ನದವದೆಹಲಿ(ಆ.22): ಹಿಂದಿ ಹೇರಿಕೆ ವಿಚಾರ ಮತ್ತೊಮ್ಮೆ ಕಾವು ಪಡೆದಿದೆ. ಕೆಲ ದಿನಗಳ ಹಿಂದಷ್ಟೇ ಈ ವಿಚಾರವಾಗಿ ಅಸಮಾಧಾನ ಹೊರ ಹಾಕಿದ್ದ ತಮಿಳುನಾಡಿನ ಡಿಎಂಕೆ ಸಂಸದೆ ಕನಿಮೋಳಿ ಇದೀಗ 'ಹಿಂದಿ ಭಾಷೆ ಗೊತ್ತಿಲ್ಲದವರು ಹೊರ ಹೋಗಬಹುದು' ಎಂದ ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರನ್ನು ಅಮಾನತ್ತುಗೊಳಿಸಬೇಕಾಗಿ ಧ್ವನಿ ಎತ್ತಿದ್ದಾರೆ.

ಹಿಂದಿ ಬರಲ್ಲ ಎಂದ ಸಂಸದೆಗೆ ನೀವು ಭಾರತೀಯರಾ? ಎಂದು ಪ್ರಶ್ನಿಸಿದ ಅಧಿಕಾರಿ!

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ತಮಿಳುನಾಡಿನ ತೂತುಕುಡಿ ಕ್ಷೇತ್ರದ ಸಂಸದೆ ಕನಿಮೋಳಿ 'ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾರವರು ಹಿಂದಿ ಭಾಷೆ ತಿಳಿಯದವರು ಸಚಿವಾಲಯದ ತರಬೇತಿ ಕಾರ್ಯಕ್ರಮದಿಂದ ಹೊರ ಹೋಗಬಹುದೆಂದು ಹಹೇಳಿದ್ದಾರೆ. ಇದು ಹಿಂದಿ ಹೇರಿಕೆಯಾಗುತ್ತಿರುವುದನ್ನು ಸ್ಪಷ್ಟಗೊಳಿಸುತ್ತದೆ. ಇಂತಹ ವರ್ತನೆ ಸಹಿಸಲಸಾಧ್ಯ ಎಂದಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಕನ್ನಿಮೋಳಿ ಕಾರ್ಯದರ್ಶಿಯನ್ನು ಸರ್ಕಾರ ಅಮಾನತ್ತುಗೊಳಿಸಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು. ಹಿಂದಿ ಒತ್ತಲ್ಲದವರು ಇಂತಹವರ ವರ್ತನೆಯನ್ನು ಯಾವಾಗದವರೆಗೆ ಸಹಿಸಬೇಕು? ಎಂದು ಪ್ರಶ್ನಿಸಿದ್ದಾರೆ. 

ಹೊಸ ಶಿಕ್ಷಣ ನೀತಿ ನವಭಾರತಕ್ಕೆ ಭವ್ಯ ಮುನ್ನುಡಿ

ಇನ್ನು ಕನಿಮೋಳಿಯ ಈ ಟ್ವೀಟ್ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾರ್ತಿ ಚಿದಂಬರಂ ಇದು ಒಪ್ಪಲು ಸಾಧ್ಯವಿಲ್ಲವೆಂದಿದ್ದಾರೆ. ಕನಿಮೋಳಿ ಬೆಂಬಲಿಸಿ ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ ಆಯುಷ್ ತರಬೇತಿ ಹಿಂದಿಯಲ್ಲಿ ನೀಡುವ ಮೂಲಕ ತಮಿಳುನಾಡನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇಂಗ್ಲೀಷ್ ಗೊತ್ತಿಲ್ಲ ಎಂಬುವುನ್ನು ಬಿಡಿ, ಆದರೆ ಹಿಂದಿ ಗೊತ್ತಿಲ್ಲದದವರು ಹೊರ ಹೋಗಬಹುದೆಂಬ ಉದ್ಧಟತನದ ಹೇಳಿಕೆ ಒಪ್ಪಲು ಸಾಧ್ಯವೇ ಇಲ್ಲ' ಎಂದಿದ್ದಾರೆ.

ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪುತ್ರರಾಗಿರುವ ಕಾರ್ತಿ ಚಿದಂಬರಂ ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. 

ಹಿಂದಿ ಬರಲ್ಲ ಎಂದ ಸಂಸದೆಗೆ ನೀವು ಭಾರತೀಯರಾ?

ಕೆಲ ದಿನಗಳ ಹಿಂದಷ್ಟೇ ಹಿಂದಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ ಡಿಎಂಕೆ ಸಂಸದೆ ಕನಿಮೋಳಿ ಅವರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಅಧಿಕಾರಿಯೊಬ್ಬ ‘ನೀವು ಭಾರತೀಯರಾ’ ಎಂದು ಕೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದು ಹಿಂದಿ ಹೇರಿಕೆ ಎಂದು ಕನಿಮೋಳಿ ಅವರು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ, ಅಧಿಕಾರಿ ವಿರುದ್ಧ ಸೂಕ್ರ ಕ್ರಮ ಜರುಗಿಸುವುದಾಗಿ ಸಿಐಎಸ್‌ಎಫ್‌ ಸ್ಪಷ್ಟನೆ ನೀಡಿತ್ತಲ್ಲದೇ ಸ್ಥಳೀಯ ಭಾಷೆ ಬಲ್ಲವರನ್ನೇ ಏರ್ಪೋರ್ಟ್‌ಗೆ ನಿಯೋಜಿಸ್ತೀವಿ ಎಂದೂ ಹೇಳಿತ್ತು.