ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆ ಮೊದಲ ಹೊಸವರ್ಷ ಆಚರಣೆಗೆ ಸಜ್ಜಾಗುತ್ತಿದೆ. ಮಂದಿರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆಯಿದ್ದು, ದರ್ಶನದ ಅವಧಿ ವಿಸ್ತರಣೆಗೆ ದೇಗುಲ ನಿರ್ಧರಿಸಿದೆ. ಮತ್ತೊಂದೆಡೆ ಪ್ರವಾಸಿಗರಿಂದ ಸುತ್ತಲಿನ ಹೋಟೆಲ್‌ಗಳು ಬಹುತೇಕ ಭರ್ತಿಯಾಗಿವೆ. 

ಅಯೋಧ್ಯೆ (ಡಿ.29): ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆ ಮೊದಲ ಹೊಸವರ್ಷ ಆಚರಣೆಗೆ ಸಜ್ಜಾಗುತ್ತಿದೆ. ಮಂದಿರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆಯಿದ್ದು, ದರ್ಶನದ ಅವಧಿ ವಿಸ್ತರಣೆಗೆ ದೇಗುಲ ನಿರ್ಧರಿಸಿದೆ. ಮತ್ತೊಂದೆಡೆ ಪ್ರವಾಸಿಗರಿಂದ ಸುತ್ತಲಿನ ಹೋಟೆಲ್‌ಗಳು ಬಹುತೇಕ ಭರ್ತಿಯಾಗಿವೆ. 

ಜ.1ಕ್ಕೆ ರಾಮಮಂದಿರಕ್ಕೆ ಹೆಚ್ಚಿನ ಸಂಖ್ಯೆ ಭಕ್ತರು ಆಗಮಿಸಬಹುದು ಎನ್ನುವ ಕಾರಣಕ್ಕೆರಾಮ ಜನ್ಮಭೂಮಿ ಟ್ರಸ್ಟ್‌ ಭಕ್ತರ ಅನುಕೂಲಕ್ಕಾಗಿ ಮಂದಿರದ ದರ್ಶನ ಅವಧಿಯನ್ನು ವಿಸ್ತರಿಸಿದೆ. ಜೊತೆಗೆ ಅಯೋಧ್ಯೆ ಹಾಗೂ ಸಮೀಪದ ಫೈಜಾಬಾದ್‌ನ ಹೋಟೆಲ್‌ಗಳು ಪ್ರವಾಸಿಗರ ಕಾರಣದಿಂದ ಈಗಾಗಲೇ ಬಹುತೇಕ ಭರ್ತಿಯಾಗಿವೆ.ಅದರಲ್ಲಿಯೂ ಕೆಲ ಹೋಟೆಲ್‌ಗಳಲ್ಲಿ ಬೇಡಿಕೆಯ ಕಾರಣಕ್ಕೆ ಒಂದು ದಿನಕ್ಕೆ 10 ಸಾವಿರ ರು. ತನಕ ಗ್ರಾಹಕರಿಗೆ ದರ ನಿಗದಿ ಮಾಡಿವೆ.

ಆಮ್‌ ಆದ್ಮಿ ಪಕ್ಷ ಜಾರಿಗೊಳಿಸಲು ಉದ್ದೇಶಿಸಿರುವ ಗೃಹಲಕ್ಷ್ಮೀ ಸ್ಕೀಂ ಬಗ್ಗೆ ತನಿಖೆಗೆ ಗವರ್ನರ್‌ ಆದೇಶ

ತಾಜ್‌ ಮಹಲ್‌ ಹಿಂದಿಕ್ಕಿದ ಅಯೋಧ್ಯೆ: ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡ ಅಯೋಧ್ಯೆಯ ರಾಮಮಂದಿರ, ಪ್ರಸಕ್ತ ವರ್ಷ ಅತಿ ಹೆಚ್ಚು ಪ್ರವಾಸಿಗರ ಸೆಳೆದ ತಾಣಗಳ ಪೈಕಿ ವಿಶ್ವವಿಖ್ಯಾತ ತಾಜ್‌ಮಹಲ್‌ ಅನ್ನೂ ಮೀರಿಸಿದೆ. ಈ ವರ್ಷದ ಜನವರಿ- ಸೆಪ್ಟೆಂಬರ್‌ ಅವಧಿಯಲ್ಲಿ ಆಗ್ರಾದ ತಾಜ್‌ಮಹಲ್‌ಗೆ 12.5 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರೆ, ಇದೇ ಅವಧಿಯಲ್ಲಿ ರಾಮಮಂದಿರ ಇರುವ ಅಯೋಧ್ಯೆಗೆ 13.5 ಕೋಟಿ ಜನರು ಭೇಟಿ ನೀಡಿದ್ದಾರೆ.

ಅಯೋಧ್ಯೆಯ ಆಕರ್ಷಣೆ ಏನು?: ಅಯೋಧ್ಯೆಗೆ ಬರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಲು ರಾಮ ಮಂದಿರ ಉದ್ಘಾಟನೆಯನ್ನು ಪ್ರಮುಖ ಕಾರಣ ಎಂದು ಪರಿಗಣಿಸಲಾಗಿದೆ. ಜತೆಗೆ, ವಾರಾಣಸಿ, ಮಥುರಾ, ಪ್ರಯಾಗರಾಜ್‌, ಮಿರ್ಜಾಪುರಗಳಿಗೂ ಭಕ್ತರು ಭೇಟಿ ನೀಡುತ್ತಿದ್ದು, ಉತ್ತರಪ್ರದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಸರಿಸುಮಾರು ಶೇ.70ರಷ್ಟು ಹೆಚ್ಚಿದೆ.

ಮನಮೋಹನ್ ಸಿಂಗ್ ಹೆಸರಲ್ಲಿ ಬೆಂ.ವಿವಿಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ: ಡಿ‌.ಕೆ.ಶಿವಕುಮಾರ್

ತಾಜ್‌ಗೆ ವಿದೇಶಿಗರೇ ಹೆಚ್ಚು: ಆಗ್ರಾಗೆ ಬರುವ ಭಾರತೀಯರ ಸಂಖ್ಯೆಯಲ್ಲಿ ಇಳಿಕೆಯಾದರೂ ವಿದೇಶಿಗರ ಪಾಲಿಗೆ ತಾಜ್‌ಮಹಲ್‌ ವಿಶೇಷ ತಾಣವಾಗಿಯೇ ಉಳಿದಿದ್ದು, 2023-24 ಅವಧಿಯಲ್ಲಿ 2.7 ಕೋಟಿ ಜನ ಭೇಟಿ ನೀಡಿದ್ದಾರೆ.