ಭಾರತದಿಂದ 3,500 ಕೋಟಿರೂ ದೇಣಿಗೆ, ನಯಾ ಪೈಸೆ ವಿದೇಶಿ ಫಂಡ್ ಪಡೆಯದೆ ರಾಮ ಮಂದಿರ ನಿರ್ಮಾಣ!
ಭವ್ಯ ಶ್ರೀ ರಾಮ ಮಂದಿರದಲ್ಲಿ ದರ್ಶನಕ್ಕಾಗಿ ಭಕ್ತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. 2024ರ ಜನವರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ. ಭಕ್ತರಿಗೂ ಪ್ರವೇಶ ದೊರೆಯಲಿದೆ. ಶ್ರೀರಾಮನ ಮಂದಿರ ಹಲವು ವಿಶೇಷತೆಗಳಿಂದ ಕೂಡಿದೆ. ಇದು ಸಂಪೂರ್ಣವಾಗಿ ದೇಶದ ಮೂಲೆ ಮೂಲೆಯಿಂದ ಭಕ್ತರು ನೀಡಿದ ದೇಣಿಗೆಯಲ್ಲಿ ನಿರ್ಮಾಣವಾಗುತ್ತಿದೆ. ಮತ್ತೊಂದು ಅಂಶ ಎಂದರೆ ವಿದೇಶದಿಂದ ನಯಾ ಪೈಸೆ ಪಡೆದುಕೊಂಡಿಲ್ಲ.

ಆಯೋಧ್ಯೆ(ಸೆ.12) ಆಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 2024ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾಣ ಪ್ರತಿಷ್ಠೆ ನೇರವೇರಸಲಿದ್ದಾರೆ. ದೇಶದ ಆಸ್ಮಿತೆಯ ಪ್ರತೀಕ, ಶ್ರೀರಾಮನ ಜನ್ಮಭೂಮಿಯಲ್ಲೇ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಧಾರ್ಮಿಕ ಕೇಂದ್ರದ ಮೇಲಿನ ದಾಳಿ ಬಳಿಕ ಶ್ರೀರಾಮ ಮಂದಿರ ಕಟ್ಟಲು ಶತ ಶತಮಾನಗಳವರೆಗೆ ಹೋರಾಟ ನಡೆದಿದೆ. ತ್ಯಾಗ ಬಲಿದಾನಗಳು ನಡೆದಿದೆ. ಶತಮಾನಗಳ ಕಾಲ ಕಾನೂನು ಹೋರಾಟ ನಡೆದು ಕೊನೆಗೂ ಶ್ರೀರಾಮ ಬಂಧನದಿಂದ ಮುಕ್ತಗೊಂಡಿದ್ದಾನೆ. ಕೇಂದ್ರ ಸರ್ಕಾರದ ವಿಶೇಷ ಕಾಳಜಿ, ಪ್ರಧಾನಿ ನರೇಂದ್ರ ಮೋದಿ ಇಚ್ಚಾ ಶಕ್ತಿ ಹಾಗೂ ಕೋಟ್ಯಾಂತರ ಭಕ್ತರ ಶ್ರಮದಿಂದ ಇದೀಗ ರಾಮ ಮಂದಿರ ನಿರ್ಮಾಣ ಅಂತಿಮ ಹಂತದಲ್ಲಿದೆ. ಈ ರಾಮ ಮಂದಿರದಲ್ಲಿ ಹಲವು ವಿಶೇಷತೆಗಳಿವೆ. ಈ ಕುರಿತು ಏಷ್ಯಾನೆಟ್ ನ್ಯೂಸ್ ಚೇರ್ಮೆನ್ ರಾಜೇಶ್ ಕಾಲ್ರಾ ದೇವಸ್ಥಾನ ನಿರ್ಮಾಣ ಕಮಿಟಿಯ ಅಧ್ಯಕ್ಷರಾಗಿರುವ ನೃಪೇಂದ್ರ ಮಿಶ್ರಾ ಜೊತೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.
