ಬಾಲಕಿ ಮೇಲಿನ ಬಲತ್ಕಾರ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ 'ಪುರುಷತ್ವ ಕಳೆದುಕೊಳ್ಳುವವರೆಗೆ ಜೈಲು' ಶಿಕ್ಷೆಯು ಹೊಸ ಚರ್ಚೆ ಹುಟ್ಟುಹಾಕಿದೆ.  ನ್ಯಾಯಾಲಯದ ಆದೇಶದ ಹಿನ್ನೆಲೆ ತಿಳಿಯಿರಿ.

ಇತ್ತೀಚೆಗೆ ಒಂದು ಸುದ್ದಿ ದೇಶಾದ್ಯಂತ ದೊಡ್ಡ ಸುದ್ದಿಯಾಯ್ತು. ಏಳು ವರ್ಷದ ಬಾಲಕಿ ಮೇಲಿನ ಬಲತ್ಕಾರ, ಕೊಲೆ ಪ್ರಕರಣ ಸಂಬಂಧ ಪಂಜಾಬ್& ಹರಿಯಾಣ ಹೈಕೋರ್ಟ್ ಒಂದು ಮಹತ್ವದ ತೀರ್ಪು ನೀಡಿತು. ಅದೀಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ಕೆಳ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಮಾರ್ಪಡಿಸಿದ ಹೈಕೋರ್ಟ್, ಅಪರಾಧಿಯನ್ನ ಪುರುಷತ್ವ ಕಳೆದುಕೊಳ್ಳುವವರೆಗೆ ಜೈಲಿನಲ್ಲಿಡುವಂತೆ ಆದೇಶಿಸಿತು. ನ್ಯಾಯಾಲಯದ ಈ ನಿರ್ಧಾರದಿಂದ ಮಹತ್ವದ ಪ್ರಶ್ನೆಯೊಂದನ್ನ ಹುಟ್ಟುಹಾಕಿದೆ. ಪುರುಷನ ಪುರುಷತ್ವ ಯಾವ ವಯಸ್ಸಿನಲ್ಲಿ ಕಡಿಮೆಯಾಗುತ್ತದೆ ಅರ್ಥ ಕಣ್ಮರೆಯಾಗುತ್ತೆ? ಎಂಬುದು. ಈ ಪ್ರಶ್ನೆ ಕುರಿತು ಇಲ್ಲಿ ವಿವರವಾಗಿ ತಿಳಿಯೋಣ.

ನಿರ್ದಿಷ್ಟ ವಯಸ್ಸು ಇಲ್ಲ

ಪುರುಷರ ಪುರುಷತ್ವ ಅಥವಾ ಲೈಂಗಿಕ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯ ಸಂಪೂರ್ಣವಾಗಿ ಇದೇ ವಯಸ್ಸಿಗೆ ನಿಲ್ಲುತ್ತೆ ಅಥವಾ ನಾಶವಾಗುತ್ತೆ ಎಂದು ಹೇಳಲಾಗುವುದಿಲ್ಲ ಎಂದು ವೈದ್ಯಕೀಯ ವಿಜ್ಞಾನವು ಸೂಚಿಸುತ್ತದೆ. ಋತುಬಂಧ ಅನುಭವಿಸುವ ಮಹಿಳೆಯರಿಗಿಂತ ಭಿನ್ನವಾಗಿ, ಪುರುಷರು ಲೈಂಗಿಕ ಕ್ರಿಯೆಯ ಹಠಾತ್ ಅಥವಾ ಶಾಶ್ವತ ನಷ್ಟವನ್ನು ಅನುಭವಿಸುವುದಿಲ್ಲ. ಬದಲಾಗಿ ಹಾರ್ಮೋನುಗಳ ಏರುಪೇರಾಗಬಹುದು. ಲೈಂಗಿಕ ಸಾಮರ್ಥ್ಯ ವಯಸ್ಸಾದಂತೆ ಕಡಿಮೆಯಾಗುತ್ತದೆ.

ಯಾವ ವಯಸ್ಸಿಗೆ ಕಡಿಮೆಯಾಗುತ್ತೆ?

