Asianet Suvarna News Asianet Suvarna News

ಇಂದಿನ ಹ್ಯಾಟ್ರಿಕ್ 2024ರ ಲೋಕಸಭೆ ಹ್ಯಾಟ್ರಿಕ್ ಗೆಲುವಿನ ಗ್ಯಾರೆಂಟಿ, ಬಿಜೆಪಿ ಜಯಭೇರಿಗೆ ಮೋದಿ ಖುಷ್!

ಚುನಾವಣೆಗೂ ಮೊದಲು ಕಾಂಗ್ರೆಸ್ ಮಾಡಿದ ಹಲವು ಆರೋಪಗಳಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ಜಾತಿ ಮೂಲಕ ದೇಶ ಒಡೆಯಲು ಹಲವರು ಮುಂದಾಗಿದ್ದರು. ಆದರೆ ಮತದಾರರ ತಕ್ಕ ಉತ್ತರ ನೀಡಿದ್ದಾರೆ. ಇದು ಆತ್ಮನಿರ್ಭರತೆಯ ಗೆಲುವು ಎಂದು ಮೋದಿ ಬಣ್ಣಿಸಿದ್ದಾರೆ.
 

Assembly Election result 2023 BJPs hat trick win guaranteed 2024 lok sabha hat trick Win says PM Modi ckm
Author
First Published Dec 3, 2023, 8:18 PM IST

ನವದೆಹಲಿ(ಡಿ.03) ಪಂಚ ರಾಜ್ಯಗಳ ಫಲಿತಾಂಶ ಬೆನ್ನಲ್ಲೇ ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿ ಮೋದಿ ಮಾತಾಡಿದ್ದಾರೆ. ಮೂರು ರಾಜ್ಯದಲ್ಲಿನ ಅಭೂತಪೂರ್ವ ಗೆಲುವನ್ನು ಆತ್ಮನಿರ್ಭರತೆ ಗೆಲುವು ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಇದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸಕ್ಕೆ ಸಿಕ್ಕಿರುವ ಗೆಲುವು ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಮೂರು ರಾಜ್ಯ ಗೆಲ್ಲುವ ಮೂಲಕ ಇಂದು ಹ್ಯಾಟ್ರಿಕ್ ಗೆಲುವನ್ನು ಬಿಜೆಪಿ ದಾಖಲಿಸಿದೆ. ಕೆಲವರು ಇಂದಿನ ಹ್ಯಾಟ್ರಿಕ್ ಗೆಲುವು, 2024ರ ಲೋಕಸಭಾ ಚುನಾವಣೆಯ ಹ್ಯಾಟ್ರಿಕ್ ಗೆಲುವಿಗೆ ಮುನ್ನುಡಿ ಎಂದು ಬಣ್ಣಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಕಾರ್ಯಕರ್ತರ ಪರಿಶ್ರಮವನ್ನು ಮೆಚ್ಚಿದ ಪ್ರಧಾನಿ ಮೋದಿ, ಅಭೂತಪೂರ್ವ ಗೆಲುವಿಗೆ ಸಹಕರಿಸಿದ ಎಲ್ಲಾ ಮತದಾರರಿಗೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಜಾತಿಗಣತಿ ಹಾಗೂ  ಒಬಿಸಿ ರಾಜಕೀಯ ಅಸ್ತ್ರಕ್ಕೆ ತಿರುಗೇಟು ನೀಡಿದ್ದಾರೆ. ಕೆಲವರು ದೇಶವನ್ನು ಜಾತಿ ಅಸ್ತ್ರದ ಮೂಲಕ ಒಡೆಯಲು ಪ್ರಯತ್ನಿಸಿದರು. ಆದರೆ ಮತದಾರರ ತಕ್ಕ ಉತ್ತರ ನೀಡಿದ್ದಾರೆ ಎಂದಿದ್ದಾರೆ.

ವೆಂಕಟ ರಮಣನ ಶಾಕ್‌ಗೆ ಕಾಂಗ್ರೆಸ್-BRS ಕಂಗಾಲು; ಹಾಲಿ ,ಮುಂದಿನ ಸಿಎಂ ಸೋಲಿಸಿದ ಬಿಜೆಪಿ ನಾಯಕ!

ಪ್ರತಿ ಬಾರಿ ಜಾತಿ ವಿಚಾರ ಬಂದಾಗ , ನನಗೆ 4 ಜಾತಿಗಳು ಮಾತ್ರ ಕಾಣುತ್ತಿದೆ ಎಂದಿದ್ದೇನೆ. ನಾರಿ ಶಕ್ತಿ, ಯುವ ಶಕ್ತಿ, ರೈತ ಶಕ್ತಿ ಹಾಗೂ ಬಡ ಕುಟುಂಬ. ಇದು ನಾಲ್ಕು ಜಾತಿಗಳು. ಬಿಜೆಪಿ ಅಭಿವೃದ್ದಿ ಮುಂದಿಟ್ಟು ಮತ ಕೇಳಿತ್ತು. ಜನರು ಅಭಿವೃದ್ಧಿಗೆ ಮತ ಹಾಕಿದ್ದಾರೆ. ದೇಶವನ್ನು ಒಡೆಯಲು ಅವಕಾಶ ನೀಡಿಲ್ಲ ಎಂದು ಮೋದಿ ಹೇಳಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಘಡದಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ಧನ್ಯವಾದ ಹೇಳಿದ ಮೋದಿ, ತೆಲಂಗಾಣ ಜನತೆಗೂ ಧನ್ಯವಾದ ಹೇಳಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ತೆಲಂಗಾಣದಲ್ಲಿ ಬಿಜೆಪಿಯನ್ನು ಮತ್ತಷ್ಟು ಶಕ್ತಿಯುತವಾಗಿ ಬೇರೂರುವಂತೆ ಮಾಡಿದ್ದೀರಿ. ತೆಲಂಗಾಣ ಜನತೆಯೊಂದಿಗೆ ಸದಾ ಬಿಜೆಪಿ ನಿಲ್ಲಲಿದೆ ಎಂದು ಮೋದಿ ಹೇಳಿದ್ದಾರೆ.

ಚುನಾವಣಾ ಸೋಲಿನ ಬೆನ್ನಲ್ಲೇ ಇಂಡಿ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಸಂದೇಶ!

ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಮಣಿಸಿದ ಬಿಜೆಪಿ 115 ಸ್ಥಾನ ಗೆದ್ದುಕೊಂಡಿದೆ. ಕಾಂಗ್ರೆಸ್ 69 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮಧ್ಯಪ್ರದೇಶದಲ್ಲಿ ಶಿವರಜ್ ಸಿಂಗ್ ಚವ್ಹಾಣ್ ನೇತೃತ್ವದ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬರೋಬ್ಬರಿ 164 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್ 65 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ಛತ್ತಸಿಘಡದಲ್ಲಿ ಬಿಜೆಪಿ 54 ಸ್ಥಾನ ಗೆಲ್ಲುವ ಮೂಲಕ ಪೂರ್ಣ ಬಹುಮತ ಪಡೆದುಕೊಂಡಿದೆ. ಅಧಿಕಾರದಲ್ಲಿದ್ದ ಕಾಂಗ್ರೆಸ್ 35 ಸ್ಥಾನಕ್ಕೆ ಕುಸಿದಿದೆ.

Follow Us:
Download App:
  • android
  • ios