ಆಮ್ ಆದ್ಮಿ ಪಕ್ಷ ಜಾರಿಗೊಳಿಸಲು ಉದ್ದೇಶಿಸಿರುವ ಗೃಹಲಕ್ಷ್ಮೀ ಸ್ಕೀಂ ಬಗ್ಗೆ ತನಿಖೆಗೆ ಗವರ್ನರ್ ಆದೇಶ
ಕರ್ನಾಟಕದ ಗೃಹಲಕ್ಷ್ಮಿ ಮಾದರಿಯಲ್ಲೇ ದೆಹಲಿಯ ಆಮ್ ಆದ್ಮಿ ಪಕ್ಷ(ಆಪ್) ಜಾರಿಗೊಳಿಸಲುದ್ದೇಶಿಸಿರುವ ಮಹಿಳಾ ಸಮ್ಮಾನ್ ಯೋಜನೆ ಕುರಿತು ತನಿಖೆಗೆ ದೆಹಲಿಯ ಗವರ್ನರ್ ಆದೇಶಿಸಿದ್ದಾರೆ.
ನವದೆಹಲಿ (ಡಿ.29): ಕರ್ನಾಟಕದ ಗೃಹಲಕ್ಷ್ಮಿ ಮಾದರಿಯಲ್ಲೇ ದೆಹಲಿಯ ಆಮ್ ಆದ್ಮಿ ಪಕ್ಷ(ಆಪ್) ಜಾರಿಗೊಳಿಸಲುದ್ದೇಶಿಸಿರುವ ಮಹಿಳಾ ಸಮ್ಮಾನ್ ಯೋಜನೆ ಕುರಿತು ತನಿಖೆಗೆ ದೆಹಲಿಯ ಗವರ್ನರ್ ಆದೇಶಿಸಿದ್ದಾರೆ. ದೆಹಲಿ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ದೂರಿನ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಈ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಸರ್ಕಾರಿ ಯೋಜನೆ ಫಲಾನುಭವಿಗಳ ನೋಂದಣಿ ಹೆಸರಲ್ಲಿ ಖಾಸಗಿ ವ್ಯಕ್ತಿಗಳು ನಾಗರಿಕರ ಖಾಸಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು ಮತ್ತು ಸಾರ್ವಜನಿಕರ ಖಾಸಗಿತನದ ಉಲ್ಲಂಘನೆಯಾಗುತ್ತಿದ್ದರೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕೇಜ್ರಿ ಖಂಡನೆ: ತನಿಖೆಯ ಕ್ರಮವನ್ನು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ತೀವ್ರವಾಗಿ ಖಂಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಮತ್ತು ಕಾಂಗ್ರೆಸ್ ಯೋಜನೆ ಮತ್ತು ಜನರ ದಾರಿತಪ್ಪಿಸಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಮಾತ್ರ ಲೆಫ್ಟಿನೆಂಟ್ ಗವರ್ನರ್ ನಡೆಯನ್ನು ಸ್ವಾಗತಿಸಿದೆ.
ಏನಿದು ಗೃಹಲಕ್ಷ್ಮೀ ಯೋಜನೆ?: ಮಹಿಳಾ ಸಮ್ಮಾನ ಯೋಜನೆಯಡಿ 18 ವರ್ಷ ಮೇಲ್ಪಟ್ಟ ಯುವತಿಯರು, ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರು. ನೀಡುವುದಾಗಿ ಆಮ್ ಆದ್ಮಿ ಸರ್ಕಾರ ಘೋಷಿಸಿದೆ. ಒಂದು ವೇಳೆ ಆಪ್ ಸರ್ಕಾರ ಫೆಬ್ರವರಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಈ ಮೊತ್ತವನ್ನು 2,100ಕ್ಕೆ ಏರಿಸುವುದಾಗಿ ತಿಳಿಸಿದೆ.
ಚಿಕ್ಕಮಗಳೂರು ಇತಿಹಾಸದಲ್ಲೇ ಮೊದಲ ಬಾರಿಗೆ ಗೌಡ್ತಿಯರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ
ಸಿಸೋಡಿಯಾ ಕ್ಷೇತ್ರ ಬದಲು: ಮುಂಬರುವ ಫೆಬ್ರವರಿಯಲ್ಲಿ ನಡೆಯುವ ದೆಹಲಿ ವಿಧಾನಸಭಾ ಚುನಾವಣೆಗೆ 20 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿರುವ ಆಮ್ ಆದ್ಮಿ ಪಾರ್ಟಿ (ಎಎಪಿ) ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರಿ ಕ್ಷೇತ್ರವನ್ನು ಬದಲಿಸಿದೆ. ಈ ಮುಂಚಿನ ಪತ್ಪರ್‌ಗಂಜ್ ಬದಲು ಜಂಗ್‌ಪುರದಿಂದ ಟಿಕೆಟ್ ನೀಡಿದೆ. ಹಾಗೆಯೇ ಇತ್ತೀಚೆಗೆ ಎಎಪಿ ಸೇರಿರುವ ಐಎಎಸ್ ಕೋಚಿಂಗ್ ತಜ್ಞ ಅವಧ್ ಓಝಾ ಅವರಿಗ, ಸಿಸೋಡಿಯಾ ಅವರಿದ್ದ ಪತ್ಪರ್‌ಗಂಜ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಇದು ಸಿಸೋಡಿಯಾ ಈಗಾಗಲೇ ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿದೆ. ಇನ್ನು ಶಹದಾರದಿಂದ ಜಿತೇಂದರ್ ಸಿಂಗ್ ಶುಂಠಿ ತಿಮಾರಪುರದಿಂದ ಬಿಜೆಪಿ ತ್ಯಜಿಸಿ ಎಎಪಿ ಸೇರಿರುವ ಸುರಿಂಧರ್ ಪಾಲ್ ಸಿಂಗ್ ಬಿಟ್ಟು ಅವರಿಗೆ ಟಿಕೆಟ್ ನೀಡಲಾಗಿದೆ. ರಾಮ್ ನಿವಾಸ್ ಗೋಯಲ್ ಅವರ ಬದಲಿಗೆ ಶುಂಠಿ ಅವರಿಗೆ ಹಾಗೂ ದಿಲೀಪ್ ಪಾಂಡೆ ಅವರ ಬದಲಿಗೆ ಸುರಿಂಧರ್ ಅವರಿಗೆ ಟಿಕೆಟ್ ನೀಡಲಾಗಿದೆ.