Asianet Suvarna News Asianet Suvarna News

ರಾಮನವಮಿ ದಿನ ಶ್ರೀರಾಮನ ಮೇಲೆ ಸೂರ್ಯಕಿರಣ ಸ್ಪರ್ಶ, ಆಯೋಧ್ಯೆ ಮಂದಿರಕ್ಕೆ ಟೆಕ್ನಾಲಜಿ ಬಳಕೆ!

ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಇಷ್ಟೇ ಅಲ್ಲ ಈ ದೇವಸ್ಥಾನದ ಮತ್ತೊಂದು ವಿಶೇಷತೆ ಎಂದರೆ ರಾಮನವಮಿ ದಿನ ಶ್ರೀರಾಮನ ಮುಖದ  ಮೇಲೆ ಸೂರ್ಯಕಿರಣ ಸ್ಪರ್ಶವಾಗಲಿದೆ.  ಹಾಗಾದರೆ ಶ್ರೀರಾಮ ಮಂದಿರದಲ್ಲಿ ಬಳಸಿರುವ ತಂತ್ರಜ್ಞಾನವೇನು?

Ayodhya shri ram mandir exclusive interview Sun rays Touches Ram idol on occasion of Rama navami ckm
Author
First Published Sep 12, 2023, 8:05 PM IST

ಆಯೋಧ್ಯೆ(ಸೆ.12)  ಆಯೋಧ್ಯೆ ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ 2024ರ ಜನವರಿಯಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಭಕ್ತರಿಗೆ  ಜನವರಿಯಿಂದಲೇ ದರ್ಶನಕ್ಕೆ ಅವಕಾಶ ಸಿಗಲಿದೆ. ಶ್ರೀರಾಮ  ಮಂದಿರದ ಕೆಳಮಹಡಿ ನಿರ್ಮಾಣ  ಕಾರ್ಯ ಡಿಸೆಂಬರ್ 2023ನಲ್ಲಿ ಸಂಪೂರ್ಣಗೊಳ್ಳಲಿದೆ. ಇನ್ನು  ಸಂಪೂರ್ಣ ದೇವಸ್ಥಾನ 2024ರ ಡಿಸೆಂಬರ್ ವೇಳೆಗೆ ಅಂತ್ಯಗೊಳ್ಳಲಿದೆ.  ಶ್ರೀರಾಮ ಮಂದಿರದಲ್ಲಿನ ಹಲವು ವಿಶೇಷತೆಗಳಲ್ಲಿ ರಾಮನವಮಿ ದಿನ ಶ್ರೀರಾಮನ  ಮುಖದ ಮೇಲೆ ಸೂರ್ಯಕಿರಣಗಳು ಬೀಳಲಿದೆ. ಈ ರೀತಿಯ ವಾಸ್ತುವಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಈ ಕುರಿತು ಏಷ್ಯಾನೆಸ್ ನ್ಯೂಸ್ ಚೇರ್ಮೆನ್ ರಾಜೇಶ್ ಕಾಲ್ರಾ ಆಯಧ್ಯೆ ಮಂದಿರ ನಿರ್ಮಾಣ ಕಮಿಟಿಯ ಅಧ್ಯಕ್ಷರಾಗಿರುವ ನೃಪೇಂದ್ರ ಮಿಶ್ರಾ ಜೊತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ವಿಸ್ತಾರವಾಗಿ ಹೇಳಿದ್ದಾರೆ. ಈ ವಿಶೇಷ ಸಂದರ್ಶನದ ವಿವರ ಇಲ್ಲಿದೆ.

