Assembly election results 2024: ಅರುಣಾಚಲ, ಸಿಕ್ಕಿಂ ಮತ ಎಣಿಕೆ ಇಂದು
ಅರುಣಾಚಲ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಭಾನುವಾರ ನಡೆಯಲಿದೆ. ಈ ಎರಡೂ ರಾಜ್ಯಗಳ ವಿಧಾನಸಭೆ ಅವಧಿ ಜೂ.2ಕ್ಕೆ ಕೊನೆಯಾಗಲಿದೆ. ಒಂದು ವೇಳೆ ಜೂ.4ರವರೆಗೆ ಕಾದರೆ, ಎರಡೂ ರಾಜ್ಯಗಳಲ್ಲಿ 2 ದಿನಗಳ ಕಾಲ ಯಾವುದೇ ಸರ್ಕಾರ ಇಲ್ಲದಂತೆ ಆಗಲಿದೆ.
ನವದೆಹಲಿ: ಅರುಣಾಚಲ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಭಾನುವಾರ ನಡೆಯಲಿದೆ. ಈ ಎರಡೂ ರಾಜ್ಯಗಳ ವಿಧಾನಸಭೆ ಅವಧಿ ಜೂ.2ಕ್ಕೆ ಕೊನೆಯಾಗಲಿದೆ. ಒಂದು ವೇಳೆ ಜೂ.4ರವರೆಗೆ ಕಾದರೆ, ಎರಡೂ ರಾಜ್ಯಗಳಲ್ಲಿ 2 ದಿನಗಳ ಕಾಲ ಯಾವುದೇ ಸರ್ಕಾರ ಇಲ್ಲದಂತೆ ಆಗಲಿದೆ. ಹೀಗಾಗಿ ಇಲ್ಲಿ ಮತ ಎಣಿಕೆ 2 ದಿನ ಹಿಂದೂಡಲಾಗಿದೆ. ಉಳಿದಂತೆ ಆಂಧ್ರಪ್ರದೇಶ, ಒಡಿಶಾ ವಿಧಾನಸಭೆ ಹಾಗೂ ಲೋಕಸಭೆಯ 542 ಕ್ಷೇತ್ರಗಳ ಮತ ಎಣಿಕೆ ಜೂ.4ರಂದು ನಡೆಯಲಿದೆ.
ಅರುಣಾಚಲ ಪ್ರದೇಶ : ಅರುಣಾಚಲಪ್ರದೇಶದ 60 ಸ್ಥಾನಗಳ ಮತ ಎಣಿಕೆ ಭಾನುವಾರ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್, ಎನ್‌ಪಿಪಿ, ಎನ್‌ಸಿಪಿ ಪ್ರಮುಖವಾಗಿ ಸ್ಪರ್ಧಿಸಿವೆ. ಹಾಲಿ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಬಿಜೆಪಿಯ 10 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಭಾನುವಾರ 50 ಸ್ಥಾನಗಳ ಮತ ಎಣಿಕೆ ಮಾತ್ರ ನಡೆಯಲಿದೆ. ಹಾಲಿ ವಿಧಾನಸಭೆಯಲ್ಲಿ ಬಿಜೆಪಿ 41, ಜೆಡಿಯು 7, ಎನ್‌ಪಿಪಿ 5, ಕಾಂಗ್ರೆಸ್ 4 ಮತ್ತು ಇತರರು 3 ಸ್ಥಾನ ಹೊಂದಿವೆ.
ವಿವೇಕಾನಂದ ಸನ್ನಿಧಿಯಲ್ಲಿ ಮೋದಿ 3 ದಿನದ ಧ್ಯಾನ ಮುಕ್ತಾಯ
ಸಿಕ್ಕಿಂ: ಸಿಕ್ಕಿನ 32 ಸ್ಥಾನಗಳಿಗೆ ಆಡಳಿತಾರೂಢ ಎಸ್‌ಕೆಎಂ, ಎಸ್‌ಡಿಎಫ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇದೆ. ಹಾಲಿ ವಿಧಾನಸಭೆಯಲ್ಲಿ ಎಸ್‌ಡಿಎಫ್ (ಸಿಕ್ಕಿಂ ಡೆಮೊಕ್ರಟಿಕ್ ಫ್ರೆಂಟ್) 15, ಎಸ್‌ಕೆಎಂ (ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ) 17 ಸ್ಥಾನ ಹೊಂದಿವೆ.