ಶ್ರೀರಾಮ ಮಂದಿರದಲ್ಲಿ ಹಲವು ವಿಶೇಷತೆಗಳಿವೆ. ರಾಮಾಯಣ ದರ್ಶನ, ದಶರಥ ಮಹಾರಾಜನ ಆಡಳಿತ ಸೇರಿದಂತೆ ಪ್ರತಿ ಹಂತವನ್ನು ದೇವಾಲಯದಲ್ಲಿ ಕೆತ್ತನೇ ಮಾಡಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಇದರ ಜೊತೆಗೆ ಈ ದೇವಾಲಯ ಸಂಪೂರ್ಣವಾಗಿ ಭಾರತದ ಮೂಲೆ ಮೂಲೆಯಿಂದ ಭಕ್ತರು ನೀಡಿದ ದೇಣಿಗೆಯಿಂದ ನಿರ್ಮಾಣವಾಗಿದೆ. ವಿದೇಶದಿಂದ ನಯಾ ಪೈಸೆ ಫಂಡ್ ಪಡೆಯಲು ಆಯೋಧ್ಯಾ ಮಂದಿರ ನಿರ್ಮಾಣವಾಗುತ್ತಿದೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಸ್ವಯಂಪ್ರೇರಿತರಾಗಿ ದೇಣಿಕೆ ನೀಡಿದ್ದಾರೆ.
ರಾಮನವಮಿ ದಿನ ಶ್ರೀರಾಮನ ಮುಖದ ಮೇಲೆ ಸೂರ್ಯಕಿರಣ ಸ್ಪರ್ಶ, ಆಯೋಧ್ಯೆ ಮಂದಿರಕ್ಕೆ ಟೆಕ್ನಾಲಜಿ ಬಳಕೆ!
ರಾಜೇಶ್ ಕಾಲ್ರಾ: ಜಗತ್ತಿನೆಲ್ಲೆಡೆಯಿಂದ ಇದಕ್ಕೆ ನೆರವು ಹರಿದುಬರುತ್ತಿದೆ. ಹಣದ ರೂಪದಲ್ಲಿ ಅಥವಾ ಬೇರೆ ರೀತಿಯಲ್ಲಿ. ಅದರಲ್ಲಿ ನಿಮಗೆ ಅದ್ಭುತ ಎನಿಸಿದ್ದು, ನಿಮಗೆ ಹಂಚಿಕೊಳ್ಳಬೇಕು ಎನಿಸಿದರೆ ತಿಳಿಸಿ
ನೃಪೇಂದ್ರ ಮಿಶ್ರಾ: ಈವರೆಗೆ ನಾವು ಕೇವಲ ಭಾರತದ ಒಳಗಿನಿಂದ ಮಾತ್ರ ನೆರವು ಸ್ವೀಕರಿಸಿದ್ದೇವೆ. ಏಕೆಂದರೆ ನಮ್ಮ ಬಳಿ MCRA ಕೋಡ್ ಇಲ್ಲ. ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟ ವಿದೇಶಿಗರು ಈ ಬಗ್ಗೆ ಅಸಂತುಷ್ಟರಾಗಿದ್ದಾರೆ. ತಾವೂ ಕೊಡುಗೆ ನೀಡಲು ಯಾವಾಗ ನಮ್ಮ ಅಕೌಂಟ್ MCRAಗೆ ಮುಕ್ತವಾಗುತ್ತದೆಯೋ ಎಂದು ಕಾಯುತ್ತಿದ್ದಾರೆ. ಅಪರೂಪದ ಸಂಗತಿ ಏನೆಂದರೆ 4 ಲಕ್ಷ ಗ್ರಾಮಿಣ ಜನತೆ ಹಾಗೂ ಗ್ರಾಮಪಂಚಾಯಿತಿಗಳು 10 ರೂಪಾಯಿಯಿಂದ ಮೊದಲ್ಗೊಂಡು ನಮಗೆ ನೆರವು ನೀಡಿವೆ. ಆ ಮೂಲಕವೇ ನಮ್ಮ ಟ್ರಸ್ಟ್ಗೆ 3,500 ಕೋಟಿ ಹಣ ಹರಿದುಬಂದಿದೆ. ಇದು ಜನರ ಶ್ರದ್ಧೆಗೆ ಸಾಕ್ಷಿ. ಅವರ ಹಣ ಸದುಪಯೋಗವಾಗುತ್ತದೆ ಎಂಬ ನಂಬಿಕೆಗೆ ಸಾಕ್ಷಿ.
ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ!
ರಾಜೇಶ್ ಕಾಲ್ರಾ: ನಾವು ಈ ಮೊದಲು ಏಪ್ರಿಲ್ 2022ನಲ್ಲಿ ಭೇಟಿಯಾಗಿದ್ದೆವು. ಆಗ ಇಲ್ಲಿ ಸಮತಟ್ಟಾದ ಜಾಗವಿತ್ತು. ಆಗ ಇಲ್ಲಿ ಏನೂ ಇರಲಿಲ್ಲ. ಆಮೇಲೆ ಆರು ತಿಂಗಳ ನಂತರ ಅದೇ ವರ್ಷ ಅಕ್ಟೋಬರ್ನಲ್ಲಿ ಬಂದಿದ್ದೆ, ಆಗ ದೇವಸ್ಥಾನದ ರೂಪುರೇಷೆ ಸಿದ್ಧವಾಗಿತ್ತು. ಆದರೆ ಈ ಒಂದೇ ವರ್ಷದಲ್ಲಿ ಇಲ್ಲಿ ಅದ್ಭುತ ಬದಲಾವಣೆಗಳಾಗಿವೆ.
ನೃಪೇಂದ್ರ ಮಿಶ್ರಾ: ನೀವು ಹೇಳಿರೋ ಆ ಹಂತಗಳ ಬಗ್ಗೆ ಮಾತನಾಡುವ ಮುನ್ನ ಇಂದು ನಾವೆಲ್ಲಿದ್ದೇವೆ ಎಂದು ಮೊದಲು ಹೇಳುತ್ತೇನೆ. ಇದು ಪೂರ್ವದ ದ್ವಾರ. ಭಕ್ತರು ಇಲ್ಲಿಂದಲೇ ಪ್ರವೇಶಿಸುತ್ತಾರೆ. ಭಕ್ತರು ಈ ಕಡೆಯಿಂದ ಬರ್ತಾರೆ. ಸುರಂಗ ಮಾರ್ಗದ ಮೂಲಕ ಒಳ ಬರುತ್ತಾರೆ. ಅಲ್ಲಿ ಒಂದು ಗೋಡೆಯಿರುತ್ತದೆ. ಅದು ನಿರ್ಮಾಣವಾಗುತ್ತಿದೆ. ಅಲ್ಲಿಂದ ಮೇಲೆ ಬಂದರೆ ಈ ಲೆವೆಲ್ಗೆ ತಲುಪುತ್ತಾರೆ. ಇಲ್ಲಿಂದ ಮೇಲೆ ಹತ್ತಿ ಹೋಗಬೇಕು. ಈ ಕಡೆ ಮೂರು ಪ್ಲಾಟ್ಫಾರ್ಮ್, ಆ ಕಡೆ ಮೂರು ಪ್ಲಾಟ್ಫಾರ್ಮ್ ಇರುತ್ತದೆ. ಅದು ಸ್ವಾಗತ ದ್ವಾರ. ಅಲ್ಲಿ ಸಿಂಹದ ಮೂರ್ತಿ ಇರುತ್ತದೆ. ಅದು ಸಿಂಹದ್ವಾರ, ಆನಂತರ ಗಜದ್ವಾರ, ಇಟ್ಟಿಗೆ ಕಟ್ಟುತ್ತಿದ್ದಾರೆ ನೋಡಿ.. ಅದು. ಕೊನೆಯಲ್ಲಿ ಹನುಮಂತ ಇರುತ್ತಾನೆ. ಆ ಕಡೆ ಗರುಡ ಇರುತ್ತಾನೆ. ಅದು ಭಕ್ತರ ಸ್ವಾಗತಕ್ಕೆ ಇರುವ ದೇಗುಲದ ಪ್ರವೇಶ. ಇದು ಅಯೋಧ್ಯೆಯ ಸಾಂಪ್ರದಾಯಿಕ ದೇವಸ್ಥಾನಗಳ ಶೈಲಿಯಲ್ಲೇ ನಿರ್ಮಾಣವಾಗುತ್ತಿದೆ.