ರಾಜೇಶ್ ಕಾಲ್ರಾ: ದೇವರ ಎದುರಲ್ಲಿ ಭಕ್ತರು ಎಷ್ಟು ಹೊತ್ತು ನಿಲ್ಲಬಹುದು ಎಂದೂ ನಿರ್ಧರಿಸಿದ್ದೀರಾ?
ನೃಪೇಂದ್ರ ಮಿಶ್ರಾ: ಇದು ನಾನು ಲೆಕ್ಕಾಚಾರ ಹಾಕುವ ಸಂಗತಿ ಅಲ್ಲ. ಇದು ಭಕ್ತರ ನಂಬಿಕೆಗೆ ಬಿಟ್ಟದ್ದು. ನಮ್ಮ ನಿರೀಕ್ಷೆ ಇರುವುದು ಉದ್ಘಾಟನೆಯಾದ ಮರುದಿನ ಒಂದೂಕಾಲು ಲಕ್ಷ ಜನ ದರ್ಶನಕ್ಕೆ ಬರಲಿದ್ದಾರೆ. ಒಂದೂಕಾಲು ಲಕ್ಷ ಜನ, 12 ಗಂಟೆಗಳಲ್ಲಿ ದರ್ಶನ ಪಡೆಯಬೇಕೆಂದರೆ ಒಬ್ಬೊಬ್ಬರಿಗೆ 25 ಸೆಕೆಂಡ್ ಮಾತ್ರ ಅವಕಾಶ ಸಿಗುತ್ತದೆ. ರಾಮನವಮಿ ದಿನ ಕೇವಲ 17 ಸೆಕೆಂಡ್ ಸಿಗುತ್ತದೆ. ಏಕೆಂದರೆ ಆ ದಿನ 3ರಿಂದ 5 ಲಕ್ಷದವರೆಗೂ ಭಕ್ತರು ಇರುತ್ತಾರೆ. ರಾಮನವಮಿಯ ದಿನ ಮಧ್ಯಾಹ್ನ 12 ಗಂಟೆಗೆ ಶಿಖರದ ಮೂಲಕ ಸೂರ್ಯನ ಕಿರಣ ಗರ್ಭಗುಡಿ ಪ್ರವೇಶಿಸುತ್ತದೆ. ಸರಿಯಾಗಿ ರಾಮನ ಹಣೆಗೆ ಸರಿಯಾಗಿ ಕಿರಣ ತಾಕುತ್ತದೆ. ಈ ಎಲ್ಲಾ ಲೆಕ್ಕಾಚಾರವನ್ನು CVRI ಹಾಗೂ ಆಸ್ಟ್ರೋ ಫಿಸಿಕ್ಸ್ ಡಿಪಾರ್ಟ್ಮೆಂಟ್ ವಹಿಸಿಕೊಂಡಿದೆ. ಆ ಕೆಲಸ ಮುಗಿದಿದೆ. ಅದಕ್ಕೆ ತಕ್ಕಂತೆ ಕಂಪ್ಯೂಟರ್ ಗ್ಯಾಜೆಟ್ ಸಹ ಸಿದ್ಧವಾಗಿದೆ.  ಆ ದಿನ 12 ಗಂಟೆಗೆ ಸರಿಯಾಗಿ ರಾಮನ ಹಣೆಯ ಮೇಲೆ ಸೂರ್ಯ ಕಿರಣ ಬೀಳುವ ಕ್ಷಣದ ದರ್ಶನಕ್ಕಾಗಿ ಲಕ್ಷಾಂತರ ಜನ ಕಾಯುತ್ತಿರುತ್ತಾರೆ. ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಎಲ್ಲಾ ಕಡೆ ಸ್ಕ್ರೀನ್ ಇರುತ್ತದೆ. ಆ ಮೂಲಕ ನೋಡಬಹುದು. ಆದರೂ ಅದನ್ನು ನೇರವಾಗಿ ನೋಡಬೇಕೆಂದು ಕಾಯುವವರು ಇರುತ್ತಾರೆ.

Breaking News ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ!

