿಸಬೇಕು ಎಂದು ಅರ್ಜಿ

ನವದೆಹಲಿ(ಜೂ.24): ವೈದ್ಯರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ತಮ್ಮ ವಿರುದ್ಧ ದೇಶಾದ್ಯಂತ ದಾಖಲಾದ ಕೇಸ್‌ಗಳ ವಿರುದ್ಧ ಯೋಗಗುರು ಬಾಬಾ ರಾಮ್‌ದೇವ್‌ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಜೊತೆಗೆ ತಮ್ಮ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸಿ ದೆಹಲಿಗೆ ವರ್ಗಾಯಿಸಬೇಕು ಎಂದು ತಮ್ಮ ಅರ್ಜಿ ಮುಖಾಂತರ ಬಾಬಾ ರಾಮ್‌ದೇವ್‌ ಅವರು ಸುಪ್ರೀಂಗೆ ನಿವೇದಿಸಿಕೊಂಡಿದ್ದಾರೆ.

ಮತ್ತೆ ಪವಾರ್‌- ಪ್ರಶಾಂತ್‌ ಭೇಟಿ: 15 ದಿನದಲ್ಲಿ 3ನೇ ಸಲ ಸಮಾಲೋಚನೆ

ಕೊರೋನಾ 2ನೇ ಅಲೆ ಉತ್ತುಂಗಕ್ಕೆ ಮುಟ್ಟಿದ ವೇಳೆ ಬಾಬಾ ರಾಮ್‌ದೇವ್‌ ಅವರು ಕೊರೋನಾ ವಿರುದ್ಧ ವೈದ್ಯಕೀಯ ಚಿಕಿತ್ಸೆಯ ಪರಿಣಾಮಕಾರಿಯ ಬಗ್ಗೆ ಪ್ರಶ್ನಿಸಿದ್ದರು. ಅದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

COVID-19 ಚಿಕಿತ್ಸೆಗಾಗಿ ವೈದ್ಯಕೀಯ ಕ್ಷೇತ್ರ ಬಳಸುತ್ತಿರುವ ಔಷಧಿಗಳ ಬಗ್ಗೆ "ಸುಳ್ಳು" ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಕಳೆದ ವಾರ ಛತ್ತೀಸ್‌ಗಡ್ ಪೊಲೀಸರು ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.