ಇಲ್ಲಿಂದ ಒಳ ಹೋಗುತ್ತಿದ್ದಂತೆ 5 ಮಂಟಪಗಳಿವೆ. ಮಂಟಪಗಳ ಕೆಳಮಹಡಿಗಳು ಸಂಪೂರ್ಣವಾಗಿವೆ. 2023ರ ಡಿಸೆಂಬರ್ ಒಳಗೆ ನೆಲಮಹಡಿಯ ನಿರ್ಮಾಣ ಮುಗಿಯುತ್ತದೆ. ಭಕ್ತರು ಮಂಟಪದ ಮೂಲಕ ಒಳಬರಬೇಕು, ಅಲ್ಲಿಂದ ಗರ್ಭಗುಡಿಯತ್ತ ಸಾಗಿ ದೇವರ ದರ್ಶನ ಪಡೆದು ಈ ಕಡೆಯಿಂದ ಹೊರಬರಬೇಕು. ಈ ನಿರ್ಮಾಣವೇ ನಮಗೆ ಸವಾಲಾಗಿದೆ. ಆದ್ದರಿಂದ ಮುಂದಿನ 3 ತಿಂಗಳು, ಡಿಸೆಂಬರ್ ಒಳಗೆ ಈ ಭಾಗವನ್ನು ನಾವು ಕಟ್ಟಿ ಮುಗಿಸಲೇಬೇಕು.
ಹಲವರು ನನ್ನ ಬಳಿ ಕೇಳುತ್ತಾರೆ, ದೇವಸ್ಥಾನ ಸಂಪೂರ್ಣ ಕಟ್ಟಿ ಮುಗಿಯುವುದು ಯಾವಾಗ ಅಂತ. ಕೆಳಮಹಡಿ ಡಿಸೆಂಬರ್ 2023ನಲ್ಲಿ ಮುಗಿಯುತ್ತದೆ ಎಂದಷ್ಟೇ ಹೇಳಬಲ್ಲೆ. ಬಹುಶಃ ಇಡೀ ದೇವಸ್ಥಾನ 2024ರ ಡಿಸೆಂಬರ್ ವೇಳೆಗೆ ಮುಗಿಯಬಹುದು. ಅದು ಎರಡನೇ ಹಂತ.
ದೇಶದ ಮೂಲೆ ಮೂಲೆಯಲ್ಲಿ ಭಕ್ತರು ತಮ್ಮ ಕೈಲಾಸದ ದೇಣಿಗೆ ನೀಡಿ ಶ್ರೀರಾಮನ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಭಕ್ತರ ಶತಮಾನಗಳ ಬೇಡಿಕೆ, ಕೋರಿಕೆ, ಪ್ರಾರ್ಥನೆ ಈಡೇರಲಿದೆ. 10 ರೂಪಾಯಿ, 20 ರೂಪಾಯಿಂದ ಹಿಡಿದು ಲಕ್ಷ ರೂಪಾಯಿ, ಕೋಟಿ ರೂಪಾಯಿ ವರೆಗೂ ದೇಣಿಗೆ ಬಂದಿದೆ. ಭಕ್ತರು ಒಟ್ಟು 3,500 ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ನೃಪೇಂದ್ರ ಮಿಶ್ರಾ ಹೇಳಿದ್ದಾರೆ.