ಆಯೋಧ್ಯೆ ದೀಪಾವಳಿಯ ಅದ್ಭುತ ಚಿತ್ರ ಹಂಚಿಕೊಂಡ ಪ್ರಧಾನಿ ಮೋದಿ, ಮರುಕಳಿಸಿದ ಗತವೈಭವ!
ಪ್ರಧಾನಿ ನರೇಂದ್ರ ಮೋದಿ, ಆಯೋಧ್ಯೆಯ ದೀಪೋತ್ಸವದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಶ್ರೀ ರಾಮನ ಕಾಲದ ಗತವೈಭವ ಮರುಕಳಿಸುವಂತಿರುವ ಈ ಚಿತ್ರಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆಯೋಧ್ಯೆ ದೀಪೋತ್ಸವದ ಈ ಸುಂದರ ಚಿತ್ರಗಳು ಇಲ್ಲಿವೆ.
ದೀಪಾವಳಿ ಹಬ್ಬವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಅಧರಲ್ಲೂ ಆಯೋಧ್ಯೆಯಲ್ಲಿ ದೀಪಾವಳಿ ಭಾರಿ ವಿಶೇಷ. ಆಯೋಧ್ಯೆ ದೀಪೋತ್ಸವಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಚಾಲನೆ ನೀಡಿದ್ದರು. ಬರೋಬ್ಬರಿ 24 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ದಾಖಲೆ ಬರೆಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಈ ದಿಪೋತ್ಸವದ ಚಿತ್ರಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಹತ್ವದ ಸಂದೇಶವನ್ನು ಸಾರಿ ಜೈಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ.
ಆಯೋಧ್ಯೆ ದೀಪೋತ್ಸವದಿಂದ ಹೊರಹೊಮ್ಮುವ ಶಕ್ತಿ ಭಾರದಲ್ಲಿ ಹೊಸ ಉತ್ಸಾಹ, ಶಕ್ತಿ ಹರಡಲಿ. ಭಗವಾನ್ ಶ್ರೀರಾಮ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ. ಜೈ ಶ್ರೀರಾಮ್ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಆಯೋಧ್ಯೆಯ ಸರಯು ನದಿ ತಟದಲ್ಲಿ ಬರೋಬ್ಬರಿ 24 ಲಕ್ಷ ದೀಪಗಳನ್ನು ಬೆಳಗಿಸಲಾಗಿದೆ. ಈ ಮೂಲಕ ಗಿನ್ನಿಸೆ ದಾಖಲೆ ಬರೆಯಲಾಗಿದೆ. ಸುಮಾರು 25,000ಕ್ಕೂ ಹೆಚ್ಚು ಸ್ವಯಂ ಸೇವಕರು ದೀಪ ಬೆಳಗಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಶನಿವಾರ(ನ.10) ಆಯೋಧ್ಯೆಗೆ ಭೇಟಿ ನೀಡಿದ ಸಿಎಂ ಯೋಗಿ ಆದಿತ್ಯನಾಥ್ ದೀಪೋತ್ಸವಕ್ಕೆ ಚಾಲನೆ ನೀಡಿದ್ದರು. ಖುದ್ದು ಆರತಿ ಬೆಳಗಿಸುವ ಮೂಲಕ ದೀಪೋತ್ಸವ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ ನೀಡಿದ್ದರು.
2017ರಲ್ಲಿ ಯೋಗಿ ಆದಿತ್ಯನಾಥ್ ನೇೃತ್ವದ ಉತ್ತರ ಪ್ರದೇಶ ಸರ್ಕಾರ 51,000 ದೀಪಗಳನ್ನು ಬೆಳಗುವ ಮೂಲಕ ದೀಪೋತ್ಸವ ಆಚರಿಸಿತ್ತು. ಬಳಿಕ ಪ್ರತಿ ವರ್ಷ ಈ ಸಂಖ್ಯೆ ಹೆಚ್ಚಾಯಿತು.
2019ರಲ್ಲಿ 4.10 ಲಕ್ಷ, 2020ರಲ್ಲಿ 6 ಲಕ್ಷ, 2021ರಲ್ಲಿ 9 ಲಕ್ಷ ದೀಪಗಳನ್ನು ಬೆಳಗಿಸಲಾಗಿತ್ತು. ಕಳೆದ ವರ್ಷ ಅಂದರೆ 2022ರಲ್ಲಿ 17 ಲಕ್ಷ ದೀಪಗಳನ್ನು ಬೆಳಗಿ ದೀಪೋತ್ಸವ ಆಚರಿಸಲಾಗಿತ್ತು.
ಇನ್ನೆರಡು ತಿಂಗಳಲ್ಲಿ ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ.ನಿರ್ಮಾಣ ಹಂತದಲ್ಲಿರುವ ಆಯೋಧ್ಯೆಯಲ್ಲಿ ಈಗಾಗಲೇ ದೀಪಾವಳಿ ಹಬ್ಬದ ಆಚರಣೆ ಜೋರಾಗಿದೆ.