ಒಬ್ಬ ಪುರುಷನ ಲೈಂಗಿಕ ಹಾರ್ಮೋನ್ ಆಗಿರುವ ಟೆಸ್ಟೋಸ್ಟೆರಾನ್ 30 ವರ್ಷಗಳ ನಂತರ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ವಯಸ್ಸಿನ ನಂತರ ಟೆಸ್ಟೋಸ್ಟೆರಾನ್ ಮಟ್ಟಗಳು ಸಾಮಾನ್ಯವಾಗಿ ವರ್ಷಕ್ಕೆ ಸುಮಾರು 1% ರಷ್ಟು ಕಡಿಮೆಯಾಗುತ್ತವೆ ಎಂದು ವೈದ್ಯಕೀಯ ಅಧ್ಯಯನಗಳು ಹೇಳುತ್ತವೆ. ಆದರೆ ಆರಂಭದಲ್ಲಿ ಈ ಹಾರ್ಮೋನ್ ಕಡಿಮೆಯಾದ ಯಾವ ಲಕ್ಷಣಗಳು ಅನುಭವಿಸದಿದ್ದರೂ ಕ್ರಮೇಣ ಟೆಸ್ಟೋಸ್ಟೆರಾನ್ ಮಟ್ಟ ಕುಸಿಯುತ್ತದೆ. ಇದರೊಂದಿಗೆ ವಯಸ್ಸಾದಂತೆ ವ್ಯಕ್ತಿಯ ಸಾಮರ್ಥ್ಯ, ದೈಹಿಕ ಶಕ್ತಿ, ಸ್ನಾಯು, ಕಾಮಾಸಕ್ತಿ, ಕಾಯಿಲೆ ಇವೆಲ್ಲವುಗಳ ಒಟ್ಟು ಪರಿಣಾಮ ಲೈಂಗಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಆಂಡ್ರೋಪಾಸ್ ಎಂದರೇನು?

ಕೆಲವು ಪುರುಷರು 40 ರಿಂದ 50 ವರ್ಷ ವಯಸ್ಸಿನ ನಡುವೆ ಟೆಸ್ಟೋಸ್ಟೆರಾನ್ ಮಟ್ಟಗಳು ಕಡಿಮೆಯಾಗುವುದಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಇದನ್ನು ಆಂಡ್ರೋಪಾಸ್ ಎಂದು ಕರೆಯಲಾಗುತ್ತದೆ. ಆದರೆ ಇದು ಮಹಿಳೆಯರ ಋತುಬಂಧದಂತೆ ಹಠಾತ್ ಆಗಿ ನಿಲ್ಲುವುದಿಲ್ಲ.

ಪುರುಷರಿಗೆ ಎಷ್ಟು ವರ್ಷಗಳ ಕಾಲ ಲೈಂಗಿಕಾಸಕ್ತಿ ಇರುತ್ತೆ?

ಚಿಕಾಗೋ ವಿಶ್ವವಿದ್ಯಾನಿಲಯವು ನಡೆಸಿದ ಸಂಶೋಧನೆಯ ಪ್ರಕಾರ, ಅನೇಕ ಪುರುಷರು 75 ರಿಂದ 85 ವರ್ಷ ವಯಸ್ಸಿನವರೆಗೂ ಲೈಂಗಿಕವಾಗಿ ಸಕ್ರಿಯರಾಗಿರುತ್ತಾರೆ. ತಜ್ಞರು ಹೇಳುವಂತೆ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ಪುರುಷರು ವೃದ್ಧಾಪ್ಯದವರೆಗೂ ಸಕ್ರಿಯ ಲೈಂಗಿಕ ಜೀವನವನ್ನು ಮುಂದುವರಿಸಬಹುದು.

ಹಾಗಾದರೆ ನ್ಯಾಯಾಲಯದ ಆದೇಶದ ಅರ್ಥವೇನು?

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪು ಏನೆಂದರೆ, ಪುರುಷನ ಪುರುಷತ್ವವನ್ನು ಉಲ್ಲೇಖಿಸುವಾಗ ವೈದ್ಯಕೀಯವಾಗಿ ವ್ಯಾಖ್ಯಾನಿಸಲಾದ ವಯಸ್ಸನ್ನು ಉಲ್ಲೇಖಿಸುವುದಿಲ್ಲ ಬದಲಾಗಿ ಕಾನೂನು ಪದವನ್ನು ಉಲ್ಲೇಖಿಸುತ್ತದೆ. ನ್ಯಾಯಾಲಯದ ನಿರ್ದೇಶನವು ಅಪರಾಧಿಯು ದೈಹಿಕವಾಗಿ ವಯಸ್ಸಾಗುವ ಮತ್ತು ಲೈಂಗಿಕ ಬೆದರಿಕೆಯನ್ನು ಉಂಟುಮಾಡದಷ್ಟು ದುರ್ಬಲವಾಗುವ ವಯಸ್ಸನ್ನು ತಲುಪುವವರೆಗೆ ಜೈಲಿನಲ್ಲಿಡಬೇಕೆಂದು ಸೂಚಿಸುತ್ತದೆ. ಈ ನಿರ್ಧಾರವು ವಿನಾಯಿತಿ ಇಲ್ಲದೆ ಕನಿಷ್ಠ 50 ವರ್ಷಗಳ ಜೈಲು ಶಿಕ್ಷೆಯ ಕಾನೂನು ಅವಶ್ಯಕತೆಗೆ ಅನುಗುಣವಾಗಿದೆ.

ಮೂಲ: ಎಬಿಪಿ ನ್ಯೂಸ್