ರಾಜೇಶ್ ಕಾಲ್ರಾ: 2024ರ ಜನವರಿಯಲ್ಲಿ ಪ್ರಾಣಪ್ರತಿಷ್ಠೆಯಾದ ನಂತರ ಭಕ್ತರು ಇಲ್ಲಿಯೇ ಬರುತ್ತಾರಾ? ಇಲ್ಲಿ ನಡೆಯುತ್ತಿರುವ ಕೆಲಸ ಹೇಗೆ ಸಾಗುತ್ತದೆ?
ನೃಪೇಂದ್ರ ಮಿಶ್ರಾ: ಆಫ್ಕೋರ್ಸ್. ಭಕ್ತರು ಇಲ್ಲಿಯೇ ಹೋಗುತ್ತಾರೆ. ಕೆಲಸ ನಡೆಯುವ ಕಡೆ ಬ್ಯಾರಿಕೇಡ್ ಹಾಕಿರಲಾಗುತ್ತದೆ. ಈ ಡಿಸೆಂಬರ್ ಒಳಗೆ ಮೇಲ್ಛಾವಣಿ ಕೆಲಸ ಮುಗಿದಿರುತ್ತದೆ. ಶಿಖರ ಇರುವ ಕಡೆ ಕಾಮಗಾರಿ ಮುಗಿದಿರುವುದಿಲ್ಲ. ಏಕೆಂದರೆ ಶಿಖರ ಎರಡನೇ ಫ್ಲೋರ್ಗೂ ಇರುತ್ತದೆಯಲ್ವಾ..ಅಲ್ಲಿ ಮಾತ್ರ ಭಕ್ತರ ಸುರಕ್ಷತೆಗಾಗಿ ಸ್ಟೀಲ್ ರಾಡ್ ಹಾಕಲಾಗುತ್ತದೆ. ಭಕ್ತರ ಎರಡು ಸಾಲುಗಳು ಇಲ್ಲಿಂದಲೇ ಹೋಗಿ ದೇವರ ಎದುರು 25 ಅಡಿ ದೂರದವರೆಗೆ ಸಾಗುತ್ತದೆ. ದರ್ಶನ ಪಡೆದು ಕೆಳಗೆ ಸಾಗುತ್ತದೆ. 

ನೃಪೇಂದ್ರ ಮಿಶ್ರಾ: ದೇವಸ್ಥಾನದ ಪಾಯ 12 ಮೀ. ಆಳದಲ್ಲಿದೆ. ಬೆಡ್ಡಿಂಗ್ 2 ಮೀಟರ್, ಗ್ರಾನೈಟ್ ಎತ್ತರ 2.5 ಮೀ. ಅದು ನಮ್ಮ ಮೊದಲನೇ ಮೈಲುಗಲ್ಲು. ಅಡಿಪಾಯ ನಿರ್ಮಾಣವೇ ಮೊದಲ ಹಂತ. ಪಾಯ ಹಾಕಿದ ನಂತರ ಕಲ್ಲುಗಳನ್ನು ಹೇಗೆ ತರುವುದು ಅನ್ನೋ ಪ್ರಶ್ನೆ. ಏಕೆಂದರೆ ಕಲ್ಲು ತುಂಬಾ ಭಾರ. ಅದನ್ನು ತುಂಬಾ ಎಚ್ಚರಿಕೆಯಿಂದ ಮಾತ್ರವಲ್ಲ ವೈಜ್ಞಾನಿಕವಾಗಿ ಪರಿಶೀಲಿಸಿ ತಂದೆವು. ಐಐಟಿ ಚೆನ್ನೈ, ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಸ್ಟಿಟ್ಯೂಷನ್ನ ತಜ್ಞರು ಸೇರಿ ಕಲ್ಲುಗಳ ತೂಕ ಪರಿಶೀಲಿಸಿದರು. ಭೂಕಂಪದಂಥ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಏನು ಮಾಡಬೇಕು ಎಂದು ಲ್ಯಾಬ್ಗಳಲ್ಲಿ ಲೆಕ್ಕ ಹಾಕಿದರು. ಯಾವುದೇ ಒತ್ತಡ, ಕಂಪನಗಳನ್ನು ತಡೆಯಲು ಕಲ್ಲುಗಳು ಹೇಗಿರಬೇಕು, ಅದಕ್ಕೆ ಎಲ್ಲಿ ಆಸರೆ ನೀಡಬೇಕು ಎಂದು ಸೂಚನೆ ನೀಡಿದರು. ಅದು ನಮ್ಮ ಎರಡನೇ ಮೈಲುಗಲ್ಲು.  ಆ ಹಂತವನ್ನೂ ಮಾಡಿ ಮುಗಿಸಿದೆವು. ಈಗ ನಾನು ಹೇಳುವಾಗ ಸುಲಭ ಎನಿಸಬಹುದು. ಆದರೆ ಕಲ್ಲುಗಳನ್ನು  ತರುವುದು, ಇಲ್ಲಿ ಇಡುವುದು, ಅದಕ್ಕೆ ಮೇಲ್ಛಾವಣಿ ನಿರ್ಮಿಸುವುದು, ಇದಕ್ಕೆ ಬಹಳ ಕೌಶಲ್ಯ ಬೇಕು. ಇದನ್ನು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಸ್ಟಿಟ್ಯೂಷನ್ನ ತಜ್ಞರ ಉಸ್ತುವಾರಿಯಲ್ಲಿ ಮಾಡಲಾಯಿತು. ಎರಡು ಶಿಲೆಗಳ ಮಧ್ಯದ ಸ್ಥಳ ಕೇವಲ 0.5 ಮಾತ್ರ ಇರಬೇಕು. ಅದಕ್ಕಿಂತ ಜಾಸ್ತಿ ಇರುವಂತಿಲ್ಲ. ಅಷ್ಟು ಸೂಕ್ಷ್ಮವಾಗಿ ಕೆಲಸ ಮಾಡಿದೆವು. ಆ ಪರೀಕ್ಷೆಯಲ್ಲೂ ನಾವು ಪಾಸಾದೆವು.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಪ್ರಧಾನಿಗೆ ಅಧಿಕೃತ ಆಹ್ವಾನ ನೀಡಲಿರುವ ಸಿಎಂ ಯೋಗಿ

ಮೂರನೇ ಹಂತ ಕಂಬಗಳು. ಈ ದೇವಸ್ಥಾನದಲ್ಲಿ ಒಂದು ಅಂದಾಜಿನ ಪ್ರಕಾರ 350 ಕಲ್ಲಿನ ಕಂಬಗಳಿವೆ. ಅದರಲ್ಲಿ 170 ಕಂಬಗಳು ಕೆಳಮಹಡಿಯಲ್ಲಿವೆ. ಪ್ರತಿ ಕಂಬದಲ್ಲೂ 25ರಿಂದ 30 ಚಿತ್ರಗಳಿವೆ. ಈ ಕಂಬಗಳ ಚಿತ್ರಗಳಿಗೆ ಒಂದಕ್ಕೊಂದು ಸಂಬಂಧ ಇವೆ. ಇವು ನಾಗರ ಶೈಲಿ ಹಾಗೂ ಅಯೋಧ್ಯೆ ದೇಗುಲ ಶೈಲಿಯಲ್ಲಿವೆ. ದೇವಾಂಗಣದ ವಿವಿಧ ಭಾವಗಳನ್ನು ಈ ಚಿತ್ರಗಳ ಮೂಲಕ ತುಂಬಲಾಗಿದೆ. ಇದರ ಹಿಂದಿನ ಶಿಲ್ಪ ವಿಜ್ಞಾನವನ್ನು ಊಹಿಸಿಕೊಳ್ಳಿ. 25ರಿಂದ 30 ಚಿತ್ರಗಳಿರುವ 170 ಸ್ತಂಭಗಳು, ಈ ಹಂತ ಸಾಧಿಸುವಲ್ಲಿ ನಾವು ತೊಡಗಿಕೊಂಡಿದ್ದೇವೆ. 

Follow Us:
Download App:
  • android
  • ios