ಉತ್ತರ ಪ್ರದೇಶ(ಜೂ.04): ಭಾರತದ ಪ್ರಖ್ಯಾತ ಸೈಕಲ್ ಕಂಪನಿ ಅಟ್ಲಾಸ್ ದುರಂತ ಅಂತ್ಯಕಂಡಿದೆ. ಜೂನ್ 3 ವಿಶ್ವ ಬೈಸಿಕಲ್ ದಿನ. ಇದೇ ದಿನ ಉತ್ತರ ಪ್ರದೇಶದ ಘಾಝಿಯಾಬಾದ್‌ನಲ್ಲಿದ್ದ ಅತೀ ದೊಡ್ಡ ಫ್ಯಾಕ್ಟರಿ ಮುಚ್ಚಲಾಗಿದೆ. ಇದರೊಂದಿಗೆ 1000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಭಾರಿ ನಷ್ಟದ ಕಾರಣ ಕಂಪನಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಸೈಕಲ್‌ ಅಂದರೆ ಎಷ್ಟೊಂದು ಸವಿಸವಿ ನೆನಪು!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಅಟ್ಲಾಸ್ ಫ್ಯಾಕ್ಟರಿ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಕಳೆದೆರಡು ತಿಂಗಳಿಂದ ಕಂಪನಿ ಮುಚ್ಚಿತ್ತು. ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಜೂನ್ 1 ರಿಂದ ಅಟ್ಲಾಸ್ ಸೈಕಲ್ ಕಂಪನಿ ಪುನರ್ ಆರಂಭಗೊಂಡಿತು. ಉದ್ಯೋಗಿಗಳು ಖುಷಿ ಖುಷಿಯಿಂದ ಕೆಲಸಕ್ಕೆ ತೆರಳಿದ್ದರು. 2 ದಿನ ಕೆಲಸ ಮಾಡಿದ್ದ ನೌಕರರು, ಜೂನ್ 3 ರಂದು ಕೆಲಸಕ್ಕೆ ಬೆಳಗ್ಗೆ ತೆರಳಿದಾಗ ಕಂಪನಿಯ ಮುಖ್ಯ ದಾರ ಬೀಗ ಹಾಕಿ ಮುಚ್ಚಲಾಗಿತ್ತು.

ಮಂಗಳೂರಿಗೆ ಬಂತು 12 ಲಕ್ಷ ರು.ಗಳ ದುಬಾರಿ ಸೈಕಲ್‌!

ಗೇಟ್‌ನಲ್ಲಿ ಕಂಪನಿ ನೊಟೀಸ್ ಹಾಕಲಾಗಿತ್ತು. ಆರ್ಥಿಕ ನಷ್ಟ ಸರಿದೂಗಿಸಲು ಸಾಧ್ಯವಾಗದ ಕಾರಣ ಕಂಪನಿ ಮುಚ್ಚಲಾಗಿದೆ ಎಂದು ಹೇಳಲಾಗಿತ್ತು. ಕಂಪನಿ ಆಡಳಿತ ಮಂಡಳಿ ಯಾವುದೇ ಸೂಚನೆ ನೀಡಿದ ಫ್ಯಾಕ್ಟರಿ ಸ್ಥಗಿತಗೊಂಡಿತು. ಉದ್ಯೋಗ ಕಳೆದುಕೊಂಡ ನೌಕರರು ಕೋರ್ಟ್ ಮೆಟ್ಟಿಲೇರಿದ್ದಾರೆ. ಯಾವುದೇ ಸೂಚನೆ ನೀಡಿದ ಕಂಪನಿ ಮುಚ್ಚಲಾಗಿದೆ ಎಂದಿದ್ದಾರೆ. ಈ ಕುರಿತು ಕೋರ್ಟ್ ಶುಕ್ರವಾರಕ್ಕೆ(ಜೂ.05) ವಿಚಾರಣೆ ಮುಂದೂಡಿದೆ.

ಕೊರೋನಾ ವಾರಿಯರ್ಸ್ ಹಾಗೂ ಲಾಕ್‌ಡೌನ್ ಕಾರಣ ಎಲ್ಲೂ ಉದ್ಯೋಗವಿಲ್ಲ. ಕುಟುಂಬ, ಮಕ್ಕಳು, ಅವರ ವಿದ್ಯಭ್ಯಾಸ, ಜೀವನ ನಡೆಸುವುದು ಹೇಗೆ? ಎಂದು ನೌಕರರು ಪ್ರಶ್ನಿಸಿದ್ದಾರೆ. ಹಲವು ಉದ್ಯೋಗಿಗಳು 1989ರಿಂದ ಅಟ್ಲಾಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳ 2 ಲಕ್ಷ ಸೈಕಲ್ ಉತ್ಪಾದಿಸುತ್ತಿದ್ದರು. ಆದರೆ ಇಷ್ಟು ವರ್ಷ ಕೆಲಸ ಮಾಡಿ ಇದೀಗ ಏಕಾಏಕಿ ಕಂಪನಿ ಮುಚ್ಚಿ ಉದ್ಯೋಗ ಕಳೆದುಕೊಂಡಿರುವುದು ನೌಕರರಿಗೆ ತೀವ್ರ ನೋವು ತರಿಸಿದೆ.