ಬಾಳೆಹೊನ್ನೂರು (ನ.01): ಹಾಸನ ಜಿಲ್ಲೆ ಅಲೂರು ತಾಲೂಕಿನ ಶ್ರೀಮದ್ರಂಭಾಪುರಿ ಶಾಖಾ ಕಾರ್ಜುವಳ್ಳಿ ಹಿರೇಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು ಅಕಾಲಿಕವಾಗಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಉತ್ತರಾಧಿಕಾರಿಯಾಗಿ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿಯ ಸಿದ್ಧಲಿಂಗ ದೇವರನ್ನು ಶ್ರೀ ರಂಭಾಪುರಿ ಜಗದ್ಗುರುಗಳು ನಿಯುಕ್ತಿಗೊಳಿಸಿದ್ದಾರೆ.

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವ ಸ್ವಾಮೀಜಿ : ಸಿಕ್ಕ ಡೆತ್ ನೋಟ್

ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರು ಶಾಖಾ ಮಠ ಕಾರ್ಜುವಳ್ಳಿ ಹಿರೇಮಠದಲ್ಲಿ  ಶ್ರೀಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದರು. 

ಅವರ ಸಾವಿನ ವೇಳೆ ಡೆತ್ ನೋಟ್ ಸಹ ಲಭ್ಯವಾಗಿತ್ತು. ಅದರಲ್ಲಿ ತನ್ನ ಸಾವಿಗೆ ತಾವೇ ಕಾರಣ ಎಮದು ಬರೆದಿದ್ದರು. ಈ ನಿಟ್ಟಿನಲ್ಲಿ  ಇದೀಗ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ.