ಹಿಂದೂಗಳ ಶ್ರದ್ಧಾ ಹಾಗೂ ಭಕ್ತಿಯ ಕೇಂದ್ರ ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದರ ನಡುವೆ ಸಿಹಿಸುದ್ದಿಯೊಂದು ಬಂದಿದೆ. 2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆ ರಾಮ ಮಂದಿ ಉದ್ಘಾಟನೆ ಮಾಡಲಿದ್ದಾರೆ.
ನವದೆಹಲಿ(ಸೆ.09) ಹಿಂದೂಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಹಿಂದೂಗಳ ಶ್ರದ್ಧಾ ಭಕ್ತಿಯ ಕೇಂದ್ರ ಆಯೋಧ್ಯ ರಾಮ ಮಂದಿರ ಭಕ್ತರ ದರ್ಶನಕ್ಕೆ ಮುಕ್ತವಾಗುತ್ತಿದೆ. ಹೌದು 2024ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ಉದ್ಘಾಟನೆ ಮಾಡಲಿದ್ದಾರೆ. ಇನ್ನು ನಾಲ್ಕೇ ತಿಂಗಳಲ್ಲಿ ಆಯೋಧ್ಯೆಯ ಭವ್ಯ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ.
ವಿವಾದಿತ ಆಯೋಧ್ಯೆ ರಾಮ ಜನ್ಮಭೂಮಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಶ್ರೀ ರಾಮಜನ್ಮಭೂಮಿ ಟ್ರಸ್ಟ್ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭಿಸಿತ್ತು. ಪ್ರಧಾನಿ ಮೋದಿ ಶಿಲನ್ಯಾಸ ನೆರವೇರಿಸಿ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ನಿರ್ಮಾಣ ಜವಾಬ್ದಾರಿ ಹೊತ್ತಿರುವ ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಇತ್ತೀಚೆಗೆ ರಾಮ ಮಂದಿರ ಉದ್ಘಾಟನೆ ಕುರಿತು ಮಾಹಿತಿ ನೀಡಿದ್ದರು. ಜ.14ರ ಮಕರ ಸಂಕ್ರಾಂತಿ ದಿನದಂದು ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪಿಸಲಾಗುವುದು ಎಂದಿದ್ದರು. ಇದೇ ವೇಳೆ ಜನವರಿ ಕೊನೆಯ ವಾರದಲ್ಲಿ ಮಂದಿರ ಉದ್ಘಾಟನೆ ಮಾಡಲಾಗುವುದು ಎಂದಿದ್ದರು. ಇದೀಗ ಶ್ರೀ ರಾಮ ಮಂದಿರ ಉದ್ಘಾಟನೆ ದಿನಾಂಕ ಘೋಷಣೆಯಾಗಿದೆ. ಜನವರಿ 22 ರಂದು ಭವಿ ರಾಮ ಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ.
ಈಗಾಗಲೇ ಮೂರು ಅಂತಸ್ತಿನ ದೇವಾಲಯದ ನೆಲಮಹಡಿ ನಿರ್ಮಾಣ ಪೂರ್ಣಗೊಂಡಿದೆ. ರಾಮಲಲ್ಲಾ ವಿಗ್ರಹ ಸ್ಥಾಪನೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಾಗಿದೆ. ಈ ಸಮಾರಂಭಕ್ಕೆ ಸುಮಾರು 10,000 ಅತಿಥಿಗಳಿಗೆ ಮಂಡಳಿಯು ಆಮಂತ್ರಣ ನೀಡಿದೆ. ಈಗಾಗಲೇ ಐತಿಹಾಸಿಕ ಸಮಾರಂಭದ ಸಿದ್ಧತೆಗಾಗಿ ಮಂದಿರಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 22 ಕೋಟಿ ರು. ಮೌಲ್ಯದ ಗಿಡಗಳು ಮತ್ತು ಹೂಬಿಡುವ ಮತ್ತು ಅಲಂಕಾರಿಕ ಸಸ್ಯಗಳನ್ನು ನಡೆಲಾಗಿದೆ. ಈ ರಾಮ ಪಥ, ಧರ್ಮ ಪಥ ಮತ್ತು ಭಕ್ತಿ ಪಥಗಳ ಸೌಂದರ್ಯ ಹೆಚ್ಚಿಸುವ ಕಾರ್ಯವನ್ನು ಉತ್ತರ ಪ್ರದೇಶದ ರಾಜ್ಯ ಅರಣ್ಯ ಇಲಾಖೆ ವಹಿಸಿಕೊಂಡಿದೆ.