ಸೈಫ್ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ, ಸೈಫ್ ಜೊತೆ ಇಬ್ರಾಹಿಂ ಅಲ್ಲ ಎಂದು ಹೇಳಿದ್ದಾರೆ. ಸೈಫ್ ಮೇಲಿನ ದಾಳಿಗೆ ಕಳ್ಳತನವೇ ಕಾರಣ ಎಂದು ಮಹಾರಾಷ್ಟ್ರ ಗೃಹ ಸಚಿವರು ತಿಳಿಸಿದ್ದಾರೆ.
ಮುಂಬೈ: ಆಗಂತುಕನ ದಾಳಿಗೆ ತುತ್ತಾಗಿ ತೀವ್ರವಾಗಿ ಗಾಯಗೊಂಡಿದ್ದ ಸೈಫ್ ಅಲಿಖಾನ್ ಅವರನ್ನು ಆಟೋದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದಿದ್ದು ಅವರ ಹಿರಿಯ ಮಗ ಇಬ್ರಾಹಿಂ ಅಲ್ಲ, ಕಿರಿ ಮಗ ತೈಮುರ್ ಎಂದು ಆಟೋ ಚಾಲಕ ಭಜನ್ ಸಿಂಗ್ ರಾಣಾ ಹೇಳಿದ್ದಾರೆ.
‘ಮಹಿಳೆಯೊಬ್ಬರು ಓಡಿ ಬಂದು ಆಟೋ ಆಟೋ ಎಂದು ಕೂಗಿದರು. ಆಗ ಸಣ್ಣ ಬಾಲಕನೊಬ್ಬ ಆಟೋದಲ್ಲಿ, ರಕ್ತಸಿಕ್ತನಾಗಿದ್ದ ವ್ಯಕ್ತಿ ಜತೆ ಆಟೋ ಏರಿದ. ಲೀಲಾವತಿ ಆಸ್ಪತ್ರೆಗೆ ಹೋಗಿ ಎಂದು ರಕ್ತಸಿಕ್ತನಾಗಿದ್ದ ವ್ಯಕ್ತಿ ಹೇಳಿದ. ಆಸ್ಪತ್ರೆ ಬಂದಾಗ ‘ಸ್ಟ್ರೆಚರ್ ತೆಗೆದುಕೊಂಡು ಬನ್ನಿ. ನಾನು ಸೈಫ್ ಅಲಿ ಖಾನ್’ ಎಂದು ರಕ್ತಸಿಕ್ತ ವ್ಯಕ್ತಿ ಹೇಳಿದ. ಆಗಲೇ ನನಗೆ ಅವರು ಸೈಫ್ ಎಂದು ಗೊತ್ತಾಯಿತು’ ಎಂದು ಭಜನ್ ತಿಳಿಸಿದ್ದಾರೆ. ತಕ್ಷಣವೇ ಕಾರು ಚಾಲಕ ಮಧ್ಯರಾತ್ರಿ ಸಿದ್ಧ ಇರದ ಕಾರಣ ಆಟೋದಲ್ಲಿ ಸೈಫ್ ಆಸ್ಪತ್ರೆಗೆ ತೆರಳಿದ್ದರು.
ಸೈಫ್ ಮೇಲೆ ಹಲ್ಲೆಗೆ ಕಳ್ಳತನ ಉದ್ದೇಶವೇ ಕಾರಣ: ಮಹಾರಾಷ್ಟ್ರ ಗೃಹ ಸಚಿವ
‘ನಟ ಸೈಫ್ ಅಲಿಖಾನ್ ಅವರ ಮನೆ ಮೇಲೆ ದಾಳಿ ನಡೆಸುವುದಕ್ಕೆ ಆರೋಪಿಗೆ ಕಳ್ಳತನವೊಂದೇ ಉದ್ದೇಶವಾಗಿತ್ತು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣ ಇಲ್ಲ’ ಎಂದು ಮಹಾರಾಷ್ಟ್ರದ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಂ ಹೇಳಿದ್ದಾರೆ.
ಇದನ್ನೂ ಓದಿ: ಸೈಫ್ ಅಲಿ ಖಾನ್, ಸಲ್ಮಾನ್, ಶಾರುಖ್ ತಮ್ಮ ಸೆಕ್ಯೂರಿಟಿಗೆ ವರ್ಷಕ್ಕೆ ಎಷ್ಟು ಹಣ ಖರ್ಚು ಮಾಡ್ತಾರೆ ಗೊತ್ತಾ?
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಕದಂ, ‘ಸೈಫ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ ಕ್ರಿಮಿನಲ್ ಕಳ್ಳತನವೊಂದೇ ಉದ್ದೇಶವಾಗಿತ್ತು. ಬೇರೆ ಯಾವುದೇ ಆಯಾಮಗಳಿಲ್ಲ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ’ ಎಂದಿದ್ದಾರೆ. ಅಲ್ಲದೆ, ಸೈಫ್ ತಮಗೆ ಬೆದರಿಗೆ ಇದೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಕ್ತಸಿಕ್ತವಾಗಿ ಗಾಯಗೊಂಡಿದ್ದರೂ ಸೈಫ್ ಹುಲಿಯಂತೆ ಆಸ್ಪತ್ರೆಗೆ ಬಂದ್ರು: ವೈದ್ಯ
