ಮಂಗಳೂರು(ಜೂ.04): ಮೈಸೂರಿನ ಟ್ರಯತ್ಲಾನ್‌ ಪಟುವೊಬ್ಬರಿಗಾಗಿ ಮಂಗಳೂರಿನ ಸೈಕಲ್‌ ಮಳಿಗೆಯೊಂದು ತರಿಸಿರುವ ಸೈಕಲ್‌ ನೋಡಿದವರು ಬೆರಗಾಗಲೇಬೇಕು. ಈ ಸೈಕಲ್‌ನ ಬೆಲೆ ಬರೋಬ್ಬರಿ 12 ಲಕ್ಷ ರು.!

ಕೆನಡಾ ಮೂಲದ ರೇಸಿಂಗ್‌ ಸೈಕಲ್‌ಗಳ ಸರ್‌ವೆಲ್ಲೊ ಕಂಪನಿಯವರ ಪಿಎಕ್ಸ್‌ ಸೀರೀಸ್‌ನ ಡ್ಯೂರೇಸ್‌ ಡೈ2 2020 ಮಾದರಿ ಸದ್ಯ ನಗರದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಸೈಕ್ಲಿಂಗ್‌-ಈಜು-ಓಟ ಈ ಮೂರರ ಟ್ರಯತ್ಲಾನ್‌ ಕ್ರೀಡೆಗಳಲ್ಲಿ ಅತಿ ವೇಗದ ಸೈಕ್ಲಿಂಗ್‌ಗೆ ಇಂತಹ ಸೈಕಲ್‌ ಬಳಸಲಾಗುತ್ತದೆ.

ಇನ್ಮುಂದೆ ಸೋಂಕಿತರ ಮನೆ ಮಾತ್ರ ಸೀಲ್‌ಡೌನ್!

ಅತಿ ಹಗುರವಾದ ಮೋನೊಕಾಕ್‌ ಕಾರ್ಬನ್‌ನಿಂದ ನಿರ್ಮಾಣಗೊಂಡಿರುವ ಈ ಸೈಕಲ್‌, ಏರೋ ಬೇಸ್‌ ಬಾರ್‌, ಉತ್ಕೃಷ್ಟದರ್ಜೆಯ ಶಿಮಾನೊ ಡ್ಯೂರೇಸ್‌ ಡೈ2 ಡಿರೈಲ್ಯೂರ್‌ಗಳನ್ನು ಹೊಂದಿದೆ. ಮಂಗಳೂರಿನ ತಾಜ್‌ ಸೈಕಲ್‌ನಲ್ಲಿ ಇದನ್ನು ಪ್ರದರ್ಶಿಸಿದ್ದು, ಮೈಸೂರು ಮೂಲದ ಟ್ರಯತ್ಲಟ್‌ವೊಬ್ಬರಿಗೆ ಶೀಘ್ರ ಮಾರಾಟ ಮಾಡಲಾಗುತ್ತದೆ.