ನವದೆಹಲಿ(ಡಿ.01): ಖ್ಯಾತ ಸಾಮಾಜಿಕ ಕಾರ್ಯಕರ್ತ ಬಾಬಾ ಆಮ್ಟೆ ಮೊಮ್ಮಗಳು ಡಾ. ಶೀತಲ್ ಆಮ್ಟೆ ಕಾರಜಿಗಿ(39) ಸೋಮವಾರದಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವರೋರಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ್ದು, ಶೀತಲ್‌ ವಿಕಾಸ್ ಅವರು ವಿಷವಿದ್ದ ಚುಚ್ಚುಮದ್ದು ತೆಗೆದುಕೊಂಡಿದ್ದರೆಂದು ವೈದ್ಯರು ತಿಳಿಸಿದ್ದಾರೆ. ಶೀತಲ್ ಮೃತದೇಹ ಪತ್ತೆಯಾದ ಆನಂದ ವನದ ಕೋಣೆಗೆ ಸೀಲ್ ಹಾಕಲಾಗಿದ್ದು, ನಾಗಪುರದ ವಿಧಿವಿಜ್ಞಾನ ತಂಡ ಹೆಚ್ಚಿನ ತಪಾಸಣೆ ನಡೆಸಲಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಖ್ಯಾತ ಗಾಯಕ ಕೈಲಾಶ್ ಖೇರ್!

ಕೌಟುಂಬಿಕ ಕಲಹ:

ಶೀತಲ್‌ ವಿಕಾಸ್‌ ಅವರು ಪ್ರಸ್ತುತ ಆನಂದ ವನದಲ್ಲಿರುವ ಬಾಬಾ ಆಮ್ಟೆ ಅವರು ಸ್ಥಾಪಿಸಿರುವ  'ಮಹಾರೋಗಿ ಸೇವಾ ಸಮಿತಿಯ ಸಿಇಒ ಆಗಿದ್ದರು. ಹೆಸರಾಂತ ವೈದ್ಯೆ ಕೂಆ ಆಗಿದ್ದ ಶೀತಲ್‌ರವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಆದರೆ ಅವರು ಇತ್ತೀಚೆಗೆ ಮಹಾರೋಗಿ ಸೇವಾ ಸಮಿತಿಯ ನಿರ್ವಹಣೆಯಲ್ಲಾಗುತ್ತಿರುವ ಅಕ್ರಮದ ಕುರಿತು ಟ್ರಸ್ಟ್‌ನ ಸದಸ್ಯರು ಮತ್ತು ಆಮ್ಟೆ ಕುಟುಂಬದವರ ವಿರುದ್ಧ ಸಾರ್ವಜನಿಕವಾಗಿ ಗಂಭೀರ ಆರೋಪಗಳನ್ನು ಮಾಡಿದ್ದರು. ಟ್ರಸ್ಟ್ ಮ್ಯಾನೇಜ್‌ಮೆಂಟ್ ಮತ್ತು ಕುಟುಂಬವನ್ನು ದೂಷಿಸಿದ್ದರು. 

ಆರೋಪ ಹೊರಿಸಿದ್ದ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳ ವೈಯಕ್ತಿಕ ಖಾತೆಗಳಲ್ಲಿ ಪೋಸ್ಟ್ ಮಾಡಿ, ಕೇವಲ ಎರಡು ತಾಸಿನಲ್ಲಿ ತೆಗೆದಿದ್ದರು. ಅಲ್ಲದೇ ಬಾಬಾ ಆಮ್ಟೆ ಅವರ ಪುತ್ರ ವಿಕಾಸ್, ಪ್ರಕಾಶ್ ಹಾಗೂ ಅವರ ಪತ್ನಿ ಭಾರತಿ ಮತ್ತು ಮಂದಾಕಿನಿ, ಶೀತಲ್ ಮಾಡಿದ್ದ ಆರೋಪಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದರು. ಶೀತಲ್‌ ಅವರ ಆರೋಪಗಳನ್ನು ನಿರಾಕರಿಸಿದ್ದ ಅವರು ನ.24ರಂದು ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ಸಹಿಯನ್ನೂ ಮಾಡಿದ್ದರು.

ಯುವ ಸ್ವಾಮೀಜಿ ಆತ್ಮಹತ್ಯೆ ಕೇಸ್ : 8 ದಿನದಲ್ಲೇ ಮತ್ತೋರ್ವ ಉತ್ತರಾಧಿಕಾರಿ

ಸಾಮಾಜಿಕ ಕಾರ್ಯ ಅದರಲ್ಲೂ ವಿಶೇಷವಾಗಿ ಕುಷ್ಠರೋಗಿಗಳ ಸೇವೆ ಮಾಡಿದ ಕಾರಣಕ್ಕಾಗಿ ಬಾಬಾ ಆಮ್ಟೆ ಅವರಿಗೆ ರಾಮನ್ ಮ್ಯಾಗ್ಸೆಸ್ಸೆ ಹಾಗೂ ಪದ್ಮವಿಭೂಷಣ ಪ್ರಶಸ್ತಿ ದೊರೆಕಿವೆ. 2008ರಲ್ಲಿ ಬಾಬಾ ಆಮ್ಟೆ ನಿಧನ ಹೊಂದಿದ್ದರು.

1959ರಲ್ಲಿ ಚಂದ್ರಾಪುರ ಜಿಲ್ಲೆಯ ವರೋರಾದ ಆನಂದ ವನ ದಲ್ಲಿ ಬಾಬಾ ಆಮ್ಟೆ, ಮಹಾರೋಗಿ ಸೇವಾ ಸಮಿತಿಯನ್ನು ಸ್ಥಾಪಿಸಿದ್ದರು. ಸಮಿತಿಯ ಸಾರ್ವಜನಿಕ ದತ್ತಿ ಟ್ರಸ್ಟ್‌ಗೆ ಬಾಬಾ ಆಮ್ಟೆ ಮಗ ವಿಕಾಸ್ ಆಮ್ಟೆ ಕಾರ್ಯದರ್ಶಿಯಾಗಿ ಹಾಗೂ ಮೊಮ್ಮಗಳು ಶೀತಲ್ ಕಾರಜಿಗಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಮಹಾರೋಗಿ ಸೇವಾ ಸಮಿತಿಯು 1967ರಲ್ಲಿ ಚಂದ್ರಾಪುರ ಜಿಲ್ಲೆಯ ಸೋಮನಾಥ್‌ನಲ್ಲಿ ಲೋಕ್ ಬಿರಾದರಿ ಪ್ರಕಲ್ಪ್ ಹಾಗೂ 1973ರಲ್ಲಿ ಗಡ್‌ಚಿರೋಲಿ ಜಿಲ್ಲೆಯ ಭಮರ್‌ಗಡ ತೆಹಲ್ಸಿನಲ್ಲಿ ಹೇಮಲಾಕ್ಷ ಎನ್ನುವ ಯೋಜನೆ ಕೈಗೊಂಡಿದೆ. ಹೇಮಲಾಕ್ಷ ಯೋಜನೆಯನ್ನು ಡಾ.ಪ್ರಕಾಶ್– ಡಾ.ಮಂದಾಕಿನಿ ಆಮ್ಟೆ ಹಾಗೂ ಅವರ ಮಕ್ಕಳಾದ ದಿಗಂತ್, ಅನಿಕೇತ್ ಮತ್ತು ಅವರ ಪತ್ನಿಯರಾದ ಅನಘಾ ಮತ್ತು ಸಮೀಕ್ಷಾ ನೋಡಿಕೊಳ್ಳುತ್ತಿದ್ದಾರೆ.